ಸಾಂದರ್ಭಿಕ ಚಿತ್ರ 
ರಾಜ್ಯ

ಅನೈತಿಕ ಸಂಬಂಧ ಹಿನ್ನೆಲೆ: ಬೆಳಗಾವಿ ಗ್ರಾಮ ಪಂಚಾಯಿತಿ ಸದಸ್ಯನ ಕಗ್ಗೊಲೆ

ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕಿತ್ತೂರು ತಾಲೂಕಿನ ದೇವಗಾಂವ ಗ್ರಾಮ ಪಂಚಾಯಿತಿ ಸದಸ್ಯನೋರ್ವನ ಕಣ್ಣಿಗೆ ಖಾರದ ಪುಡಿ ಎರಚಿ ಕೊಲೆ ಮಾಡಲಾಗಿದೆ. 

ಬೆಳಗಾವಿ:  ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕಿತ್ತೂರು ತಾಲೂಕಿನ ದೇವಗಾಂವ ಗ್ರಾಮ ಪಂಚಾಯಿತಿ ಸದಸ್ಯನೋರ್ವನ ಕಣ್ಣಿಗೆ ಖಾರದ ಪುಡಿ ಎರಚಿ ಕೊಲೆ ಮಾಡಲಾಗಿದೆ. 

ಚನ್ನಮ್ಮನ ಕಿತ್ತೂರು ತಾಲೂಕಿನ ಬಸರಖೋಡ ಗ್ರಾಮದ ಬಸವರಾಜ ರುದ್ರಪ್ಪ ದೊಡಮನಿ (35) ಕೊಲೆಯಾದವರು.

ಬಸರಖೋಡ ಗ್ರಾಮದ ಗೋಪಾಲ ಕಲ್ಲಪ್ಪ ಪಾಗಾದ (36), ಮಹಾಂತೇಶ ಕಲ್ಲಪ್ಪ ಪಾಗಾದ (32) ಮತ್ತು ರುಕ್ಮಿಣಿ ಗೋಪಾಲ ಪಾಗಾದ ಎನ್ನುವವರು ಬಸವರಾಜ ದೊಡಮನಿಯನ್ನು ಕೊಲೆ ಮಾಡಿ ಪರಾರಾಯಾಗಿದ್ದಾರೆ.

ಕಣ್ಣೆಗೆ ಖಾರದ ಪುಡಿ ಎರಚಿ ನಂತರ ಆತನ ಮೇಲೆ ಮಾಡಿದ್ದಾರೆ. ತೀವ್ರ ರಕ್ತಸ್ರಾವದ ಮಡುವಿನಲ್ಲಿಬಿದ್ದಿದ್ದ ಬಸವರಾಜ ಅವರನ್ನು ಬೆಳಗ್ಗೆ ಚನ್ನಮ್ಮನ ಕಿತ್ತೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃಪಟ್ಟಿದ್ದಾರೆ. 

ಅನೈತಿಕ ಸಂಬಂಧ ಕುರಿತು ಮೊಬೈಲ್‌ ಸಂಭಾಷಣೆ ಮತ್ತು ಕೆಲ ಪೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿವೈರಲ್‌ ಮಾಡುವುದಾಗಿ ಬಸವರಾಜ ದೊಡಮನಿ ಬೆದರಿಕೆ ಹಾಕಿದ್ದರಿಂದ ಆರೋಪಿಗಳು ಯೋಜನೆ ರೂಪಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅನಂತ್ ನಾಗ್​ಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ; ಸ್ಟ್ಯಾಂಡಿಂಗ್ ಒವೇಶನ್; ರಕ್ಷಿತ್​ ಶೆಟ್ಟಿ ನಿರ್ಮಾಣದ 'ಮಿಥ್ಯ'ಗೆ 3 ರಾಷ್ಟ್ರ ಪ್ರಶಸ್ತಿ! Video

ಗಣೇಶೋತ್ಸವ ಸಂಭ್ರಮಾಚರಣೆಗೆ ಬಾಂಬೆ ಹೈಕೋರ್ಟ್ ಬ್ರೇಕ್​! ರಸ್ತೆಗಳಲ್ಲಿ ಪಟಾಕಿ ಹಚ್ಚುವಂತಿಲ್ಲ; ಸಂಪೂರ್ಣ ನಿಷೇಧ!

'ಶಾರುಖ್ ಖಾನ್‌ಗೆ ಏನಾಯಿತು?' ನಡೆಯಲು ಕಷ್ಟಪಡುತ್ತಿರುವ ಖ್ಯಾತ ನಟ, Video ವೈರಲ್, ಅಭಿಮಾನಿಗಳಲ್ಲಿ ಆತಂಕ!

ದೆಹಲಿ ಗಲಭೆ ಆರೋಪಿ ಶಾರ್ಜೀಲ್ ಇಮಾಮ್‌ಗೆ 7 ದಿನ ಮಧ್ಯಂತರ ಜಾಮೀನು!

ಜನರ ಎದುರೇ ರೈಲಿನಲ್ಲಿ ದಂಪತಿಯ ಅಸಭ್ಯ ವರ್ತನೆ: ಇದರಿಂದ ಕೆರಳಿದ ಮಹಿಳೆ ಮಾಡಿದ್ದೇನು? ವಿಡಿಯೋ ನೋಡಿ!