ರಾಜ್ಯ

'ಸುಪ್ರೀಂ' ಆದೇಶ ನಗಣ್ಯ: ಬೈಪಾಸ್ ಹೈವೆಗಳಾಗಿವೆ ರಾಷ್ಟ್ರೀಯ ಹೆದ್ದಾರಿಗಳು; ಎಗ್ಗಿಲ್ಲದೆ ನಡೆಯುತ್ತಿವೆ ಮದ್ಯದಂಗಡಿಗಳು!

Sumana Upadhyaya

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಯ 500 ಮೀಟರ್ ಸುತ್ತಮುತ್ತ ವ್ಯಾಪ್ತಿಯಲ್ಲಿ ಮದ್ಯದ ಅಂಗಡಿ ತೆರೆಯಬಾರದು ಎಂದು 2017ರಲ್ಲಿ ಆದೇಶ ನೀಡಿತ್ತು. ಆದರೆ ರಾಜ್ಯ ಸರ್ಕಾರ ಈ ಆದೇಶವನ್ನು ಪಾಲಿಸುವಂತೆ ಕಾಣುತ್ತಿಲ್ಲ. ರಾಜ್ಯ ಸರ್ಕಾರಕ್ಕೆ ಮುಖ್ಯವಾಗಿ ಆದಾಯ ಬರುವುದೇ ಅಬಕಾರಿ ಸುಂಕದಿಂದ.ಹೀಗಾಗಿ ಕೆಲವು ರಾಷ್ಟ್ರೀಯ ಹೆದ್ದಾರಿಗಳನ್ನು ಲಿಕ್ಕರ್ ಶಾಪ್ ಗೋಸ್ಕರವೇ ರಾಜ್ಯ ಹೆದ್ದಾರಿಯನ್ನಾಗಿ ಪರಿವರ್ತಿಸಲಾಗಿದೆ. 


ಈ ವಿಚಾರ ನಿನ್ನೆ ವಿಧಾನಸಭೆ ಕಲಾಪದ ವೇಳೆ ಚರ್ಚೆಗೆ ಬಂತು. ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರೇ ಸರ್ಕಾರದ ತಪ್ಪನ್ನು ಒಪ್ಪಿಕೊಂಡಿದ್ದಾರೆ.ಹೀಗೆ ಕೆಳದರ್ಜೆಗೆ ಇಳಿಸಲಾಗಿರುವ ಹೆದ್ದಾರಿಗಳನ್ನು ಲೋಕೋಪಯೋಗಿ ಇಲಾಖೆಯಾಗಲಿ, ಪೌರಾಡಳಿತ ಅಥವಾ ಗ್ರಾಮೀಣಾಭಿವೃದ್ಧಿ ಇಲಾಖೆಯಾಗಲಿ ನಿರ್ವಹಿಸುತ್ತಿಲ್ಲ,


ಅರಸೀಕೆರೆ ಶಾಸಕ ರೆ ಎಂ ಶಿವಲಿಂಗೇ ಗೌಡ, ಬಂಡೆಪ್ಪ ಕಾಶೆಂಪುರ ಅವರ ಪರವಾಗಿ ಸದನದಲ್ಲಿ ನಿನ್ನೆ ಈ ವಿಷಯವನ್ನು ಎತ್ತಿದರು. ಬೀದರ್ ನಲ್ಲಿ ಹುಮ್ನಾಬಾದ್-ಹೈದರಾಬಾದ್ ಹೆದ್ದಾರಿಯನ್ನು ಕೆಳದರ್ಜೆಗೆ ಇಳಿಸಲಾಗಿದೆ ಎಂದರು. ಬೀದರ್ ನ ಮುಲ್ಲಕೆಹಳ್ಳಿಯ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ನಲ್ಲಿ 3 ಕಿಲೋ ಮೀಟರ್ ದಾರಿಯನ್ನು ಕೆಳದರ್ಜೆಗೆ ಇಳಿಸಲಾಗಿದ್ದು ಸ್ಥಳೀಯ ಆಡಳಿತಕ್ಕೆ ನಿರ್ವಹಣೆಗೆ ಕೊಡಲಾಗಿದೆ. ಈ ರಸ್ತೆಯನ್ನು ಪ್ರಸ್ತುತ ನಿರ್ಲಕ್ಷ್ಯ ಮಾಡಲಾಗುತ್ತಿದ್ದು ಇಲ್ಲಿ ಮದ್ಯದಂಗಡಿಗಳಿವೆ. ಲೋಕೋಪಯೋಗಿ ಇಲಾಖೆಯಾಗಲಿ, ಸ್ಥಳೀಯ ಆಡಳಿತವಾಗಲಿ ಜಾಗ್ರತೆ ವಹಿಸುತ್ತಿಲ್ಲ ಎಂದರು.


ಇದಕ್ಕೆ ಸಚಿವ ಕಾರಜೋಳ ಉತ್ತರಿಸಿ, ಲಿಕ್ಕರ್ ಶಾಪ್ ಗಳಿಗೆ ಅನುಕೂಲವಾಗಲು ಹಲವು ರಾಷ್ಟ್ರೀಯ ಹೆದ್ದಾರಿಗಳನ್ನು ಕೆಳದರ್ಜೆಗೆ ಇಳಿಸಲಾಗಿದೆ. ಇವುಗಳು ಈಗ ರಾಷ್ಟ್ರೀಯ ಹೆದ್ದಾರಿಗಳಾಗಿ ಉಳಿದಿಲ್ಲ. ಲೋಕೋಪಯೋಗಿ ಇಲಾಖೆ ಅದರ ಉಸ್ತುವಾರಿ ನೋಡಿಕೊಳ್ಳುತ್ತಿಲ್ಲ ಎಂದರು. ಆದರೆ ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದು ರಸ್ತೆ ನಿರ್ವಹಿಸುವಂತೆ ಕೋರುತ್ತೇವೆ, ಈ ರಸ್ತೆಯನ್ನು ಸ್ಥಳೀಯ ಪೌರಾಡಳಿತ ಮತ್ತು ಪಂಚಾಯತ್ ಗಳಿಗೆ ವಹಿಸಲಾಗಿದೆ ಎಂದರು.
ಮದ್ಯದಂಗಡಿ ಮಾಲೀಕರ ಒತ್ತಡಕ್ಕೆ ಬಿದ್ದು ಹೆದ್ದಾರಿಗಳನ್ನು ಕೆಳದರ್ಜೆಗೆ ಇಳಿಸಲಾಗುತ್ತದೆ. ಅವರಿಗೆ ಬೇಕಾಗಿ ರಸ್ತೆಯನ್ನು ಕೆಳದರ್ಜೆಗೆ ಇಳಿಸಿದರೆ ಅವರಿಂದ ಹಣ ಸಂಗ್ರಹಿಸಿ ರಸ್ತೆಗಳ ಅಭಿವೃದ್ಧಿಗೆ ಬಳಸಿ ಎಂದು ಕಾಂಗ್ರೆಸ್ ನಾಯಕ ಕೆ ಆರ್ ರಮೇಶ್ ಕುಮಾರ್ ಹೇಳಿದರು.


ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್ ಸಂತೋಷ್ ಹೆಗ್ಡೆ, ರಾಷ್ಟ್ರೀಯ ಹೆದ್ದಾರಿ ಕಾಯ್ದೆ ಪ್ರಕಾರ ರಸ್ತೆಯ ಎರಡೂ ಬದಿಗಳಲ್ಲಿ 50 ಮೀಟರ್ ಸರಹದ್ದಿನಲ್ಲಿ ಯಾವುದೇ ಕಟ್ಟಡಗಳಿರಬಾರದು. ಇಲ್ಲಿ ಕಡಿಮೆ ಜನ ಸಂಚಾರವಿದ್ದು ಸಂಚಾರ ದಟ್ಟಣೆ ಉಂಟಾಗಬಾರದು ಎಂಬುದು ಉದ್ದೇಶ. ಆದರೆ ನಮ್ಮ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಎರಡೂ ಕಡೆಗಳಲ್ಲಿ ಕಟ್ಟಡ ನಿರ್ಮಿಸುತ್ತಾರೆ. ಹೆದ್ದಾರಿಗಳಲ್ಲಿ ಸ್ಪೀಡ್ ಬ್ರೇಕರ್ ನಿರ್ಮಿಸಿ ಮೂಲ ಉದ್ದೇಶವೇ ಮಾಯವಾಗಿದೆ ಎಂದು ಆರೋಪಿಸಿದರು.


ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಟೌನ್ ಷಿಪ್ ಹತ್ತಿರ ಬೈಪಾಸ್ ರಸ್ತೆಗಳನ್ನು ನಿರ್ಮಿಸುವ ಬದಲು ಸರ್ಕಾರ ಸುಪ್ರೀಂ ಕೋರ್ಟ್ ಆದೇಶವನ್ನೇ ಉಲ್ಲಂಘಿಸಿದೆ.

SCROLL FOR NEXT