ರಾಜ್ಯ

ಕರಗ ಉತ್ಸವಕ್ಕೆ ಕೊರೋನಾ ಅಡ್ಡಿಯಾಗದು, ಸಂಪ್ರದಾಯದಂತೆ ಆಚರಣೆ; ಮೇಯರ್ ಗೌತಮ್ ಕುಮಾರ್

Srinivas Rao BV

ಬೆಂಗಳೂರು: ರಾಜ್ಯದಲ್ಲಿ ಕಾಣಿಸಿಕೊಂಡಿರುವ ಕೊರೋನಾ ವೈರಾಣು ಸೋಂಕು ಭೀತಿಯ ನಡುವೆಯೂ ಈ ವರ್ಷದ ಐತಿಹಾಸಿಕ ಕರಗ ಉತ್ಸವ ವಿಜೃಂಭಣೆಯಿಂದ ನಡೆಯಲಿದೆ ಎಂದು ಮೇಯರ್ ಗೌತಮ್ ಕುಮಾರ್ ಜೈನ್ ಹೇಳಿದ್ದಾರೆ. 

ಕರಗ ಆಚರಣೆ ಸಮಿತಿಯವರು ಹಾಗೂ ಅಧಿಕಾರಿಗಳ ಜೊತೆ ಬುಧವಾರ ಸಭೆ ನಡೆಸಿದ ಅವರು, ಉತ್ಸವದ ವೇಳೆ ಕೊರೋನಾ ಸೋಂಕು ಹಾಗೂ ಕಾಲರಾ ಹಬ್ಬದಂತೆ ತಡೆಯಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ವರ್ಷವೂ ಎಂದಿನಂತೆ ಕರಗ ನಡೆಯಲಿದೆ. ಕರಗ ಮಹೋತ್ಸವ ಒಂದು ಸಂಪ್ರದಾಯಿಕ, ಪಾರಂಪಾರಿಕವಾದ ಆಚರಣೆ. ಅದನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಪಾಲಿಕೆ ವತಿಯಿಂದ ಇದಕ್ಕೆ ಎಲ್ಲಾ ಸಿದ್ದತೆಗಳನ್ನ ಮಾಡಿಕೊಳ್ಳಲಾಗುತ್ತಿದೆ ಎಂದರು. 

ತಾವು ಗುರುವಾರ ಬೆಳಗ್ಗೆ 7ಕ್ಕೆ ದೇವಸ್ಥಾನಕ್ಕೆ ಭೇಟಿ ನೀಡಿ, ಸ್ವಚ್ಛತಾ ಕ್ರಮಗಳ ಕುರಿತು ಪರಿಶೀಲನೆ ನಡೆಸಲಿದ್ದೇವೆ ಎಂದರು. 

ಪಾಲಿಕೆ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಮಾತನಾಡಿ, ಕೊರೋನಾ ವೈರಾಣು ಹರಡದಂತೆ ತಡೆಯುವ ಜವಾಬ್ದಾರಿಯೂ ನಮ್ಮ ಮೇಲಿದೆ. ಇದಕ್ಕಾಗಿ ಕರಗ ಸಾಗುವ ಮಾರ್ಗದಲ್ಲಿ ಶುಚಿತ್ವ ಕಾಪಾಡಲು ನಿಗಾ ವಹಿಸಲಾಗುವುದು. ಕರಗಕ್ಕೆ ಇನ್ನೂ ಒಂದು ತಿಂಗಳ ಸಮಯವಿದೆ. ಅಂದಿನ ಪರಿಸ್ಥಿತಿ ನೋಡಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು. 

ವಿಧಾನಪರಿಷತ್ ಸದಸ್ಯ ಪಿ.ಆರ್ ರಮೇಶ್ ಮಾತನಾಡಿ, ಏ.8ರಂದು ಕರಗ ನಡೆಯಲಿದೆ. ಸಿದ್ಧತೆಗೆ ಸಾಕಷ್ಟು ಸಮಯವಿದೆ. ಈ ಹಿಂದೆ ಲೇಗ್ ನಂತಹ ಮಹಾಮಾರಿ ಬಂದ ಸಮಯದಲ್ಲೂ ಕರಗ ನಿಲ್ಲಿಸಿಲ್ಲ. ಸ್ವಾತಂತ್ರ್ಯಪೂರ್ವದ ನಿಷೇಧಾಜ್ಞೆ ನಡುವೆಯೂ ಕರಗ ಆಚರಿಸಲಾಗಿದೆ. ದ್ರೌಪದಿ ದೇವಿಯ ಶಕ್ತಿಯಿಂದ ಆಚರಣೆಗೆ ಯಾವುದೇ ಸಮಸ್ಯೆ ಆಗೋದಿಲ್ ಎಂದು ವಿಶ್ವಾಸ ವ್ಯಕ್ತಪಡಿಸಿದರು.
 

SCROLL FOR NEXT