ಸಂಗ್ರಹ ಚಿತ್ರ 
ರಾಜ್ಯ

6-9ನೇ ತರಗತಿ ಮಕ್ಕಳಿಗೆ ಕೊರೋನಾ ವೈರಸ್ ಬರುವುದಿಲ್ಲವೇ?: ಸರ್ಕಾರಕ್ಕೆ ಪೋಷಕರ ಪ್ರಶ್ನೆ

ದೇಶದಲ್ಲೇ ಕೊರೋನಾಗೆ ಮೊದಲ ಬಲಿ ನಮ್ಮ ರಾಜ್ಯದಲ್ಲಿ ಆಗಿರುವ ಹಿನ್ನೆಲೆಯಲ್ಲಿ ವೈರಸ್ ಕುರಿತು ಮತ್ತಷ್ಟು ಕ್ರಮಗಳನ್ನು ಕೈಗೊಂಡಿರುವ ರಾಜ್ಯ ಸರ್ಕಾರ, ಪೂರ್ವಪ್ರಾಥಮಿಕ ತರಗತಿಯಿಂದ 5ನೇ ತರಗತಿ ಮಕ್ಕಳಿಗೆ ಮಾತ್ರ ರಜೆ ಘೋಷಣೆ ಮಾಡಿರುವುದು ಟೀಕೆಗಳಿಗೆ ಕಾರಣವಾಗಿದೆ. 

ಬೆಂಗಳೂರು: ದೇಶದಲ್ಲೇ ಕೊರೋನಾಗೆ ಮೊದಲ ಬಲಿ ನಮ್ಮ ರಾಜ್ಯದಲ್ಲಿ ಆಗಿರುವ ಹಿನ್ನೆಲೆಯಲ್ಲಿ ವೈರಸ್ ಕುರಿತು ಮತ್ತಷ್ಟು ಕ್ರಮಗಳನ್ನು ಕೈಗೊಂಡಿರುವ ರಾಜ್ಯ ಸರ್ಕಾರ, ಪೂರ್ವಪ್ರಾಥಮಿಕ ತರಗತಿಯಿಂದ 5ನೇ ತರಗತಿ ಮಕ್ಕಳಿಗೆ ಮಾತ್ರ ರಜೆ ಘೋಷಣೆ ಮಾಡಿರುವುದು ಟೀಕೆಗಳಿಗೆ ಕಾರಣವಾಗಿದೆ. 

ಕೊರೋನಾ ವೈರಸ್ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿಯಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ರದ್ದುಪಡಿಸಿದ್ದ ಸರ್ಕಾರ ಬೇಸಿಗೆ ರಜೆ ಘೋಷಣೆ ಮಾಡಿದ್ದು. ಅಲ್ಲದೆ. 6ರಿಂದ 7ನೇ ತರಗತಿ ಮಕ್ಕಳಿಗೆ ರಜೆ ಘೋಷಣೆ ಮಾಡಿ, ಪರೀಕ್ಷೆಗಳಿಗೆ ಮಾತ್ರ ಹಾಜರಾಗಬೇಕೆಂದು ತಿಳಿಸಿತ್ತು. 

ಸರ್ಕಾರದ ಈ ಕ್ರಮ ಇದೀಗ 6-9ನೇ ತರಗತಿ ಮಕ್ಕಳ ಪೋಷಕರ ಕಣ್ಣು ಕೆಂಪಗಾಗುವಂತೆ ಮಾಡಿದೆ. 6ರಿಂದ 9ನೇ ತರಗತಿಯ ಮಕ್ಕಳು ಮಕ್ಕಳಲ್ಲವೇ? ಅವರಿಗೇನು ವೈರಸ್ ಬರುವುದಿಲ್ಲವೇ ಎಂದು ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. 

ಮಾರತಳ್ಳಿ ನಿವಾಸಿ ರೀತು ಶಾಮಾ ಮಾತನಾಡಿ, ನನ್ನ ಮಗಳು ನಗರದ ಶಾಲೆಯೊಂದರಲ್ಲಿ 7ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದಾಳೆ. ಪರೀಕ್ಷೆಗೆ ಹಾಜರಾದ ಬಳಿಕ ಮನೆಗೆ ಬರುತ್ತಿದ್ದಾಳೆ. ಮಗಳ ಸುರಕ್ಷತೆ ನನಗೆ ಆತಂಕವನ್ನು ಸೃಷ್ಟಿಸಿದೆ. ಆಕೆ ಹೊರಗೆ ಹೋಗುತ್ತಿದ್ದಂತೆ ದೇವರಲ್ಲಿ ಪ್ರಾರ್ಥನೆ ಮಾಡುತ್ತಿರುತ್ತೇನೆ. ಕೇವಲ 5ನೇ ತರಗತಿವರೆಗಿನ ಮಕ್ಕಳಿಗೆ ಮಾತ್ರ ಶಾಲೆಯನ್ನೇಕೆ ಸರ್ಕಾರ ಬಂದ್ ಮಾಡಿಸಿತು. ಎಂಬುದು ನನಗೆ ಅರ್ಥವಾಗುತ್ತಿಲ್ಲ. ಮಾಡುವುದಿದ್ದರೆ 9ನೇ ತರಗತಿವರೆಗೂ ಮಾಡಬಹುದಿತ್ತು ಎಂದು ಹೇಳಿದ್ದಾರೆ. 

ಪ್ರವೀಣ್ ಕುಮಾರ್ ಎಂಬುವವರು ಮಾನತಾಡಿ, ನನ್ನ ಮಗ 8ನೇ ತರಗತಿ ಓದುತ್ತಿದ್ದಾನೆ. ಅಧಿಕಾರಿಗಳು ಪರೀಕ್ಷೆಯನ್ನು ಮುಂದೂಡಬಹುದಿತ್ತು. ಇಲ್ಲವೇ ಆನ್ ಲೈನ್ ಮೂಲಕ ಪರೀಕ್ಷೆ ನಡೆಸಬಹುದಿತ್ತು. ಪರೀಕ್ಷಾ ಕೊಠಡಿಯಲ್ಲಿ ಮಕ್ಕಳೆಲ್ಲರೂ ಒಂದೆಡೆ ಕುಳಿತು ಪರೀಕ್ಷೆ ಬರೆಯುತ್ತಾರೆ. ಈ ವೇಳೆ ವೈರಸ್ ಹರಡುವ ಸಾಧ್ಯತೆಗಳಿರುತ್ತವೆ. ಸರ್ಕಾರ ಈಗಾಗಲೇ ಸ್ಥಳದಲ್ಲಿ ಸ್ವಚ್ಛತೆ ಕಾಪಾಡುವಂತೆ ಸೂಚಿಸಿದೆ. ಆದರೂ, ಮಕ್ಕಳು ವೈರಸ್ ಇರುವಂತರ ಸ್ಥಳಗಳನ್ನು ಮುಟ್ಟುವುದೇ ಹೆಚ್ಚು. ಸರ್ಕಾರ ಸುಮ್ಮನೆ ರಜೆ ಘೋಷಣೆ ಮಾಡುವುದು ಉತ್ತಮ. ಪರೀಕ್ಷೆಗಳಿಂದಾಗಿ ಪೋಷಕರಿಗೂ ಭಯ, ಮಕ್ಕಳ ಜೀವಕ್ಕೂ ಅಪಾಯ ಎಂದು ತಿಳಿಸಿದ್ದಾರೆ. 

ಅವಳಿ ಮಕ್ಕಳ ತಾಯಿಯಾಗಿರುವ ಸಾಗರಿಕಾ ಎಂಬುವವರು ಮಾತನಾಡಿ, ಇಂತಹ ನಿರ್ಧಾರ ರಾಜ್ಯ ಸರ್ಕಾರ ಮೂರ್ಖತನವನ್ನು ತೋರಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪರೀಕ್ಷೆ ಮುಂದುವರೆಸುವ ಅಗತ್ಯವಾದರೂ ಏನಿದೆ? ವಿದ್ಯಾರ್ಥಿಗಳು ಬಸ್ಸಿನಲ್ಲಿ ಪ್ರಯಾಣಿಸುತ್ತಾರೆ. ಹೆಚ್ಚೆಚ್ಚು ಜನರಿರುವ ಪ್ರದೇಶಗಳಲ್ಲಿ ಇರುತ್ತಾರೆ. ಇದು ಆತಂಕವನ್ನು ಹೆಚ್ಚಿಸುತ್ತದೆ. ಪರೀಕ್ಷೆ ಕಡ್ಡಾಯವಾಗಿರುವುದರಿಂದ ಅವರನ್ನು ತಡೆಯಲು ನಮಗೆ ಸಾಧ್ಯವಾಗುವುದಿಲ್ಲ. ಈಗಾಗಲೇ ಸಾಕಷ್ಟು ಪೋಷಕರು ಯಡಿಯೂರಪ್ಪ ಅವರಿಗೆ ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಪರಿಸ್ಥಿತಿ ಸುಧಾರಿಸುವವರೆಗೂ ತರಗತಿ, ಪರೀಕ್ಷೆಗಳನ್ನು ರದ್ದುಪಡಿಸುವಂತೆ ತಿಳಿಸುತ್ತಿದ್ದಾರೆಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್