ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಸೋಮವಾರ ಒಂದೇ ದಿನ ಬೆಂಗಳೂರಿನಲ್ಲಿ ಇಬ್ಬರು ಹಾಗೂ ಕಲಬುರಗಿಯಲ್ಲಿ ಒಬ್ಬರು ಸೇರಿದಂತೆ ಮೂವರಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ ಬರೋಬ್ಬರಿ 10ಕ್ಕೆ ಏರಿಕೆಯಾಗಿದೆ.
ಸೋಮವಾರ ಸಂಜೆ ವೇಳೆಗೆ ಬೆಂಗಲೂರು ಮೂಲದ 32 ವರ್ಷದ ಮತ್ತೊಬ್ಬ ಟೆಕ್ಕಿಗೆ ಕೊರೋನಾ ಸೋಂಕು ತಗುಲಿರುವುದು ದೃಫಟ್ತಿದೆ. ಬಳಿಕ ಸೋಮವಾರ ತಡರಾತ್ರಿ ಮತ್ತಿಬ್ಬರ ಕೊರೋನಾ ಸೋಂಕು ಪರೀಕ್ಷಾ ವರದಿ ಹೊರಬಿದ್ದಿದ್ದು, ಇಬ್ಬರಿಗೂ ಸೋಂಕು ತಗುಲಿರುವುದು ಸಾಬೀತಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಹೊಸದಾಗಿ ಸೋಂಕು ದೃಢಪಟ್ಟ ಮೂವಕ ಪೈಕಿ ಒಬ್ಬ ಬೆಂಗಲೂರು ಟೆಕ್ಕಿ (32) ಈಗಾಗಲೇ ಸೋಂಕಿತ ಎಂದು ಘೋಷಿಸಲಾಗಿರುವ 50 ವರ್ಷದ (4ನೇ ಸೋಂಕಿತ)ಟೆಕ್ಕಿಯ ಸಹೋದ್ಯೋಗಿಯಾಗಿದ್ದು, ಮ.8ರಂದು ಈ ಇಬ್ಬರೂ ಒಂದೇ ವಿಮಾನದಲ್ಲಿ ಲಂಡನ್'ನಿಂದ ಬೆಂಗಳೂರಿಗೆ ಆಗಮಿಸಿದ್ದರು. ಘೋಷಿತ ಸೋಂಕಿತ ಟೆಕಿಯು ರಾಜ್ಯದ ನಾಸಲ್ಕನೇ ಸೋಂಕಿತ ವ್ಯಕ್ತಿಯಾಗಿದ್ದರು.
ನಗರಕ್ಕೆ ಹಿಂತಿರುಗಿದ ವೇಳೆ ಸೋಂಕು ಕಾಣಿಸಿಕೊಂಡ ನಂತರ ವಿಮಾನ ನಿಲ್ದಾಣದಿಂದ ನೇರವಾಗಿ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲು ಮಾಡಿ ಪರೀಕ್ಷೆ ನಡೆಸಿ ಮನೆಗೆ ವಾಪಸು ಕಳುಹಿಸಲಾಗಿತ್ತು. ಮಾ.9ರಂದು ರೋಗದ ಲಕ್ಷಣಗಳು ಗೋಚರಿಸಿದ್ದರಿಂದ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಗೆ ಆಗಮಿಸಿದ್ದ ವ್ಯಕ್ತಿಗೆ ಎರಡನೇ ಪರೀಕ್ಷೆ ವೇಳೆ ಕೂಡಲೇ ಸೋಂಕು ದೃಢಪಟ್ಟಿತ್ತು. ಆದರೆ, ಅವರ ಜೊತೆಯಲ್ಲಿಯೇ ಅಮೆರಿಕಾದಿಂದ ಲಂಡನ್'ಗೆ ಆಗಮಿಸಿದ್ದ ವ್ಯಕ್ತಿಯಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಕಕಂಡಿರಲಿಲ್ಲ. ಹೀಗಾಗಿ ಮಾ.8ರಂದು ಮಧ್ಯಾಹ್ನ 2.30ಕ್ಕೆ ಆಸ್ಪತ್ರೆಯಲ್ಲಿ ಮಾದರಿ ಸಂಗ್ರಹಿಸಲಾಗಿತ್ತು.
ಈ ವೇಳೆ ಸೋಂಕು ದೃಢಪಡದ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಪ್ರತ್ಯೇಕವಾಗಿರುವಂತೆ ಸೂಚಿಸಲಾಗಿತ್ತು. ಈ ವ್ಯಕ್ತಿಗೆ ಈಗ ರೋಗದ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಇದೀಗ ಎರಡನೇ ಹಂತದ ಪರೀಕ್ಷೆ ಮಾಡಲಾಗಿದ್ದು. ಈ ವೇಳೆ ಸೋಂಕು ದೃಫಟ್ಟಿದೆ. ಪ್ರಸ್ತುತ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ವಿದೇಶಿ ಪ್ರಯಾಣಿಕರ ಟ್ರ್ಯಾಕ್ ಮಾಡಲು ಐವಿಆರ್'ಎಸ್ ತಂತ್ರ ಬಳಕೆ
ಬೆಂಗಳೂರು ಮತ್ತು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಮೂಲಕ ರಾಜ್ಯಕ್ಕೆ ಆಗಮಿಸಿರುವ ವಿದೇಶಿ ಪ್ರಯಾಣಿಕರನ್ನು ಟ್ರ್ಯಾಕ್ ಮಾಡಲು ದೇಶದಲ್ಲಿಯೇ ಮೊದಲ ಬಾರಿದೆ ಐವಿಆರ್'ಎಸ್ ವ್ಯವಸ್ಥೆ ಬಳಕೆ ಮಾಡಲು ಆರಂಭಿಸಲಾಗಿದೆ.
ಜೊತೆಗೆ ರಾಜ್ಯದಲ್ಲಿ ಪ್ರಸ್ತುತ ಒಂದು ಹಾಗೂ ಎರಡನೇ ಹಂತದ ನಡುವೆ ಇರುವ ಕೊರೋನಾ ಸೋಂಕು ಮುಂದಿನ ಹಂತಕ್ಕೆ ಹೋಗದಂತೆ ತಡೆಯಲು ಎಲ್ಲಾ ರೀತಿಯ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರು ತಿಳಿಸಿದ್ದಾರೆ.
ನಗರಗಳಿಗೆ ಆಗಮಿಸಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಮೂಲಕ ಕಳೆದ 14 ದಿನಗಳಲ್ಲಿ ರಾಜ್ಯಕ್ಕೆ ಆಗಮಿಸಿರುವ 42 ಸಾವಿರ ವಿದೇಶಿ ಪ್ರಯಾಣಿಕರನ್ನು ಒಂದೇ ವೇಳೆ ಸಂಪರ್ಕಿಸಿ ಅವರ ಆರೋಗ್ಯದ ಸ್ಥಿತಿ ಬಗ್ಗೆ ಮಾಹಿತಿ ಕಲೆ ಹಾಕಲು ಐವಿಆರ್'ಎಸ್ ವ್ಯವಸ್ಥೆ ಬಳಸುತ್ತಿದ್ದೇವೆ. ದೇಶದಲ್ಲೇ ಇಂತಹ ತಂತ್ರಜ್ಞಾನದ ಬಳಕೆಗೆ ಮುಂದಾಗುತ್ತಿರುವ ಮೊದಲ ರಾಜ್ಯ ನಮ್ಮದಾಹಿಗೆ, ವಿದೇಶಿ ಪ್ರಯಾಣಿಕರನ್ನು ತಪಾಸಣೆ ನಡಸಿ ಸ್ವಯಂಘೋಷಣೆ ಪತ್ರದ ಮೂಲಕ ಅವರ ದೂರವಾಣಿ ಸಂಖ್ಯೆ, ಇ-ಮೇಲ್, ಮನೆ ವಿಳಾಸ ಹಾಗೂ ಆರೋಗ್ಯ ವಿವರಗಳನ್ನು ತೆಗೆದುಕೊಂಡಿದ್ದೇವೆ. ಈ ಸಂಪರ್ಕ ಸಂಖ್ಯೆಗಳ ಆಧಾರದ ಮೇಲೆ ಅಷ್ಟೂ ಮಂದಿಯನ್ನು ಒಂದೇ ಬಾರಿ ಐವಿಆರ್'ಎಸ್ ಮೂಲಕ ಸಂಪರ್ಕಿಸಬಹುದು. ಈ ಮೂಲಕ 42 ಸಾವಿರ ಮಂದಿಯ ಆರೋಗ್ಯ್ ವಿವರ ಒಂದೇ ಬಾರಿಗೆ ಕಲೆ ಹಾಕಲು ಸಾಧ್ಯವಿದೆ ಎಂದರಪು.
ವಾರ್ ರೂಂ ಸಿದ್ಧತೆ
ರಾಜ್ಯದಲ್ಲಿ ಪ್ರಸ್ತುತ ಕೊರೋನಾ ಸೋಂಕು ಒಂದು ಹಾಗೂ ಎರಡನೇ ಹಂತದ ನಡುವೆ ಇದೆ. ಇದು ಮುಂದಿನ ಹಂತಕ್ಕೆ ಹೋಗದಂತೆ ತಡೆಯಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಒಂದು ವೇಳೆ ಸೋಂಕು ಮುಂದಿನ ಹಂತ ತಲುಪಿದರೆ ಉಂಟಾಗಬಹುದಾದ ತೀವ್ರತೆ ಎದುರಿಸಲು ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲದೆ ಹೆಚ್ಚುವರಿ ವೈದ್ಯಕೀಯ ವ್ಯವಸ್ಥೆ ಕಲ್ಪಿಸಲು ಖಾಲಿ ಕಟ್ಟಡಗಳನ್ನು ಗುರುತಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿರುವಂತೆ ಮೊಲದ ಹಂತ ಎಂದರೆ ಬೇರೆ ದೇಶದಿಂದ ಕೊರೋನಾ ಸೋಂಕಿತರು ದೇಶಕ್ಕೆ ಆಗಮಿಸುವುದು. ಎರಡನೇ ಹಂತ ಎಂದರೆ ದೇಶದಿಂದ ಬಂದ ಸೋಂಕಿತರಿಂದ ಸ್ಥಳೀಯರಿಗೆ ಸೋಂಕು ತಗಲುವುದು. 3ನೇ ಹಂತವೆಂದರೆ ಒಂದು ಸಮುದಾಯಕ್ಕೆ ಕೊರೋನಾ ಸೋಂಕು ಹರಡುವುದು. 4ನೇ ಹಂತವೆಂದರೆ ಸೋಂಕು ಸಾಂಕ್ರಾಮಿಕ ಪಿಡುಗಾಗಿ ಇಡೀ ದೇಶಕ್ಕೆ ವ್ಯಾಪಿಸುವುದು. ಅದೃಷ್ಟವಷಾತ್ ನಾವು ಮೊದಲ ಹಾಗೂ ಎರಡನೇ ಹಂತದ ನಡುವೆ ಇದ್ದೇವೆ. ಇದನ್ನು ಇದೇ ಹಂತದಲ್ಲಿ ನಿಯಂತ್ರಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ವೈದ್ಯಕೀಯ ಕಾಲೇಜುಗಳಲ್ಲಿ ವಾರ್ ರೂಂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲಾ ಆಸ್ಪತ್ರೆಗಳೊಂದಿಗೆ ಸಮನ್ವಯ ಸಾಧಿಸಿ ಕಠಿಣ ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಲು ವಾರ್ ರೂಂ ನೆರವಾಗಲಿದೆ. ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲದ ಜಿಲ್ಲೆಗಳಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳೊಂದಿಗೆ ಸಭೆ ನಡೆಸಿ ಚರ್ಚಿಸಲೂ ಸಹ ತೀರ್ಮಾನಿಸಲಾಗಿದೆ ಎಂದಿದ್ದಾರೆ.