ರಾಜ್ಯ

ಇಟಲಿಯಲ್ಲಿರುವ ಕನ್ನಡಿಗರನ್ನು ಕರೆತನ್ನಿ: ಸದನದಲ್ಲಿ ಪ್ರಿಯಾಂಕ್ ಖರ್ಗೆ ಆಗ್ರಹ

Shilpa D

ಬೆಂಗಳೂರು: ಕೊರೋನಾ ವೈರಸ್‌ ಸೋಂಕು ವ್ಯಾಪಕತೆಯಿಂದ ಭೀತರಾಗಿ ಸ್ವದೇಶಕ್ಕೆ ಮರಳಲು ಪರದಾಡುತ್ತಿರುವ ಕನ್ನಡಿಗರಿಗೆ ಸರ್ಕಾರ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ವಿಧಾನಸಭೆಯಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ. 

ಇಟಲಿಯ ರೋಮ್‌ ವಿಮಾನ ನಿಲ್ದಾಣದಲ್ಲಿ ತುದಿಗಾಲ ಮೇಲೆ ನಿಂತಿರುವ 400 ಕ್ಕೂ ಹೆಚ್ಚು ಕನ್ನಡಿಗರ ರಕ್ಷಣೆಯ ಭರವಸೆಯನ್ನು ಸರ್ಕಾರ ವಿಧಾನಸಭೆಯಲ್ಲಿ ಮಂಗಳವಾರ ನೀಡಿದೆ.

ಶೂನ್ಯವೇಳೆಯಲ್ಲಿ ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ ವಿಷಯ ಪ್ರಸ್ತಾಪಿಸಿ "ಇಟಲಿಯಲ್ಲಿ ಸೋಂಕು ವ್ಯಾಪಕತೆಯಿಂದಾಗಿ ಸಾವಿರಾರು ಭಾರತೀಯರು ಸ್ವದೇಶಕ್ಕೆ ಮರಳುತ್ತಿದ್ದಾರೆ. ಅವರಲ್ಲಿ 150 ವಿದ್ಯಾರ್ಥಿಗಳು ಸೇರಿ 400 ಕ್ಕೂ ಹೆಚ್ಚು ಕನ್ನಡಿಗರಿದ್ದಾರೆ.

ಆದರೆ, ಸೋಂಕು ಇಲ್ಲ ಎಂಬ ದೃಢೀಕರಣ ಇಲ್ಲದೆ ವಿಮಾನ ಹತ್ತಲು ಅವಕಾಶ ಕೊಡದ ಕಾರಣ ವಿಮಾನ ನಿಲ್ದಾಣಗಳಲ್ಲಿ ಅತಂತ್ರರಾಗಿ ಉಳಿದಿದ್ದಾರೆ. ರಾಯಭಾರಿ ಕಚೇರಿಯೂ ಅವರ ನೆರವಿಗೆ ಬರುತ್ತಿಲ್ಲ," ಎಂದು ಸದನದ ಗಮನ ಸೆಳೆದರು.

ಇದಕ್ಕೆ ಡಿಸಿಎಂ ಅಶ್ವತ್ಥ ನಾರಾಯಣ ಉತ್ತರ ನೀಡಿ "ಮಿಲಾನ್‌ ವಿಮಾನ ನಿಲ್ದಾಣದಿಂದ ಕನ್ನಡಿಗರನ್ನು ವಾಪಸ್‌ ಕರೆತರಲಾಗಿದೆ. ಆದರೆ, ರೋಮ್‌ನಲ್ಲಿ ರಕ್ತ ಪರೀಕ್ಷೆ ನಡೆಸಲಾಗಿದ್ದು, ವರದಿ ನಿರೀಕ್ಷಿಸಲಾಗುತ್ತಿದೆ. ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ನಿಟ್ಟಿನಲ್ಲಿ ಪೂರ್ಣ ಗಮನ ಹರಿಸಿದೆ'' ಎಂದು ಭರವಸೆ ನೀಡಿದರು.
 

SCROLL FOR NEXT