ಸಂಗ್ರಹ ಚಿತ್ರ 
ರಾಜ್ಯ

ಕೊರೋನಾ ವೈರಸ್: ಎಲ್ಲ ಅಧಿಕೃತ, ಖಾಸಗಿ ವಿದೇಶ ಪ್ರವಾಸಗಳ ರದ್ದುಗೊಳಿಸಿದ ರಾಜ್ಯ ಸರ್ಕಾರ

ರಾಜ್ಯದಲ್ಲಿ ದಿನೇ ದಿನೇ ಕೊರೋನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಎಲ್ಲ ಅಧಿಕೃತ, ಖಾಸಗಿ ವಿದೇಶ ಪ್ರವಾಸಗಳನ್ನು ರದ್ದುಗೊಳಿಸಿದೆ.

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೊರೋನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಎಲ್ಲ ಅಧಿಕೃತ, ಖಾಸಗಿ ವಿದೇಶ ಪ್ರವಾಸಗಳನ್ನು ರದ್ದುಗೊಳಿಸಿದೆ.

ಇನ್ನು ಮಾರಣಾಂತಿಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಂಗಳವಾರ ರಾಜ್ಯದಲ್ಲಿ ಮತ್ತೊಬ್ಬರಿಗೆ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಪೀಡಿತರ ಸಂಖ್ಯೆ11ಕ್ಕೆ ಮತ್ತು ದೇಶದಲ್ಲಿ 139 ಕ್ಕೆ ಏರಿಕೆಯಾಗಿದೆ. 

ಇದೇ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಸಿಎಂ ಬಿಎಸ್ ಯಡಿಯೂರಪ್ಪ ಅವರು, ಕೊರೋನಾ ಸೋಂಕಿಗೆ ಮೃತಪಟ್ಟಿರುವ ಒಬ್ಬ ವ್ಯಕ್ತಿ ಸೇರಿದಂತೆ, ರಾಜ್ಯದಲ್ಲಿ ಈವರೆಗೆ ಸೋಂಕು ಖಚಿತವಾಗಿರುವ ಒಟ್ಟು 11 'ಕೋವಿಡ್ -19 ' ಪ್ರಕರಣಗಳು ವರದಿಯಾಗಿವೆ. ಕೊರೋನಾ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ಎಲ್ಲ ಅಧಿಕೃತ/ ಖಾಸಗಿ ವಿದೇಶ ಪ್ರವಾಸಗಳನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಯೋತ್ಪಾದನೆ ಕೊನೆಗೊಳಿಸಿ ನಂತರ ಸಿಂಧೂ ಜಲ ಒಪ್ಪಂದದ ಬಗ್ಗೆ ಮಾತುಕತೆ: ಪಾಕಿಸ್ತಾನಕ್ಕೆ ಭಾರತ ಸ್ಪಷ್ಟ ಸಂದೇಶ

ರಾಮಮಂದಿರಕ್ಕೆ ನಾನು ಕೊಟ್ಟ 1.11 ಲಕ್ಷ ದೇಣಿಗೆ ಹಣ ವಾಪಸ್‌ ಕೊಡಿ, ಇಲ್ಲ ಕೋರ್ಟಿಗೆ ಹೋಗ್ತೀನಿ: ದಿಗ್ವಿಜಯ್ ಸಿಂಗ್

ಭಾರತದಲ್ಲಿ ಇದ್ದಿದ್ದರೆ ಈ ಕೊಳಕು ವ್ಯವಸ್ಥೆಯಲ್ಲಿ ಎಂದಿಗೂ ನಾನು CEO ಆಗುತ್ತಿರಲಿಲ್ಲ: ಇಂದ್ರಾ ನೂಯಿ

ಅಸ್ವಸ್ಥ ಬಾಲಕಿಯನ್ನು ಬೆನ್ನಿಗೆ ಕಟ್ಟಿಕೊಂಡು 6 ಕಿ.ಮೀ ನಡೆದು, ಆಸ್ಪತ್ರೆಗೆ ಸೇರಿಸಿದ ಶಿಕ್ಷಕಿ! Video

ಟೂರಿಸ್ಟ್ ವೀಸಾ ಪುನರಾರಂಭ: ತೀವ್ರ ಬೇಡಿಕೆ, ಬಾಂಗ್ಲಾದೇಶದಲ್ಲಿ ಮತ್ತಷ್ಟು ವೀಸಾ ಸೇವೆ ಹೆಚ್ಚಿಸಲು ಭಾರತ ಮುಂದು!