ರಾಜ್ಯ

ಬೆಂಗಳೂರು ಗ್ರಾಮಾಂತರ, ಮೈಸೂರಿನಲ್ಲಿ ಪ್ರಯಾಣ ಹಿನ್ನೆಲೆ ಇಲ್ಲದ ವ್ಯಕ್ತಿಗಳಿಗೆ ಕೊರೋನಾ ಸೋಂಕು!

Srinivas Rao BV

ಬೆಂಗಳೂರು: ದೇಶಾದ್ಯಂತ 650 ಕ್ಕೂ ಹೆಚ್ಚಿನ ಮಂದಿಗೆ ಹರಡಿರುವ ಕೊರೋನಾ ವೈರಸ್ ಸೋಂಕು ಕರ್ನಾಟಕದಲ್ಲಿ ಸಮುದಾಯಕ್ಕೆ ಹರಡಿರುವ ಶಂಕೆ ವ್ಯಕ್ತವಾಗಿದೆ. 

ಮಾ.26 ರಂದು ಒಂದೇ ದಿನ ರಾಜ್ಯದಲ್ಲಿ 4 ಪ್ರಕರಣಗಳು ಪತ್ತೆಯಾಗಿದೆ. ಆತಂಕಕಾರಿ ಸಂಗತಿ ಎಂದರೆ ವಿದೇಶದಿಂದ ಬಂದವರ ಸಂಪರ್ಕಕ್ಕೂ ಬಾರದ ಇಬ್ಬರು ವ್ಯಕ್ತಿಗಳಿಗೆ ಕೊರೋನಾ ಸೋಂಕು ತಗುಲಿರುವುದರ ಬಗ್ಗೆ ವರದಿಯಾಗಿದೆ. 

ಯಾವುದೇ ವಿದೇಶ ಪ್ರಯಾಣ ಹಿನ್ನೆಲೆಯೂ ಇಲ್ಲದ, ಕೋವಿಡ್-19 ರೋಗಿಗಳೊಂದಿಗೂ ಸಂಪರ್ಕ ಹೊಂದಿರದ ಮೈಸೂರಿನ 35 ವರ್ಷದ ವ್ಯಕ್ತಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. 

ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಈ ಬಗ್ಗೆ ಮಾಹಿತಿ ನೀಡಿದ್ದು, ಕೋವಿಡ್-19 ರ ರೋಗಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಕೋವಿಡ್-19 ಪೀಡಿತ ವ್ಯಕ್ತಿ ಔಷಧೀಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಈತನೊಂದಿಗೆ ಪ್ರಾಥಮಿಕವಾಗಿ ಸಂಪರ್ಕಕ್ಕೆ ಬಂದಿದ್ದ 7 ಜನರನ್ನು ಪತ್ತೆ ಮಾಡಿರುವುದಾಗಿ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

SCROLL FOR NEXT