ಪೌರಕಾರ್ಮಿಕರು 
ರಾಜ್ಯ

ಕೊರೋನಾ ವಿರುದ್ಧ ಸಮರ: ಪೌರಕಾರ್ಮಿಕರೇ ನಮ್ಮ ವೈದ್ಯರು - ಸಚಿವ ಸುರೇಶ್ ಕುಮಾರ್

ಪೌರಕಾರ್ಮಿಕರೇ ನಮ್ಮ ವೈದ್ಯರು, ಅವರನ್ನು ಇದುವರೆಗೂ ನಾನು ಪೌರಕಾರ್ಮಿಕರಂತೆ ಕಂಡಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಬಣ್ಣಿಸಿದ್ದಾರೆ.

ಚಾಮರಾಜನಗರ: ಪೌರಕಾರ್ಮಿಕರೇ ನಮ್ಮ ವೈದ್ಯರು, ಅವರನ್ನು ಇದುವರೆಗೂ ನಾನು ಪೌರಕಾರ್ಮಿಕರಂತೆ ಕಂಡಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಬಣ್ಣಿಸಿದ್ದಾರೆ.

ಜಿಲ್ಲಾ ಪ್ರವಾಸ ಕೈಗೊಂಡು ಕೊರೊನಾ ತಡೆಗೆ ಕೈಗೊಂಡಿರುವ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಫೇಸ್​​ಬುಕ್ ಲೈವ್​​ನಲ್ಲಿ ಅವರು ಮಾತನಾಡಿ, ವೈದ್ಯರು ಕಾಯಿಲೆ ಬಂದ ಬಳಿಕ ರೋಗ ಗುಣಪಡಿಸಿದರೆ, ಪೌರಕಾರ್ಮಿಕರು ರೋಗ ಬರದಂತೆ ತಡೆಯುವುದರಿಂದ ಅವರು ಕೂಡಾ ವೈದ್ಯರು. ಆದ್ದರಿಂದ ಅವರಿಗೆ ಬೇಕಾದ ಗ್ಲೌಸ್​​ಗಳು, ಮಾಸ್ಕ್, ಸ್ಯಾನಿಟೈಸರ್​ ವಿತರಿಸಲಾಗುತ್ತದೆ ಎಂದು ತಿಳಿಸಿದರು.

ಹೆಚ್ಚು ಜನ ಹೆಚ್ಚು ಕಾಲ ಮನೆಯಲ್ಲೇ ಇರುವುದರಿಂದ ಮಹಾಮಾರಿಗೆ ಆಹಾರ ಸಿಗದಂತೆ ಮಾಡಬಹುದು. ಆದರೆ ಕೆಲವರು ನಿಷೇಧಾಜ್ಞೆ ಉಲ್ಲಂಘಿಸಿ ವಿನಾ ಕಾರಣ ಓಡಾಡುತ್ತಿರುವರನ್ನು ಬಂಧಿಸಿ ಜೈಲಿಗಟ್ಟಿ ಎಂದು ಸೂಚಿಸಿದ್ದೇನೆ ಎಂದಿದ್ದಾರೆ.

ಜಿಲ್ಲೆ ಎರಡು ರಾಜ್ಯಗಳ ಗಡಿಯನ್ನು ಹಂಚಿಕೊಂಡಿರುವುದರಿಂದ ಅಂತಾರಾಜ್ಯಗಳ ಗಡಿಯನ್ನು ಇನ್ನಷ್ಟು ಬಿಗಿ ಮಾಡಬೇಕೆಂದು ಹೇಳಿದ್ದು, ಅಗತ್ಯಕ್ಕೆ ತಕ್ಕ ಸಂಖ್ಯೆಗಳಲ್ಲಿ ಮಾಸ್ಕ್, ಸ್ಯಾನಿಟೈಸರ್​ ಹಾಗೂ ವೈದ್ಯರ ರಕ್ಷಾ ಕವಚವನ್ನು ಹೊಂದಲು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.

ವಿದೇಶದಿಂದ ಬಂದ 26 ಮಂದಿಯನ್ನು ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಕೊರೊನಾ ವೈರಸ್​ನ್ನು ಹಗುರವಾಗಿ ತೆಗೆದುಕೊಳ್ಳಬಾರದು. ನಾವು ಅಂದುಕೊಂಡಿದ್ದಕ್ಕಿಂತ ಅದು ಗಂಭೀರವಾಗಿದೆ ಎಂದು ಇದೇ ವೇಳೆ ಅವರು ಎಚ್ಚರಿಸಿದ್ದಾರೆ.

ವರದಿ: ಗುಳಿಪುರ ನಂದೀಶ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!