ರಾಜ್ಯ

ಊಟ-ತಿಂಡಿಯಿಲ್ಲದೆ, ಊರಿಗೆ ಹೋಗಲಾಗದೆ ಕೊಡಗಿನ ಕಾಫಿ ಎಸ್ಟೇಟ್ ನಲ್ಲಿ ಸಿಕ್ಕಿಹಾಕಿಕೊಂಡಿರುವ ಸೋಲಿಗರು!

Sumana Upadhyaya

ಮೈಸೂರು:ಕೊರೋನಾ ವೈರಸ್ ಹಾವಳಿಯನ್ನು ಸದೆಬಡಿಯಲು ಕೇಂದ್ರ ಸರ್ಕಾರ ಹೇರಿರುವ ಸಂಪೂರ್ಣ ಲಾಕ್ ಡೌನ್ ಭಾನುವಾರ 5ನೇ ದಿನಕ್ಕೆ ಕಾಲಿಟ್ಟಿದೆ. ಇದರಿಂದಾಗಿ ಜನರ ನಿತ್ಯ ವ್ಯವಹಾರ, ಚಟುವಟಿಕೆಗಳು ಸಂಪೂರ್ಣ ಸ್ಥಬ್ಧವಾಗಿದೆ.

ದಿನಗೂಲಿ ವಲಸೆ ಕಾರ್ಮಿಕರಿಗೆ ಕೆಲಸವಿಲ್ಲ, ಕೆಲಸವಿಲ್ಲ ಎಂದ ಮೇಲೆ ಸಂಬಳವಿಲ್ಲ, ತಿನ್ನುವುದು ಏನು ಎಂಬ ಸಮಸ್ಯೆಯುಂಟಾಗಿದೆ. ತಮ್ಮೂರಿಗೆ ಹೊರಟು ಹೋಗೋಣವೆಂದರೆ ಯಾವುದೇ ಸಾರಿಗೆಯಿಲ್ಲ. ಮೊಬೈಲ್ ನೆಟ್ ವರ್ಕ್ ಇಲ್ಲದೆ ಇವರಿಗೆ ಯಾರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಸಮಸ್ಯೆಯಲ್ಲಿ ಕರ್ನಾಟಕ-ಕೇರಳ ಗಡಿಭಾಗದಲ್ಲಿ ಕೊಡಗಿನ ಕಾಫಿ ಎಸ್ಟೇಟ್ ನಲ್ಲಿ 200ಕ್ಕೂ ಹೆಚ್ಚು ಸೋಲಿಗ ಬುಡಗಟ್ಟು ಜನಾಂಗದವರು ಸಿಕ್ಕಿಹಾಕಿಕೊಂಡಿದ್ದಾರೆ. ಕಾಫಿ ಎಸ್ಟೇಟ್ ನಲ್ಲಿ ಕೆಲಸ ಹುಡುಕಿಕೊಂಡು ಸಂಕ್ರಾಂತಿ ಹಬ್ಬದ ನಂತರ ಬಂದ ಚಾಮರಾಜನಗರ ಜಿಲ್ಲೆಯ ಹಾಡಿ ಬುಡಕಟ್ಟು ಜನಾಂಗದವರು ಇವರು.

SCROLL FOR NEXT