ಆಯುರ್ವೇದ ತಜ್ಞ ಸಂತೋಷ್ ಗುರೂಜಿ 
ರಾಜ್ಯ

ಮಾರಕ ಕೊರೋನಾ ವೈರಸ್ ಗುಣಪಡಿಸಬಲ್ಲ ಪರಿಣಾಮಕಾರಿ ಔಷಧಿ ಇದೆ, ಉಚಿತವಾಗಿ ನೀಡಲು ಸಿದ್ಧ: ಸಂತೋಷ್ ಗುರೂಜಿ

ವಿಶ್ವದ 190ಕ್ಕೂ ಅಧಿಕ ದೇಶಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ನಮ್ಮಲ್ಲಿ ಪರಿಣಾಮಕಾರಿ ಔಷಧಿ ಇದೆ ಎಂದು ಖ್ಯಾತ ಆಯುರ್ವೇದ ತಜ್ಞ ಸಂತೋಷ್ ಗುರೂಜಿ ಹೇಳಿದ್ದಾರೆ.

ಬೆಂಗಳೂರು: ವಿಶ್ವದ 190ಕ್ಕೂ ಅಧಿಕ ದೇಶಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ನಮ್ಮಲ್ಲಿ ಪರಿಣಾಮಕಾರಿ ಔಷಧಿ ಇದೆ ಎಂದು ಖ್ಯಾತ ಆಯುರ್ವೇದ ತಜ್ಞ ಸಂತೋಷ್ ಗುರೂಜಿ ಹೇಳಿದ್ದಾರೆ.

ಈ ಕುರಿತಂತೆ ವಿಡಿಯೋ ಮೂಲಕ ಹೇಳಿಕೆ ನೀಡಿರುವ ಸಂತೋಷ್ ಗುರೂಜಿ ಅವರು, ಇಡೀ ದೇಶ ಮಾರಕ ಕೊರೋನಾ ವೈರಸ್ ನಿಂದಾಗಿ ತತ್ತರಿಸುತ್ತಿದೆ. ಆದರೆ ಈ ವೈರಸ್ ಗೆ ಭಯ ಪಡುವ ಅಗತ್ಯವಿಲ್ಲ. ಈ ಮಾರಕ ವೈರಸ್ ಗೆ ತಮ್ಮ ಆಶ್ರಮ ಪರಿಣಾಮಕಾರಿ ಔಷಧಿ  ಕಂಡುಹಿಡಿದಿದೆ. ವಾಸ, ತಾಲಿಶ್ಪತ್ರ, ವಂಶಲೋಚನ, ಅಮೃತ ಇತ್ಯಾದಿ ಅತ್ಯಮೂಲ್ಯ ಗಿಡಮೂಲಿಕೆಗಳ ಮಿಶ್ರಣದಿಂದ ತಯಾರಿಸಲಾದ ಆಯುರ್ ಶ್ವಾಸ ಚೂರ್ಣವನ್ನು ತಯಾರಿಸಲಾಗಿದೆ. ಈಗಾಗಲೇ ಕೊರೋನಾ ವೈರಸ್ ಗೆ ವೈದ್ಯರು ಪರಿಣಾಮಕಾರಿ ಔಷಧಿ ನೀಡುತ್ತಿದ್ದು, ಅದರ  ಜೊತೆಗೆ ನಮ್ಮ ಈ ಆಯುರ್ ಶ್ವಾಸ ಚೂರ್ಣವನ್ನು ಔಷಧಿಯಾಗಿ ತೆಗೆದುಕೊಂಡರೆ ಖಂಡಿತಾ ಕೊರೋನಾ ವೈರಸ್ ನಿರ್ಮೂಲನೆಯಾಗುತ್ತದೆ ಎಂದು ಹೇಳಿದ್ದಾರೆ.

ಅಂತೆಯೇ ತಮ್ಮ ಈ ಔಷಧಿಯನ್ನು ನಾವು ಸೋಂಕಿತರಿಗೆ ಉಚಿತವಾಗಿ ನೀಡಲು ಸಿದ್ಧವಿದ್ದು, ಇದಕ್ಕಾಗಿ ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ಸಂತೋಷ್ ಗುರೂಜಿ ಮನವಿ ಮಾಡಿದ್ದಾರೆ. ಇದೇ ವೇಳೆ ತಮಗೆ ಯಾವುದೇ ರೀತಿಯ ಹೆಸರು ಅಥವಾ ಖ್ಯಾತಿ ಬೇಕಿಲ್ಲ.  ಭಾರತದಿಂದ ಈ ಕೊರೋನಾ ಹಿಮ್ಮೆಟಿದರೆ ಸಾಕು. ಅದೇ ನಮ್ಮ ಧ್ಯೇಯ. ನಾನೂ ಕೂಡ ಆಯುರ್ವೇದದಲ್ಲಿ ಸಾಕಷ್ಟು ಅನುಭವ ಪಡೆದಿದ್ದು, ಆ ಅನುಭವದ ಮೂಲಕ ಈ ಔಷಧಿ ತಯಾರಿಸಲಾಗಿದೆ. ಈ ಔಷಧಿಯನ್ನು ಸರ್ಕಾರ ಬೇಕಿದ್ದರೆ ಪರೀಕ್ಷೆ ನಡೆಸಿ ಬಳಿಕವೇ ರೋಗಿಗಳಿಗೆ ನೀಡಲಿ  ಎಂದು ಸಂತೋಷ್ ಗುರೂಜಿ ಮನವಿ ಮಾಡಿದ್ದಾರೆ.

ಭಾರತದಲ್ಲಿ ಕೊರೋನಾ ಸೋಂಕು ಅಪಾಯಕಾರಿ ಮಟ್ಟಕ್ಕೆ ಬೆಳೆದಿಲ್ಲ. ಈಗಲೇ ನಾವು ಇದನ್ನು ಚಿವುಟಿ ಹಾಕಬೇಕಿದೆ. ಅದು ಸಾಧ್ಯ ಕೂಡ. ಹೀಗಾಗಿ ನಮ್ಮ ಔಷಧಿಯನ್ನು ಒಮ್ಮೆ ಪರೀಕ್ಷಿಸಿ ಎಂದು ಸರ್ಕಾರ ಮತ್ತು ಆಯುಷ್ ಇಲಾಖೆಗೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಷ್ಯಾ ಸೇನೆ ಸೇರಲು ಒತ್ತಾಯ: ಉಕ್ರೇನ್ ನಿಂದ SOS ವಿಡಿಯೋ ಕಳಿಸಿದ ಗುಜರಾತ್ ವಿದ್ಯಾರ್ಥಿ!

GOAT tour: ಭಾರತ ಪ್ರವಾಸಕ್ಕೆ 'ಲಿಯೋನೆಲ್ ಮೆಸ್ಸಿ' ಗೆ ಕೊಟ್ಟಿದ್ದು ಎಷ್ಟು ಕೋಟಿ ಗೊತ್ತಾ? ಒಟ್ಟಾರೇ ಖರ್ಚಿನ ವಿವರ ಬಹಿರಂಗ!

ರಾಯಭಾರಿ ಕಚೇರಿ ಬಳಿ ಭದ್ರತಾ ಉಲ್ಲಂಘನೆ: ಆರೋಪ ಸರಿಯಲ್ಲ, ವಿಯನ್ನಾ ಒಪ್ಪಂದಕ್ಕೆ ಬದ್ಧ; ಬಾಂಗ್ಲಾದೇಶಕ್ಕೆ ಭಾರತ ತಿರುಗೇಟು

ನೈಋತ್ಯ ರೈಲ್ವೆಯ 89% ಹಳಿಗಳು ವಿದ್ಯುದೀಕರಣ; ಬೆಂಗಳೂರು ವಿಭಾಗದಲ್ಲಿ 99% ಪೂರ್ಣ

ಯಾರೋ ಒಬ್ಬರಿಂದ ಪಕ್ಷ ಅಧಿಕಾರಕ್ಕೆ ಬಂದಿಲ್ಲ: ಖರ್ಗೆ ಹೇಳಿಕೆ ಬೆಂಬಲಿಸಿದ ಎಂ.ಬಿ ಪಾಟೀಲ; ಡಿಕೆಶಿಗೆ ಪರೋಕ್ಷ ಟಾಂಗ್

SCROLL FOR NEXT