ಡಾ. ರಂಗನಾಥ್-ಡಾ. ಯತೀಂದ್ರ 
ರಾಜ್ಯ

ಕೊರೋನಾ: ರೋಗಿಗಳ ನರಳಾಟ ಕಂಡು ಮತ್ತೆ ಸ್ಟೆತೊಸ್ಕೋಪ್ ಹಿಡಿಯಲು ಸಿದ್ಧ ಎಂದ ಕರ್ನಾಟಕದ ಶಾಸಕರು!

ಕೊರೋನಾ ಮಹಾಮಾರಿ ಕರ್ನಾಟಕ ರಾಜ್ಯವನ್ನೇ ಅಳುಗಾಡಿಸುತ್ತಿದ್ದು ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೆ ಇದೆ. ಇನ್ನು ಆಸ್ಪತ್ರೆಗಳಲ್ಲಿ ವೈದ್ಯರ ಅಭಾವ ಸಹ ಕಾಣಿಸಿಕೊಳ್ಳುತ್ತಿದ್ದು ಆ ಹಿನ್ನೆಲೆಯಲ್ಲಿ ಕರ್ನಾಟಕದ ಇಬ್ಬರು ಶಾಸಕರು ಮತ್ತೆ ಸ್ಟೆತೊಸ್ಕೋಪ್ ಹಿಡಿಯಲಿದ್ದಾರೆ.

ಬೆಂಗಳೂರು: ಕೊರೋನಾ ಮಹಾಮಾರಿ ಕರ್ನಾಟಕ ರಾಜ್ಯವನ್ನೇ ಅಳುಗಾಡಿಸುತ್ತಿದ್ದು ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೆ ಇದೆ. ಇನ್ನು ಆಸ್ಪತ್ರೆಗಳಲ್ಲಿ ವೈದ್ಯರ ಅಭಾವ ಸಹ ಕಾಣಿಸಿಕೊಳ್ಳುತ್ತಿದ್ದು ಆ ಹಿನ್ನೆಲೆಯಲ್ಲಿ ಕರ್ನಾಟಕದ ಇಬ್ಬರು ಶಾಸಕರು ಮತ್ತೆ ಸ್ಟೆತೊಸ್ಕೋಪ್ ಹಿಡಿಯಲಿದ್ದಾರೆ. 

ಭಾರತದಲ್ಲಿ ಕೊರೋನಾ ಮೂರನೇ ಹಂತಕ್ಕೆ ತಲುಪುವ ಸಾಧ್ಯತೆಗಳು ಹೆಚ್ಚಾಗಿದ್ದರಿಂದ ಕಾಂಗ್ರೆಸ್ ಶಾಸಕರು ಇದೀಗ ವೈದ್ಯಕೀಯ ಸೇವೆ ಸಲ್ಲಿಸಲು ಮುಂದಾಗಿದ್ದಾರೆ. 

ಮಾಜಿ ಸಿಎಂ ಸಿದ್ದರಾಮಯ್ಯನವರ ಪುತ್ರ ವರುಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಯತೀಂದ್ರ ಅವರು ಸಹ ಸ್ವಯಂಪ್ರೇರಿತರಾಗಿ ಮುಂದೆ ಬಂದಿದ್ದಾರೆ. “ಅಗತ್ಯವಿದ್ದರೆ, ನಾನು ವೈದ್ಯನಾಗಿ ಸೇವೆ ಸಲ್ಲಿಸಲು ಸಿದ್ಧನಿದ್ದೇನೆ” ಎಂದರು. ಮೈಸೂರಿನಲ್ಲಿ ಕೇವಲ 500 ಪರೀಕ್ಷಾ ಕಿಟ್‌ಗಳಿವೆ, ಇವುಗಳನ್ನು COVID-19 ರೋಗಿಗಳೊಂದಿಗೆ ಪ್ರಾಥಮಿಕ ಅಥವಾ ದ್ವಿತೀಯಕ ಸಂಪರ್ಕ ಹೊಂದಿದ ಜನರಿಗೆ ಅಥವಾ ತೀವ್ರವಾದ ಜ್ವರ ತರಹದ ರೋಗಲಕ್ಷಣಗಳಿಗೆ ಬಳಸಲಾಗುತ್ತಿದೆ.

ಇನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಹೋದರ ಸಂಬಂಧಿ ಕುಣಿಗಲ್ ಕ್ಷೇತ್ರದ ಶಾಸಕರಾದ ಡಾ. ರಂಗನಾಥ್ ಅವರು ಸಹ ವೈದ್ಯಕೀಯ ಸೇವೆ ಸಲ್ಲಿಸುವ ತೀರ್ಮಾನ ಕೈಗೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಅಮಾಯಕ ಜೀವ ಬಲಿಯಾಗುತ್ತಿವೆ, ಇದು ಸಂಪೂರ್ಣ ಅಸಮರ್ಥನೀಯ’; ಹಡಗು, ನಾವಿಕರ ಮೇಲಿನ ದಾಳಿ ಖಂಡಿಸಿದ EAM Jaishankar

ಜಂತರ್ ಮಂತರ್ ಪ್ರತಿಭಟನೆ: ಮಹಿಳೆಯ ಮಾರ್ಫ್ ಮಾಡಿದ ಚಿತ್ರ ತೆಗೆದುಹಾಕಲು Metaಗೆ ಹೈಕೋರ್ಟ್ ಸೂಚನೆ; CJP ನಾಯಕರಿಗೆ ನೋಟಿಸ್

Asian Games 2026: ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೂರು ಪದಕ; ಬರಾನಿಕಾ ಎಲಂಗೋವನ್‌ ಐತಿಹಾಸಿಕ ಸಾಧನೆ

ಆಪರೇಷನ್ ಸಿಂಧೂರ್ ಎಫೆಕ್ಟ್: ಬ್ರಹ್ಮೋಸ್ ಕ್ಷಿಪಣಿ ಅಂದಾಕ್ಷಣ ಪಾಕಿಸ್ತಾನ ನಡುಗುತ್ತದೆ; ಗೃಹ ಸಚಿವ ಅಮಿತ್ ಶಾ

ರಿಷಬ್ ಶೆಟ್ಟಿಯಿಂದ ಹೊಸ ಸಿನಿಮಾ; ಯುವ ಪ್ರತಿಭೆಗಳಿಗೆ ಆಹ್ವಾನ: ಅರ್ಜಿ ಸಲ್ಲಿಸುವುದು ಹೇಗೆ? ಆಡಿಷನ್ ಯಾವಾಗ? ಇಲ್ಲಿದೆ ವಿವರ...