ರಾಜ್ಯ

ಇನ್ಫೋಸಿಸ್ ಪ್ರತಿಷ್ಠಾನದಿಂದ ಬಿಪಿಎಲ್‌ ಕಾರ್ಡ್‌ ಇಲ್ಲದ ಮತ್ತು ವಿಶೇಷ ಚೇತನರಿಗೆ ದಿನಸಿ ಸಾಮಗ್ರಿ ವಿತರಣೆ

Nagaraja AB

ಬೆಂಗಳೂರು: ಕೊರೋನಾ ಲಾಕ್ ಡೌನ್ ನಿಂದಾಗಿ  ಎಲ್ಲಾ ಸ್ತರದ ಜನರು ತೊಂದರೆಗೀಡಾಗಿದ್ದು, ಇನ್ಫೋಸಿಸ್ ಪ್ರತಿಷ್ಠಾನದಿಂದ ಬಿಪಿಎಲ್ ಪಡಿತರ ಚೀಟಿ ಹೊಂದಿಲ್ಲದ ಮತ್ತು ವಿಶೇಷ ಚೇತನರಿಗೆ ಪಡಿತರ ಧಾನ್ಯ ವಿತರಿಸಲಾಯಿತು

ರಾಜ್ಯ ಸರಕಾರದಿಂದ ದಿನಸಿ ಸಾಮಗ್ರಿಗಳನ್ನು ಪಡೆದುಕೊಳ್ಳಲು ರೇಷನ್‌ ಕಾರ್ಡ್‌ ಹೊಂದದೆ ಇರುವವರ ಪರಿಸ್ಥಿತಿ ತೀರ ಗಂಭೀರವಾಗಿದೆ.ಇಂತಹ ಬಿಪಿಎಲ್‌ ಕಾರ್ಡ್‌ ಇಲ್ಲದೇ ಇರುವ ಹಾಗೂ ನೂರಾರು ಕುಟುಂಬಗಳಿಗೆ ಹಾಗೂ ವಿಶೇಷ ಚೇತನರಿಗೆ ಕೂಡಾ ದಿನಸಿ ವಸ್ತುಗಳನ್ನು ವಿತರಿಸಲಾಯಿತು

ರಮೇಶ್‌ ರೆಡ್ಡಿ ನೇತೃತ್ವದ ತಂಡ ಇಂದು ನಗರದ ತಲಘಟ್ಟಪುರ ಪೊಲೀಸ್‌ ಠಾಣೆಯ ಬಳಿ 500 ಕುಟುಂಬಗಳಿಗೆ ರೇಷನ್‌ ಕಿಟ್‌ಗಳನ್ನು ವಿತರಿಸಿದರು. 

ಸುಧಾಮೂರ್ತಿ ಅವರ ನೇತೃತ್ವದಲ್ಲಿ ಇನ್ಪೋಸಿಸ್‌ ಫೌಂಡೇಶನ್‌ ವತಿಯಿಂದ ರಾಜ್ಯಾದ್ಯಂತ ಕರೋನಾ ದಿಂದ ತೊಂದರೆಗೀಡಾಗಿರುವ ಕುಟುಂಬಗಳಿಗೆ ಅಗತ್ಯ ದಿನ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತಿದ್ದು, ಪ್ರತಿದಿನ ಬೆಂಗಳೂರು ನಗರದಲ್ಲಿ ಒಂದೊಂದು ಕಡೆ ಆಹಾರ ಧಾನ್ಯಗಳನ್ನು ವಿತರಣೆ ಮಾಡಲಾಗುತ್ತಿದೆ.

SCROLL FOR NEXT