ರಾಜ್ಯ

ಕೊಪ್ಪಳ: ಮದ್ಯದ ಅಂಗಡಿ ಓಪನ್; ಮಹಿಳೆಯರ ಪ್ರತಿಭಟನೆ

Srinivasamurthy VN

ಕೊಪ್ಪಳ: 40 ದಿನಗಳ ಬಳಿಕ ಮದ್ಯದಂಗಡಿ ತೆರೆಯಲಾಗಿದೆ ಎಂದು ಮದ್ಯ ಪ್ರಿಯರು ಖುಷಿ ಪಡುತ್ತಿದ್ದರೆ ಅತ್ತ ಕೊಪ್ಪಳದಲ್ಲಿ ಮಹಿಳಾ ಮಣಿಗಳು ತೆರೆದಿರುವ ಬಾರ್ ಗಳನ್ನು ಕೂಡಲೇ ಮುಚ್ಚಬೇಕು ಎಂದು ಪ್ರತಿಭಟನೆ ನಡೆಸಿದ್ದಾರೆ.

ಹೌದು.. ಕೊಪ್ಪಳದ ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಎಂ ಎಸ್ ಐ ಎಲ್ ಅಂಗಡಿ ಎದುರು ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದು, ಅಂಗಡಿ ತೆರೆಯದಂತೆ ವಿರೋಧ ವ್ಯಕ್ತಪಡಿಸಿದ್ದಾರೆ.

ಇಲ್ಲಿ‌ನ ಮದ್ಯದ ಅಂಗಡಿಯಿಂದ ಮಹಿಳೆಯರು ಓಡಾಡಲು ಆಗುತ್ತಿಲ್ಲ. ಕುಡುಕರು ಹಾವಳಿ ಹೆಚ್ಚಾಗಿದ್ದು, ಕುಡಿದು ಕುಡುಕರು ಕೂಗಾಡುತ್ತಾರೆ ಕೆಟ್ಟ ಪದಗಳ ಬಳಕೆ ಮಾಡ್ತಾರೆ. ಇದರಿಂದ ಮಹಿಳೆಯರಿಗೆ ಸಮಸ್ಯೆಯಾಗುತ್ತಿದೆ ಎಂದು ಪ್ರತಿಭಟನಾ ನಿರತ ಮಹಿಳೆಯರು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮಹಿಳೆಯೊಬ್ಬರು, ನಮಗೆ ವಯಸ್ಸಿಗೆ ಬಂದ ಹೆಣ್ಣು ಮಕ್ಕಳಿದ್ದಾರೆ. ಕಾಲೇಜಿಗೆ ನಮ್ಮ ಮಕ್ಕಳು ಹೋಗುತ್ತಾರೆ.  ಈ ಮದ್ಯದ ಅಂಗಡಿಯಿಂದಾಗಿ ಇಲ್ಲಿಗೆ ಬಂದು ಕುಡಿಯುವ ಗಂಡಸರು ಹೆಣ್ಣು ಮಕ್ಕಳಿಗೆ ತೊಂದರೆ ಮಾಡುತ್ತಾರೆ. ಲಾಕ್ ಡೌನ್ ಹಿನ್ನಲೆಯಲ್ಲಿ ಈ ಅಂಗಡಿ ಬಂದ್ ಆಗಿದ್ದರಿಂದ ಎರಡು ತಿಂಗಳಿಂದ ಇಲ್ಲಿನ ಮಹಿಳೆಯರು ನೆಮ್ಮದಿಯಿಂದ ಇದ್ದರು. ಆದರೆ ಈಗ ಮತ್ತೆ ಅಂಗಡಿ ತೆರೆಯಲು ಸರ್ಕಾರ ಅನಮತಿ ನೀಡಿದೆ. ಕೂಡಲೇ ಈ ಅಂಗಡಿಯನ್ನು ಸ್ಥಳಾಂತರಿಸಲು ಮನವಿ ಮಾಡಿದ್ದೇವೆ. ಈ ಸಂಬಂಧ ಈಗಾಗಲೇ ಸರ್ಕಾರಕ್ಕೆ ಮನವಿ  ಕೊಟ್ಟಿದ್ದೇವೆ. ಈಗ ಅಂಗಡಿ ತೆಗೆಯೋದು ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ.

ಇನ್ನು ಮಹಿಳೆಯರ ಪ್ರತಿಭಟನೆಗೆ ಬೆದರಿದ ಅಂಗಡಿ ಮಾಲೀಕ ಹಾಗೂ ಕುಡುಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
 

SCROLL FOR NEXT