ರಾಜ್ಯ

ಮದ್ಯದ ಮತ್ತಲ್ಲಿ ಮಗುವಿನ ತುಟಿ ಕಚ್ಚಿದ ಮಹಿಳೆ!

Manjula VN

ಕೆ.ಆರ್. ಪೇಟೆ : ಲಾಕ್ ಡೌನ್ ನಲ್ಲಿ ನಿಷೇಧಿಸಿದ್ದ ಮದ್ಯ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿದ ಬಳಿಕ ಮದ್ಯಪಾನಿಗಳಿಂದ ಹಲವು ಅಚಾತುರ್ಯ ಘಟನೆಗಳು ನಡೆದ ವರದಿಯಾಗುತ್ತಿದೆ.

ಕೆಲವರು ಕುಡಿದು ಬೀದಿಯಲ್ಲೇ ಬಿದ್ದು ಹೊರಳಾಡಿದರೆ, ಜಿಲ್ಲೆಯ ಹೊಸ ಹೊಳಲು ಗ್ರಾಮದಲ್ಲಿ ಪಾನಮತ್ತರಾದ ಮಹಿಳೆಯೊಬ್ಬರು ತನ್ನ ಮಗುವಿನ ತುಟಿಯನ್ನು ಕಚ್ಚಿದ್ದಾರೆ ಎಂದು ತಿಳಿದುಬಂದಿದೆ. 

ನಿನ್ನೆ ಮದ್ಯ ಸಂಗ್ರಹಿಸಿದ ಮಹಿಳೆ ವಿಪರೀತವಾಗಿ ಕುಡಿದು, ಮಗುವಿನ ತುಟಿ ಕಚ್ಚಿದ್ದು, ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
 

SCROLL FOR NEXT