ರಾಜ್ಯ

ಕಲಬುರಗಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 67ಕ್ಕೆ ಏರಿಕೆ

Srinivas Rao BV

ಕಲಬುರಗಿ: ಮತ್ತೆ ಸೂರ್ಯ ನಗರಿ ಕಲಬುರಗಿಗೆ ಕೊರೊನಾ ಬಿಸಿ ತಟ್ಟಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 67ಕ್ಕೆ ಏರಿಕೆ ಕಂಡಿದೆ‌. ಕಲಬುರಗಿ ನಗರದ ಇಬ್ಬರು ಯುವಕರು ಮತ್ತು ಓರ್ವ ಯುವತಿಗೆ ಗುರುವಾರ ಕೊರೊನಾ ಸೋಂಕು‌ ತಗುಲಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ ತಿಳಿಸಿದ್ದಾರೆ.

ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ರೋಗಿ ಸಂಖ್ಯೆ-642 ನೇರ ಸಂಪರ್ಕದಲ್ಲಿ ಬಂದ ಕಲಬುರಗಿ ನಗರದ ಕರೀಂ ನಗರದ 35 ವರ್ಷದ ಯುವಕ ಹಾಗೂ ಕಲಬುರಗಿ ನಗರದ ರೋಗಿ ಸಂಖ್ಯೆ-641ರ ಸಂಪರ್ಕದಲ್ಲಿ ಬಂದ ಇಸ್ಲಾಮಾಬಾದ ಕಾಲೋನಿಯ 36 ವರ್ಷದ ಯುವತಿ ಮತ್ತು 41 ವರ್ಷದ ಪುರುಷ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ ಎಂದರು. ಜಿಲ್ಲೆಯಲ್ಲಿ ಕೊರೊನಾ‌ ಪೀಡಿತ 67 ರೋಗಿಗಳಲ್ಲಿ 6 ಜನ ನಿಧನ‌ರಾಗಿದ್ದು, 29 ರೋಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ‌. ಉಳಿದಂತೆ 32 ರೋಗಿಗಳಿಗೆ ಚಿಕಿತ್ಸೆ‌ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಕಲಬುರಗಿ ನಗರದ 67 ವರ್ಷದ ವೃದ್ಧ ಕೊರೊನಾ ಸೋಂಕಿನ ವಿರುದ್ಧ ಹೋರಾಡುವ ಮೂಲಕ ಜಯಶಾಲಿಯಾಗಿದ್ದಾರೆ. ಕಲಬುರಗಿ ನಗರದ ಉಮರ್ ಕಾಲೋನಿಯ 61 ವರ್ಷದ (ರೋಗಿ ಸಂಖ್ಯೆ- 413) ವೃದ್ಧರಿಗೆ ಕಳೆದ ಏ. 21 ರಂದು ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ನಗರದ ಜಿಮ್ಸ್ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಗುಣಮುಖರಾದ ಹಿನ್ನೆಲೆಯಲ್ಲಿ ಗುರುವಾರ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಅವರು ತಿಳಿಸಿದ್ದಾರೆ.

ಇದರಿಂದ ಜಿಲ್ಲೆಯಲ್ಲಿ ಕೊರೊನಾ‌ ಪೀಡಿತ 67 ರೋಗಿಗಳಲ್ಲಿ 29 ರೋಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ‌. 6 ಜನ ನಿಧನ‌ರಾಗಿದ್ದು, ಉಳಿದಂತೆ 32 ರೋಗಿಗಳಿಗೆ ಚಿಕಿತ್ಸೆ‌ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT