ಕಲಬುರಗಿ: ಕೊರೊನಾ ಸೋಂಕಿನಿಂದ ಕಲಬುರಗಿ ನಗರದ 12 ಮತ್ತು ಆಳಂದ ಪಟ್ಟಣದ 65 ವರ್ಷದ ವೃದ್ಧೆ ಸೇರಿ ಒಟ್ಟು 13 ಜನ ಕೋವಿಡ್-19 ಪೀಡಿತರು ಸೋಂಕಿನಿಂದ ಗುಣಮುಖರಾಗಿ ರವಿವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕು ಪತ್ತೆಯಾದ ನಂತರ ರವಿವಾರ ಪ್ರಥಮ ಬಾರಿಗೆ ಒಂದೇ ದಿನ ಇಷ್ಟೊಂದು ಗರಿಷ್ಠ ಪ್ರಮಾಣದಲ್ಲಿ ರೋಗಿಗಳು ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದರು.
ಜಿಲ್ಲೆಯ ಆಳಂದ ಪಟ್ಟಣದ 65 ವರ್ಷದ ವೃದ್ಧೆ (ರೋಗಿ ಸಂಖ್ಯೆ-502), ಕಲಬುರಗಿ ನಗರದ ಖಮರ್ ಕಾಲೋನಿಯ 7 ವರ್ಷದ ಬಾಲಕ(ರೋಗಿ ಸಂಖ್ಯೆ-503) ಮತ್ತು 40 ವರ್ಷದ ಯುವತಿ (ರೋಗಿ ಸಂಖ್ಯೆ-517) ಹಾಗೂ ಇಸ್ಲಾಮಾಬಾದ ಕಾಲೋನಿಯ 43 ವರ್ಷದ ಪುರುಷ (ರೋಗಿ ಸಂಖ್ಯೆ-517) ಮತ್ತು 28 ವರ್ಷದ ಯುವತಿ (ರೋಗಿ ಸಂಖ್ಯೆ-518) ಗುಣಮುಖರಾಗಿದ್ದಾರೆ.