ರಾಜ್ಯ

ಜುಲೈ ತಿಂಗಳಲ್ಲಿ ದಾವಣಗೆರೆ ವಿವಿ ಪರೀಕ್ಷೆಗಳು ನಿಗದಿ: ಉಪಕುಲಪತಿಗಳಿಂದ ಅಧಿಕೃತ ಮಾಹಿತಿ 

Srinivas Rao BV

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದ ಪರೀಕ್ಷೆಗಳನ್ನು ಜುಲೈ ನಲ್ಲಿ ನಡೆಸಲು ನಿಗದಿಪಡಿಸಿರುವುದಾಗಿ ವಿವಿಯ ಉಪಕುಲಪತಿ ಪ್ರೊಫೆಸರ್ ಶರಣಪ್ಪ ವಿ ಹಲಸೆ ಹೇಳಿದ್ದಾರೆ. 

ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳು ಜುಲೈ ತಿಂಗಳಲ್ಲಿ ನಡೆಯಲಿವೆ. ಇದಕ್ಕಾಗಿ ಎಲ್ಲಾ ರೀತಿಯ ತಯಾರಿಗಳನ್ನು ನಡೆಸಲಾಗುತ್ತಿದೆ ಎಂದು ಉಪಕುಲಪತಿಗಳು ತಿಳಿಸಿದ್ದಾರೆ. 

ಕೋವಿಡ್-19 ಕಾರಣದಿಂದಾಗಿ ಈ ಶೈಕ್ಷಣಿಕ ವರ್ಷ ಅತ್ಯಂತ ಕೆಟ್ಟದಾಗಿತ್ತು. ವಿದ್ಯಾರ್ಥಿಗಳು ಮೇ ಹಾಗೂ ಜೂನ್ ತಿಂಗಳಲ್ಲಿ ಜುಲೈ ಪರೀಕ್ಷೆಗಳಿಗೆ ತಯಾರಿ ನಡೆಸಬೇಕೆಂದು ಹೇಳಿದ್ದಾರೆ. 

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಮೊದಲ ಬಾರಿಗೆ ಜುಲೈ ನಲ್ಲಿ ಪರೀಕ್ಷೆಗಳು ನಡೆಯಲಿವೆ ಎಂದು ಏ.10 ರಂದೇ ವರದಿ ಪ್ರಕಟಿಸಿತ್ತು. ವಿವಿ ವ್ಯಾಪ್ತಿಯಲ್ಲಿ 124 ಕಾಲೇಜುಗಳು, ದಾವಣಗೆರೆಯಲ್ಲಿರುವ ಶಿವನಗಂಗೋತ್ರಿಯಲ್ಲಿ ಸ್ನಾತಕೋತ್ತರ ಕೇಂದ್ರಗಳು ಹಾಗೂ ಚಿತ್ರದುರ್ಗದ ಗುಡ್ಡದ ರಂಗವ್ವನಹಳ್ಳಿನಲ್ಲಿ ಸ್ನಾತಕೋತ್ತರ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.  

ರಾಜ್ಯ ಉನ್ನತ ಶಿಕ್ಷಣ ಇಲಾಖೆ ಹಾಗೂ ಯುಜಿಸಿ ನಿರ್ದೇಶನದ ಪ್ರಕಾರ, ವಿವಿಧ ವಿಭಾಗಗಳ ಅಧ್ಯಕ್ಷರು, ಡೀನ್ ಗಳು, ಶಿಕ್ಷಣ ಪರಿಷತ್ ಸದಸ್ಯರೊಂದಿಗೆ ಸಭೆ ನಡೆಸಿ ಜುಲೈ ನಲ್ಲಿ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಪ್ರೊಫೆಸರ್ ಹಲಸೆ ತಿಳಿಸಿದ್ದಾರೆ. 

ಪರೀಕ್ಷೆಗಳಿಗೂ ಮುನ್ನ ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳಿಗೆ ಬಾಕಿ ಉಳಿದಿರುವ ಪಠ್ಯಕ್ರಮಗಳನ್ನು ಪೂರ್ಣಗೊಳಿಸಲು ಕಠಿಣ ತರಬೇತಿ ನೀಡಲಿದೆ ಎಂದು ಪ್ರೊಫೆಸರ್ ಹಲಸೆ ಮಾಹಿತಿ ನೀಡಿದ್ದಾರೆ. 

ವಿದ್ಯಾರ್ಥಿಗಳಿಗಾಗಿ ಹೆಲ್ಪ್ ಲೈನ್ 

ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸಲು ವಿಶ್ವವಿದ್ಯಾನಿಲಯ ಹೆಲ್ಪ್ ಲೈನ್ ಪ್ರಾರಂಭಿಸಿದ್ದು, ಜೂಮ್ ಆಪ್ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರೊಫೆಸರ್ ಶರಣಪ್ಪ ಹಲಸೆ ತಿಳಿಸಿದ್ದಾರೆ. 
 

SCROLL FOR NEXT