ಬೆಂಗಳೂರು: ಕಳೆದ ಮೂರು ವಾರಗಳಿಂದ ರಾಜ್ಯದಲ್ಲಿ ಪೂಲ್ ಟೆಸ್ಟಿಂಗ್ ಗಾಗಿ ಸ್ಯಾಂಪಲ್ ಸಂಗ್ರಹಿಸಲಾಗುತ್ತಿದೆ.ಬೆಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಹಾಸನಗಳಲ್ಲಿ ಹರಡುವಿಕೆಯ ಪ್ರಮಾಣವು ಶೇಕಡಾ 2 ಕ್ಕಿಂತ ಕಡಿಮೆಯಿದೆ ಎಂದು ತಿಳಿದು ಬಂದಿದೆ.
ಮೇ 13ರ ವೇಳೆಗೆ 3,850 ಜನರಲ್ಲಿ 770 ಪೂಲ್ ರಾಜ್ಯದಲ್ಲಿ ತೆಗೆದುಕೊಳ್ಳಲಾಗಿದೆ, , ಅಂತರರಾಷ್ಟ್ರೀಯ ಮತ್ತು ಅಂತರರಾಜ್ಯದಿಂದ ಮರಳಿದವರಲ್ಲಿ ಸೋಂಕು ಪತ್ತೆ ಹಚ್ಚುವ ಸಲುವಾಗಿ” ರಾಜ್ಯದಾದ್ಯಂತ ಪೂಲ್ ಪರೀಕ್ಷೆಯನ್ನು ಹೆಚ್ಚಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಹೇಳಿದ್ದಾರೆ.
ಕೋವಿಡ್ -19 ಹೊಂದಿರಬಹುದೆಂದು ಶಂಕಿಸಲಾಗಿರುವ ಐದು ರೋಗಿಗಳ ಮಾದರಿಗಳನ್ನು ದ್ರವಕ್ಕೆ ಹಾಕಲಾಗುತ್ತದೆ, ಇದನ್ನು ಪೂಲ್ ಪರೀಕ್ಷೆ ಎಂದು ಕರೆಯಲಾಗುತ್ತದೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿಎನ್ ಮಂಜುನಾಥ್ ಹೇಳಿದ್ದಾರೆ.
ಇದರಲ್ಲಿ ನೆಗೆಟಿವ್ ಬಂದರೆ ಎಲ್ಲಾ ನೆಗೆಟಿವ್ ಎದು , ಪಾಸಿಟಿವ್ ಬಂದರೆ ಎಲ್ಲಾ ಪಾಸಿಟಿವ್ ಎಂದು ನಿರ್ಧರಿಸಲಾಗುತ್ತದೆ. ಮತ್ತೆ ಎಲ್ಲಾ ಸ್ಯಾಂಪಲ್ಸ್ ಅನ್ನು ಮತ್ತೆ ಪರೀಕ್ಷೆಗೊಳಪಡಿಸಲಾಗುತ್ತದೆ.
ಆರ್‌ಟಿ-ಪಿಸಿಆರ್ ಪರೀಕ್ಷಾ ಕಿಟ್‌ಗಳನ್ನು ಬಳಸಿಕೊಂಡು ಹೆಚ್ಚಿನ ಮಾದರಿಗಳನ್ನು ಪರೀಕ್ಷಿಸಬಹುದಾಗಿದೆ. ತುಂಬಾ ಶೀಘ್ರವಾಗಿ ಈ ಟೆಸ್ಟ್ ಮಾಡಲಾಗುತ್ತದೆ, ಇದರಿಂದ ಟೆಸ್ಟಿಂಗ್ ಕಿಟ್ಸ್ ಗಳನ್ನು ಉಳಿಸಿದಂತಾಗುತ್ತದೆ.
.