ರಾಜ್ಯ

ಹೈಕೋರ್ಟ್ ಸೇರಿದಂತೆ ಎಲ್ಲಾ ನ್ಯಾಯಾಲಯಗಳು ಜೂನ್ 6 ರವರೆಗೆ ಬಂದ್

Sumana Upadhyaya

ಬೆಂಗಳೂರು: ರಾಜ್ಯ ಹೈಕೋರ್ಟ್ ನ ಎಲ್ಲಾ ನ್ಯಾಯಪೀಠಗಳು,ಜಿಲ್ಲಾ ನ್ಯಾಯಾಲಯಗಳು, ಕೌಟುಂಬಿಕ ಕೋರ್ಟ್, ಕಾರ್ಮಿಕ ಕೋರ್ಟ್ ಮತ್ತು ಕೈಗಾರಿಕೆ ನ್ಯಾಯಮಂಡಳಿಗಳು ಕೊರೋನಾ ವೈರಸ್ ಹಿನ್ನೆಲೆಯಲ್ಲಿ  ಜೂನ್ 6ರವರೆಗೆ ಮುಚ್ಚಿರುತ್ತವೆ.

1963ರ ಲಿಮಿಟೇಶನ್ ಕಾಯ್ದೆಯ ಸೆಕ್ಷನ್ 4ರ ಪ್ರಕಾರ ರಾಜ್ಯದ ಎಲ್ಲಾ ಕೋರ್ಟ್ ಗಳ ಕಾರ್ಯಕಲಾಪವನ್ನು ಜೂನ್ 6ರವರೆಗೆ ಸ್ಥಗಿತಗೊಳಿಸಿ ರಾಜ್ಯ ಹೈಕೋರ್ಟ್ ಆದೇಶ ನೀಡಿದೆ.

ಈ ಹಿಂದೆ ಪ್ರಕಟಣೆ ಹೊರಡಿಸಿದ್ದ ಹೈಕೋರ್ಟ್ ಮೇ 16ರವರೆಗೆ ಅಂದರೆ ಇಂದಿನವರೆಗೆ ಮುಚ್ಚಿರುತ್ತದೆ ಎಂದು ಹೇಳಿತ್ತು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಹೊರಡಿಸಿದ್ದ ಅಧಿಸೂಚನೆಯಲ್ಲಿ ಅತ್ಯಂತ ತುರ್ತು ವಿಚಾರಣೆಗಳನ್ನು ಆಲಿಸಲು ಕೆಲವು ನ್ಯಾಯಪೀಠಗಳನ್ನು ರಚಿಸಿದ್ದರು. ಈ ನ್ಯಾಯಪೀಠಗಳು ನಾಡಿದ್ದು ಸೋಮವಾರದಿಂದ ವಾರದವರೆಗೆ ತುರ್ತು ವಿಚಾರಣೆಗಳನ್ನು ನಡೆಸಲಿವೆ.

SCROLL FOR NEXT