ಪದವೀದರರು 
ರಾಜ್ಯ

ಹೊಸಪೇಟೆ: ಪದವೀಧರರಿಗೆ ಆಸರೆಯಾದ ಉದ್ಯೋಗ ಖಾತರಿ

ಮಹಾಮಾರಿ ಕೊರೋನಾ ಎಫೆಕ್ಟ್ ನಿಂದ ಮೂರನೇ ಹಂತದ ಲಾಕ್​​ಡೌನ್ ಮುಕ್ತಾಯವಾಗಿ ನಾಲ್ಕನೆ ಹಂತದಲ್ಲಿ ಮುಂದುವರೆಯುವ ಸಾಧ್ಯತೆ ಇದೆ, ಹಾಗಾಗಿ ದೊಡ್ಡ ದೊಡ್ಡ ನಗರ ಪಟ್ಟಣ ಪ್ರದೇಶಗಳಿಂದ ತಮ್ಮೂರಿನತ್ತ ಮುಖ ಮಾಡಿರುವ ಪದವೀಧರ ಉದ್ಯೋಗಿಗಳಿಗೆ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಕೊಡುವ ಉದ್ಯೂಗ ಖಾತರಿ ಕೆಲಸವೇ ಗತಿಯಾಗಿದೆ.

ಹೊಸಪೇಟೆ: ಮಹಾಮಾರಿ ಕೊರೋನಾ ಎಫೆಕ್ಟ್ ನಿಂದ ಮೂರನೇ ಹಂತದ ಲಾಕ್​​ಡೌನ್ ಮುಕ್ತಾಯವಾಗಿ ನಾಲ್ಕನೆ ಹಂತದಲ್ಲಿ ಮುಂದುವರೆಯುವ ಸಾಧ್ಯತೆ ಇದೆ, ಹಾಗಾಗಿ ದೊಡ್ಡ ದೊಡ್ಡ ನಗರ ಪಟ್ಟಣ ಪ್ರದೇಶಗಳಿಂದ ತಮ್ಮೂರಿನತ್ತ ಮುಖ ಮಾಡಿರುವ ಪದವೀಧರ ಉದ್ಯೋಗಿಗಳಿಗೆ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಕೊಡುವ ಉದ್ಯೂಗ ಖಾತರಿ ಕೆಲಸವೇ ಗತಿಯಾಗಿದೆ, ಹೌದು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ನರೇಗಾ ಯೋಜನೆಯಲ್ಲಿ ಸಿಗುವ ಈ ಕೂಲಿಯ ಮೊರೆ ಹೋಗಿರುವ ಪದವೀಧರರು, ಬೆಳ್ಳಬೆಂಳಗ್ಗೆ ಎದ್ದು ಗುದ್ದಲಿ, ಸಲಕೆ, ಪುಟ್ಟಿಯನ್ನ ತಲೆಯ ಮೇಲೆ ಹೊತ್ತು, ಗ್ರಾಮದ ಅಕ್ಕಪಕ್ಕದ ಕೆರೆ ಹಳ್ಳಕೊಳ್ಳಗಳ ಹೂಳು, ಕಸ ತೆಗೆಯಬೇಕಾದ ಅನಿವಾರ್ಯತೆ ಎದುರಾಗಿದೆ.

ಹೌದು ಮಹಾಮಾರಿ ಕೊರೊನಾ ಸೋಂಕಿನ ಎಫೆಕ್ಟ್ ನಿಂದಾಗಿ ದೇಶದಲ್ಲಿ ಲಾಕ್​​ಡೌನ್ ಮುಂದುವರೆದಿದೆ, ಪಟ್ಟಣ ನಗರ ಪ್ರದೇಶದ ದೊಡ್ಡ ದೊಡ್ಡ ಕಂಪನಿಗಳು ಸೇರಿದಂತೆ ಸಣ್ಣ ಪುಟ್ಟ ಕೈಗಾರಿಕೆ ಕಾರ್ಖಾನೆಗಳು ಬಾಗಿಲು ಮುಚ್ಚಿ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿವೆ. ಆ ಕಾರಣಕ್ಕಾಗಿ ಕೆಲಸಗಳಿಲ್ಲದೇ ಪರದಾಡುತಿದ್ದ ಪದವೀಧರರು ತಮ್ಮ ಹುಟ್ಟೀರಿನತ್ತ ಮರಳಿದ್ದಾರೆ, ಹೀಗೆ ಹಳ್ಳಿಗೆ ಮರಳಿರುವ ಪದವೀದರರು ಮನೆಯಲ್ಲೇ ಕುಳಿತು ಕಾಲ ಕಳೆಯುವ ಬದಲಿಗೆ ತಮ್ಮ ಗ್ರಾಮದ ಗ್ರಾಮ ಪಂಚಾಯ್ತಿಯಲ್ಲಿ ನರೇಗಾ ಯೋಜನೆ ಅಡಿ ಕೊಡುವ ಕೂಲಿ ಕೆಲಸಮಾಡಿ ಬದುಕಬೇಕಾಗಿದೆ, ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಮತ್ತು ಹೂವಿನಹಡಗಲಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಪದವೀರಧರ ಕೂಲಿ ಕಾರ್ಮಿಕರೇ ಕಾಣಸಿಗುತ್ತಾರೆ,ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದ ಎಂಜಿನಿಯರಿಂಗ್ ಪದವೀಧರರು, ಎಸ್​ಎಸ್​ಎಲ್​ಸಿ, ಐಟಿಐ, ಡಿಪ್ಲೋಮಾ ಸೇರಿದಂತೆ ವಿವಿಧ ವಿಷಯಗಳಲ್ಲಿ ಪದವಿ ಪಡೆದವರು ಸದ್ಯ ದಾಳಿಂಬೆ ಕ್ರಾಪ್ ಕಟಿಂಗ್ಸ್‌ಗೆ ತೆರಳುತ್ತಿದ್ದಾರೆ.

ಅಂಕಸಮುದ್ರ, ಹಂಪಸಾಗರ, ತಂಬ್ರಳ್ಳಿ, ಮರಬ್ಬಿಹಾಳ್, ಉಪನಾಯಕನಹಳ್ಳಿ, ಬಾಚಿಗೊಂಡನಹಳ್ಳಿ, ಕಡಲಬಾಳು, ಬಸರಕೋಡು ಸೇರಿದಂತೆ ,ಇನ್ನೂ ಹಲವು ಗ್ರಾಮಗಳಲ್ಲಿ ನಡೆಯುವ ಉದ್ಯೂಗ ಖಾತರಿ ಕೆಲಸದಲ್ಲಿ ಪದವೀಧರರೇ ಹೆಚ್ಚಾಗಿ ಕಾಣ ಸಿಗುತಿದ್ದಾರೆ, ಇನ್ನು ಹೂವಿನ ಹಡಗಲಿ ತಾಲೂಕಿನ ಮೈಲಾರ, ಹಗರನೂರು,ಹೊಳಗುಂದಿ,ಬನ್ನಿಕಲ್ಲು, ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಯಲ್ಲಿ 15ರಿಂದ 20 ಜನರ ತಂಡದಲ್ಲಿ ಐಟಿಐ, ಎಸ್​,ಎಸ್​,ಎಲ್​,ಸಿ, ಡಿಪ್ಲೋಮಾ ಹೀಗೆ ನಾನಾ ವಿಷಯಗಳ ಪದವೀಧರರೂ‌ ಇದ್ದಾರೆ.

ಬೆಳಿಗ್ಗೆ 6ರಿಂದ ಮಧ್ಯಾಹ್ನ 1 ಗಂಟೆವರೆಗೆ ಕೆಲಸ ಮಾಡಿದರೆ 250 ರೂ. ಕೂಲಿ ದೊರೆಯುತ್ತದೆ. ಹೀಗೆ ಕೆಲಸವಿಲ್ಲವೆಂದು ಸುಮ್ಮನನೆ ಮನೆಯಲ್ಲಿ ಕುಳಿತು ಕೊಳ್ಳದೆ ಕುಟುಂಬ ನಿರ್ವಹಣೆಗೆ ಈ ಖಾತರಿ ಕೆಲಸ ಅನಿವಾರ್ಯವಾದರು,ಪದವಿ ಮುಗಿಸಿ ಸಲಿಕೆ, ಗುದ್ದಲಿ ಪುಟ್ಟಿ ಹಿಡಿದು ಕೆಲಸಮಾಡುವ ಅನಿವಾರ್ಯತೆ ಇವರಿಗೆ ಎದುರಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT