ರಾಜ್ಯ

ದ್ವಿತೀಯ ಪಿಯು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ತವರು ಜಿಲ್ಲೆಯಲ್ಲೇ ಬಾಕಿ ಪರೀಕ್ಷೆ ಬರೆಯಬಹುದು!

Nagaraja AB

ಬೆಂಗಳೂರು: ಹಾಸ್ಟೆಲ್ ನಲ್ಲಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು, ಹಲವು ದಿನಗಳಿಂದ ಬಾಕಿ ಉಳಿದಿರುವ ಇಂಗ್ಲೀಷ್ ಪತ್ರಿಕೆಯ ಪರೀಕ್ಷೆಯನ್ನು ತವರು ಜಿಲ್ಲೆಯಲ್ಲಿಯೇ ಬರೆಯುವ ಅವಕಾಶ ದೊರೆತಿದೆ. 

ಇದು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗಲಿದೆ. ಪರೀಕ್ಷೆಗಾಗಿ ದೂರದ ಊರುಗಳಿಂದ ಬರುವುದನ್ನು ತಪ್ಪಿಸುವ ಉದ್ದೇಶದಿಂದ ಈ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಾದ ಎಂ.ಕನಗವಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಕಾಲೇಜುಗಳು ಅಂತಹ ವಿದ್ಯಾರ್ಥಿಗಳನ್ನು ಆದ್ಯತೆಗಳ ಬಗ್ಗೆ ವಿಚಾರಿಸಲು ಕರೆಯುತ್ತವೆ, ಇಲ್ಲವೇ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಕಾಲೇಜುಗಳನ್ನು ಸಂಪರ್ಕಿಸುವ ಮೂಲಕ ತವರು ಜಿಲ್ಲೆಯಲ್ಲಿ ಪರೀಕ್ಷೆ ಬರೆಯುವ ಬಗ್ಗೆ ತಿಳಿಸಬಹುದು ಎಂದು ಅವರು ಹೇಳಿದ್ದಾರೆ.

ವಿದ್ಯಾರ್ಥಿಗಳ ಆದ್ಯತೆ ತಿಳಿಸಲು ಸಾಕಾಷ್ಟು ಸಮಯವಕಾಶ ನೀಡಲಾಗುವುದು ಎಂದು ಹೇಳಿದ ಅವರು, ಈ ಬಗ್ಗೆ ಮಾಹಿತಿಯನ್ನು ಒಂದು ವಾರದ ಹಿಂದೆಯೇ ಜಿಲ್ಲಾ ಅಧಿಕಾರಿಗಳಿಗೆ ರವಾನಿಸಲಾಗಿದೆ ಎಂದು ತಿಳಿಸಿದರು. 

ಜಿಲ್ಲೆಯಲ್ಲಿ ಲಭ್ಯವಿರುವ ಪ್ರಶ್ನೆ ಪತ್ರಿಕೆಗಳ ಸಂಖ್ಯೆ, ತರಗತಿ ಕೊಠಡಿ, ಆಸನಗಳನ್ನು ಮತ್ತಿತರ ಆಧಾರದ ಮೇಲೆ ಪರೀಕ್ಷೆಯ ಪರಿಷ್ಕೃತ ಸ್ಥಳವನ್ನು ವಿದ್ಯಾರ್ಥಿಗಳಿಗೆ ನೀಡಲಾಗುವುದು, ಈ ಬಗ್ಗೆ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಿದ್ದಾರೆ ಎಂದರು.

ಬಾಕಿ ಇರುವ ಇಂಗ್ಲೀಷ್ ಪತ್ರಿಕೆಯ ಪರೀಕ್ಷೆ ದಿನಾಂಕವನ್ನು ಇಲಾಖೆ ಇನ್ನೂ ಘೋಷಿಸಿಲ್ಲ, ಆದರೆ, ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ. ಸಾಮಾಜಿಕ ಅಂತರ ನಿಯಮ ಖಾತ್ರಿಗಾಗಿ ಹೆಚ್ಚುವರಿ ಆಸನಗಳ ವ್ಯವಸ್ಥೆಗಾಗಿ ಕಟ್ಟಡಗಳ ಗುರುತಿಸುವಿಕೆ ಕಾರ್ಯ ನಡೆಯುತ್ತಿದೆ.

SCROLL FOR NEXT