ಬೆಂಗಳೂರು: ಲಾಕ್ ಡೌನ್ ಹಿನ್ನೆಲೆಯಲ್ಲಿ ಅಸಂಘಟಿತ ವಲಯದ ವಲಸೆ ಕಾರ್ಮಿಕರು ತಮ್ಮೂರಿನತ್ತ ಹೋಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಆರು ತಿಂಗಳಲ್ಲಿ ವಲಸೆ ಕಾರ್ಮಿಕರಿಗಾಗಿ ಸರ್ಕಾರ ಇನ್ನೂ ಹೆಚ್ಚಿನ ಕಾರ್ಯಗಳನ್ನು ಮಾಡಬೇಕಾಗಿದೆ ಎಂದು ತಜ್ಞರು ಹೇಳುತ್ತಾರೆ.
ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆ, 2008 ರ ಪ್ರಕಾರ, ಸುಮಾರು ಶೇಕಡಾ 94% ರಷ್ಟು ಉದ್ಯೋಗಿಗಳು ಅಸಂಘಟಿತ ವಲಯದಲ್ಲಿದ್ದಾರೆ ಎಂದು ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸಗಾರರ ಕಲ್ಯಾಣ ಮಂಡಳಿ ಮಾಡಿ ಸಿಇಒ ವಸಂತ ಕುಮಾರ್ ಹಿಟ್ಟಾನಗಿ ಹೇಳಿದ್ದಾರೆ.
ಎಲ್ಲಾ ಕಾರ್ಮಿಕರನ್ನು ನೋಂದಣಿ ಮಾಡುವಂತೆ ಹಾಗೂ ಸ್ಮಾರ್ಟ್ ಕಾರ್ಡ್ ವಿತರಿಸುವಂತೆ ಕಾನೂನು ಇದೆ. ಆದರೆ, ರಾಜ್ಯಸರ್ಕಾರದಿಂದ ಈ ಕೆಲಸವಾಗಿಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ಅವರನ್ನು ಸಂಪರ್ಕಿಸಲು ಎಲ್ಲಾ ರಾಜ್ಯಗಳಿಗೆ ಡಟಾಬೇಸ್ ಅಗತ್ಯವಿದೆ. ಇದರಿಂದಾಗಿ ಅವರು ತೊಂದರೆಯನ್ನು ಎದುರಿಸುವಂತಾಗಿದೆ.
ಭಯದಿಂದಾಗಿ ವಲಸಿಗ ಕಾರ್ಮಿಕರು ಮನೆ ಕಡೆಗೆ ತೆರಳಿದ್ದಾರೆ. ಅಲ್ಲಿ ಸ್ವಲ್ಪ ಸಮಯದವರೆಗೆ ಉಳಿಸಿಕೊಳ್ಳಬಹುದು.ಇಂತಹ ಅಪಾಯಕಾರಿ ಸಂದರ್ಭದಲ್ಲಿ ಅವರು ಕೂಡಲೇ ಹಿಂತಿರುಗುವುದಿಲ್ಲ. ಆದಾಗ್ಯೂ, ಅವರ ವಲಸೆ ಪದ್ಧತಿಯಂತೆ ಆರು ತಿಂಗಳಲ್ಲಿ ವಾಪಸ್ಸಾಗಲಿದ್ದಾರೆ.
ಶಾಶ್ವತ ಕಾಮಗಾರಿ ನಿರ್ಮಾಣ ಹಾಗೂ ಸಮಯಕ್ಕೆ ತಕ್ಕಂತೆ ವೇತನ ಪಾವತಿ ಮೂಲಕ ಮನ್ರೇಗಾ ಯೋಜನೆಯನ್ನು ಬಲಿಪಡಿಸಬೇಕಾದ ಅಗತ್ಯವಿದೆ ಎಂದು ಸರ್ಕಾರಿ ಸಂಬಂಧಗಳು, ಅಂತರರಾಷ್ಟ್ರೀಯ ನ್ಯಾಯ ಮಿಷನ್ ಸಹಾಯಕ ನಿರ್ದೇಶಕ ಡಾ. ಟಿನಾ ಜೊಕೋಬ್ ಹೇಳಿದ್ದಾರೆ.
ಸರ್ಕಾರ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಬೇಕಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ವೇತನವಿಲ್ಲದೆ ಅನೇಕ ಕಾರ್ಮಿಕರು ಮನೆ ಕಡೆಗೆ ತೆರಳಿದ್ದಾರೆ.ಸರಿಯಾದ ವೇಳೆಗೆ ಕೂಲಿ ಪಾವತಿಸುವ ಮೂಲಕ ಕಾರ್ಮಿಕರನ್ನು ರಾಜ್ಯಗಳು ಆಕರ್ಷಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ಗ್ರಾಮಗಳಲ್ಲಿ ಮನೇಗ್ರಾ ಯೋಜನೆಯಡಿ ಕೆಲಸದ ದಿನಗಳನ್ನು ಹೆಚ್ಚಿಸಬೇಕಾಗಿದೆ. ನಗರ ಸ್ಥಳೀಯ ಸಂಸ್ಥೆಗಳಿಂದ ಕಟ್ಟಡ ನಿರ್ಮಾಣ ಕಾರ್ಯ, ಪರಿಸರ ಪುನಶ್ಚೇತನ ಕಾರ್ಯ ಸೇರಿದಂತೆ ನಗರ ಉದ್ಯೋಗ ಖಾತ್ರಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕಾಗಿದೆ.
ಆರೋಗ್ಯ ಭದ್ರತೆ ಹಿನ್ನೆಲೆಯಲ್ಲಿ ಮುಂದಿನ ಆರು ತಿಂಗಳ ಕಾಲ ಪಡಿತರವನ್ನು ಸಾರ್ವತ್ರಿಕಗೊಳಿಸಬೇಕಾಗಿದೆ ಎಂದು ಅಜಿಂ ಪ್ರೇಮ್ ಜೀ ವಿಶ್ವವಿದ್ಯಾಲಯದ ಅಧ್ಯಾಪಕ ರಾಜೇಂದ್ರನ್ ನಾರಾಯಣನ್ ಸಲಹೆ ನೀಡಿದ್ದಾರೆ.