ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಕರ್ನಾಟಕಕ್ಕೆ ಮುಳುವಾದ ಮುಂಬೈ ನಂಟು: ಒಂದೇ ದಿನ 63 ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 1458ಕ್ಕೆ ಏರಿಕೆ!

ನಿನ್ನೆ ಒಂದೇ ದಿನ ದಾಖಲೆ 149 ಪ್ರಕರಣ ಪತ್ತೆಯಾಗಿದ್ದು ರಾಜ್ಯವನ್ನೇ ತಲ್ಲಣಿಸಿತ್ತು. ನಿನ್ನೆ ಮಂಡ್ಯಕ್ಕೆ ಕಂಟಕವಾಗಿದ್ದ ಮುಂಬೈ ನಂಜು ಇಂದು ಹಾಸನಕ್ಕೆ ತಟ್ಟಿದೆ.

ಸಂಗ್ರಹ ಚಿತ್ರ
Vishwanath S
Updated On : 20 May 2020, 1:27 pm

ಬೆಂಗಳೂರು: ನಿನ್ನೆ ಒಂದೇ ದಿನ ದಾಖಲೆ 149 ಪ್ರಕರಣ ಪತ್ತೆಯಾಗಿದ್ದು ರಾಜ್ಯವನ್ನೇ ತಲ್ಲಣಿಸಿತ್ತು. ನಿನ್ನೆ ಮಂಡ್ಯಕ್ಕೆ ಕಂಟಕವಾಗಿದ್ದ ಮುಂಬೈ ನಂಜು ಇಂದು ಹಾಸನಕ್ಕೆ ತಟ್ಟಿದೆ. 

ಮುಂಬೈನಿಂದ ಆಗಮಿಸಿದ್ದವರ ಪೈಕಿ ಹಾಸನದಲ್ಲಿ 21 ಮಂದಿಗೆ ಸೋಂಕು ತಗುಲಿದೆ. ಇನ್ನು ಬೀದರ್ 10, ಮಂಡ್ಯ 8, ಕಲಬುರಗಿ 7, ಉಡುಪಿ 6, ಬೆಂಗಳೂರು 4, ತುಮಕೂರು 4, ದಕ್ಷಿಣ ಕನ್ನಡ, ಯಾದಗಿರಿ, ಉತ್ತರ ಕನ್ನಡದಲ್ಲಿ ತಲಾ 1 ಪ್ರಕರಣ ಪತ್ತೆಯಾಗಿದ್ದು ಇದರೊಂದಿಗೆ ರಾಜ್ಯದಲ್ಲಿ ಇಂದು 63 ಹೊಸ ಪ್ರಕರಣಗಳು ಪತ್ತೆಯಾಗಿವೆ. 

1458 ಪ್ರಕರಣಗಳ ಪೈಕಿ 553 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನು 864 ಮಂದಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿಗೆ ರಾಜ್ಯದಲ್ಲಿ ಒಟ್ಟಾರೆ 40 ಮಂದಿ ಬಲಿಯಾಗಿದ್ದಾರೆ. 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement