ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಸಕ್ರಿಯ ಕೊರೋನಾ ಪ್ರಕರಣಗಳಲ್ಲಿ ಬೆಂಗಳೂರು ನಗರವನ್ನು ಮೀರಿಸಿದ ಮಂಡ್ಯ

ಸಕ್ಕರೆ ನಾಡು ಮಂಡ್ಯ ಜಿಲ್ಲೆ ಈಗ ಕೊರೋನಾ ವೈರಸ್ ಸೋಂಕಿತರಿಂದ ತತ್ತರಿಸಿದ್ದು, ಬೆಂಗಳೂರು ನಗರವನ್ನೂ ಮೀರಿಸಿ ಮೊದಲ ಸ್ಥಾನಕ್ಕೇರಿದೆ.

ಸಂಗ್ರಹ ಚಿತ್ರ
Srinivasa Murthy VN
Updated On : 20 May 2020, 3:24 pm

ಬೆಂಗಳೂರು: ಸಕ್ಕರೆ ನಾಡು ಮಂಡ್ಯ ಜಿಲ್ಲೆ ಈಗ ಕೊರೋನಾ ವೈರಸ್ ಸೋಂಕಿತರಿಂದ ತತ್ತರಿಸಿದ್ದು, ಬೆಂಗಳೂರು ನಗರವನ್ನೂ ಮೀರಿಸಿ ಮೊದಲ ಸ್ಥಾನಕ್ಕೇರಿದೆ.

ಹೊರರಾಜ್ಯಗಳ ಕಾರ್ಮಿಕರನ್ನು ಮರಳಿ ಕರೆತರಲು ಸರ್ಕಾರ ಅನುಮತಿ ಕಲ್ಪಿಸಿದ ನಂತರ ಮಂಡ್ಯಕ್ಕೆ ಹಲವು ಮಂದಿ ಮುಂಬೈನಿಂದ ಆಗಮಿಸಿದ್ದು, ಅವರಲ್ಲಿ ಅನೇಕರಲ್ಲಿ ಸೋಂಕು ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 147ಕ್ಕೇರಿಕೆಯಾಗಿದೆ.  ಇಲ್ಲಿಯವರೆಗೆ ಅತೀ ಹೆಚ್ಚು ಪ್ರಕರಣಗಳನ್ನು ಹೊಂದಿದ್ದ ಬೆಂಗಳೂರು ನಗರದಲ್ಲಿ ಸೋಂಕಿತರ ಸಂಖ್ಯೆ 117 ಇದೆ. ಆ ಮೂಲಕ ಮಂಡ್ಯ ಇದೀಗ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಅಗ್ರ ಸ್ಥಾನಕ್ಕೇರಿದೆ.

ಮಂಗಳವಾರ ಒಂದೇ ದಿನ ಮಂಡ್ಯಕ್ಕೆ ಮುಂಬೈನಿಂದ ಆಗಮಿಸಿದ 71 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಬುಧವಾರ ಇಲ್ಲಿಯವರೆಗೆ 8 ಜನರಲ್ಲಿ ಸೋಂಕು ವರದಿಯಾಗಿದೆ. ಬೆಂಗಳೂರು ನಗರದಲ್ಲಿ ಒಟ್ಟು 8 ಸಾವು ಸೇರಿ 250 ಸೋಂಕಿತರಿದ್ದಾರೆ. ಈ ಪೈಕಿ 124 ಮಂದಿ  ಗುಣಮುಖರಾಗಿದ್ದಾರೆ. ಎರಡನೇ ಸ್ಥಾನದಲ್ಲಿರುವ ಮಂಡ್ಯ 168 ಒಟ್ಟು ಸೋಂಕಿತರನ್ನು ಹೊಂದಿದ್ದು, 21 ಮಂದಿ ಗುಣಮುಖರಾಗಿದ್ದಾರೆ. ಇಲ್ಲಿ ಕಳೆದೊಂದು ವಾರದಿಂದ ಸೋಂಕು ಹೆಚ್ಚಳವಾಗಿರುವುದರಿಂದ ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ. 

Advertisement

Advertisement

ಕಲಬರಗಿ 134 ಸೋಂಕಿತರಿಂದ ಮೂರನೇ ಸ್ಥಾನದಲ್ಲಿದೆ. ಬೆಳಗಾವಿ 116, ದಾವಣಗೆರೆ 112 ಸ್ಥಾನಗಳಿಂದ ತಲಾ ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement