ರಾಜ್ಯ

ಮುಂಬಯಿ ಕನ್ನಡಿಗರಿಗೆ 500 ದಿನಸಿ ಕಿಟ್‌ ತಲುಪಿಸಿದ ಡಾ.ಅಶ್ವತ್ಥನಾರಾಯಣ

Nagaraja AB

ಬೆಂಗಳೂರು: ಮುಂಬೈನ ಧಾರಾವಿ ಕೊಳಗೇರಿಯಲ್ಲಿರುವ ಕನ್ನಡಿಗರ ಕಷ್ಟಕ್ಕೆ ಸ್ಪಂದಿಸಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ಅವರಿಗೆ 500 ದಿನಸಿ ಕಿಟ್‌ಗಳನ್ನು ತಲುಪಿಸಿದ್ದಾರೆ. 

ಕೋವಿಡ್ ಲಾಕ್‌ ಡೌನ್‌ನಿಂದಾಗಿ ಮುಂಬಯಿನ ಧಾರಾವಿ ಪ್ರದೇಶದಲ್ಲಿರುವ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿ ಆಹಾರಕ್ಕಾಗಿ ಪರದಾಡುತ್ತಿದ್ದಾರೆ ಎಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಡಾ. ಅಶ್ವತ್ಥನಾರಾಯಣ, ತಮ್ಮ ಸಹಾಯಹಸ್ತ ಚಾಚಿದ್ದಾರೆ.ದಿನಸಿ ಪದಾರ್ಥಗಳಿರುವ 500 ಕಿಟ್‌ಗಳನ್ನು ಮುಂಬಯಿಗೆ ತಲುಪಿಸಿದ್ದಾರೆ. ಸ್ಥಳೀಯ ಮುಂಖಡರು ಆ ಕಿಟ್‌ಗಳನ್ನು ಭಾನುವಾರ ಸಂತ್ರಸ್ತರಿಗೆ ವಿತರಿಸಿದರು. 

ಈ ಮಧ್ಯೆ ಬಿಹಾರ ಹಾಗೂ ಒಡಿಶಾಗೆ ಪ್ರಯಾಣ ಬೆಳೆಸಿರುವ ವಲಸೆ ಕಾರ್ಮಿಕರನ್ನು ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಭಾನುವಾರ ಭೇಟಿ ಮಾಡಿ ಅವರಿಗೆ ಆಹಾರ ಪೊಟ್ಟಣಗಳನ್ನು ವಿತರಿಸಿದರು.


 
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಅಶ್ವತ್ಥನಾರಾಯಣ, 5 ಶ್ರಮಿಕ್ ರೈಲಿನಲ್ಲಿ ಏಳೂವರೆ ಸಾವಿರ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಿದ್ದಾರೆ. ಒಂದು ರೈಲಿನಲ್ಲಿ ಒಂದೂವರೆ ಸಾವಿರ ಕಾರ್ಮಿಕರು ಪ್ರಯಾಣಿಸಿದ್ದಾರೆ. ಅವರಿಗೆ 2 ದಿನಗಳಿಗೆ ಬೇಕಾಗುವಷ್ಟು  ಆಹಾರ ಪಟ್ಟಣಗಳನ್ನು ವಿತರಿಸಿರುವುದಾಗಿ ತಿಳಿಸಿದರು.

ಮೇ 31ರವರೆಗೆ ಪ್ರತಿ ದಿನ 10 ರೈಲುಗಳು ರಾಜ್ಯದಿಂದ ಹೊರಡಲಿದ್ದು, ಒಟ್ಟು 126 ಶ್ರಮಿಕ್ ಎಕ್ಸ್ ಪ್ರೆಸ್ ರೈಲುಗಳಲ್ಲಿ ಕಾರ್ಮಿಕರು ಉಚಿತವಾಗಿ ಪ್ರಯಾಣ ಬೆಳೆಸಲಿದ್ದಾರೆ ಎಂದು ವಿವರಿಸಿದರು.

ಮಕ್ಕಳಿಗೆ ಚೆನ್ನಪಟ್ಟಣದ ಗೊಂಬೆ: ರೈಲಿನಲ್ಲಿ ಇಂದು ಪ್ರಯಾಣ ಬೆಳೆಸಿರುವ ಎಲ್ಲಾ ಮಕ್ಕಳಿಗೆ ರೈಲ್ವೆ ಇಲಾಖೆಯಿಂದ ಚೆನ್ನಪಟ್ಟಣದ ಗೊಂಬೆ ವಿತರಿಸಲಾಗುತ್ತಿದೆ. ವಿಮಾನ ಪ್ರಯಾಣದ ವೇಳೆ ಮಕ್ಕಳಿಗೆ ಆಟಿಕೆ ನೀಡುವ ಮಾದರಿಯಲ್ಲಿ ರೈಲಿನಲ್ಲಿಯೂ ವಲಸೆ ಕಾರ್ಮಿಕರ ಮಕ್ಕಳಿಗೆ ಮರದ ಗೊಂಬೆಗಳನ್ನು ನೀಡಲಾಗುತ್ತಿದೆ. ಇದರಿಂದ ನಮ್ಮ ರಾಜ್ಯದ ಕುಶಲ ಕರ್ಮಿಗಳ ಖ್ಯಾತಿ ಹೊರ ರಾಜ್ಯಗಳಿಗೂ ತಲುಪಿದಂತಾಗುತ್ತದೆ. ಇದಲ್ಲದೇ ಎಲ್ಲ ರೈಲು ನಿಲ್ದಾಣಗಳಲ್ಲಿ ಚೆನ್ನಪಟ್ಟಣದ ಗೊಂಬೆ  ಮಳಿಗೆ ತೆರೆದಿರುವುದು ಶ್ಲಾಘನಾರ್ಹ ಎಂದರು.

SCROLL FOR NEXT