ರಾಜ್ಯ

ಪರ್ಯಾಯ ಶಿಕ್ಷಣ ವಿಧಾನದತ್ತ ಶಿಕ್ಷಣ ಇಲಾಖೆ ದೃಷ್ಟಿ: 3 ಶೈಕ್ಷಣಿಕ ವಾಹಿನಿ ತೆರೆಯಲು ಅನುಮತಿ ಕೋರಿ ಕೇಂದ್ರಕ್ಕೆ ಪತ್ರ

Manjula VN

ಬೆಂಗಳೂರು: ಕೊರೋನಾ ಶಿಕ್ಷಣ ವಲಯದ ಮೇಲೆ ಭಾರೀ ಪರಿಣಾಮ ಬೀರಿದ್ದು, ಈ ಹಿನ್ನೆಲೆಯಲ್ಲಿ ಪರ್ಯಾಯ ಶಿಕ್ಷಣ ವಿಧಾನದತ್ತ ಮುಖ ಮಾಡಿರುವ ಶಿಕ್ಷಣ ಇಲಾಖೆ 3 ಶೈಕ್ಷಣಿಕ ವಾಹಿನಿಗಳನ್ನು ತೆರೆಯಲು ಕೇಂದ್ರ ಸರ್ಕಾರದ ಅನುಮತಿಯನ್ನು ಕೋರಿದೆ. 

ಈ ಕುರಿತು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕೇಂದ್ರ ಸಚಿವ ಪ್ರಕಾಶ್ ಜವಡೇಕರ್ ಅವರಿಗೆ ಪತ್ರ ಬರೆದಿದ್ದು, ದೂರದರ್ಶದ ಮೂಲಕ ಬೋಧನೆ ಮಾಡುವ ಸಲುವಾಗಿ ಸರ್ಕಾರ 3 ಶೈಕ್ಷಣಿಕ ವಾಹಿನಿಗಳನ್ನು ತೆರೆಯಲು ನಿರ್ಧರಿಸಿದ್ದು, ಈ ಕುರಿತು ಅನುಮತಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. 

ಈ ವಾಹಿನಿಗಳ ಮೂಲಕ ಇಂಗ್ಲೀಷ್, ಕನ್ನಡ ಹಾಗೂ ಉರ್ದು ಸೇರಿದಂತೆ ಇನ್ನಿತರೆ ಸ್ಥಳೀಯ 9 ಭಾಷೆಗಳಲ್ಲಿ ಮಕ್ಕಳಿಗೆ ಬೋಧನೆ ಮಾಡಲಾಗುತ್ತದೆ. ಇದರಿಂತ ಎಲ್ಲಾ ವಿದ್ಯಾರ್ಥಿಗಳಿಗೆ ಸಹಾಯಕವಾಗಲಿದೆ ಎಂದು ತಿಳಿಸಿದ್ದಾರೆ. 

ಈಗಾಗಲೇ ಇಲಾಖೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿದ್ದು, ಪ್ರಸ್ತುತ ಅಸ್ತಿತ್ವದಲ್ಲಿರುವ ಚಂದನಾ ವಾಹಿನಿಯಲ್ಲಿ 6 ಗಂಟೆಗಳ ಕಾಲ ಸ್ಲಾಟ್ ಗಳ ಆಧಾರದ ಮೇಲೆ ಬೋಧನೆ ಮಾಡಲಾಗುತ್ತದೆ. ಮನೆಯಿಂದಲೇ ಕಲಿಯಲು ಮಕ್ಕಳಿಗೆ ಟಿವಿ ಅತ್ಯುತ್ತಮ ಸಾಧನವಾಗಿದೆ. ಸ್ಮಾರ್ಟ್ ಫೋನ್ ಹಾಗೂ ಇತರೆ ಸಾಧನಗಳಿಗಿಂತಲೂ ಟಿವಿ ಅತ್ಯುತ್ತಮವಾಗಿದ್ದು, ಶೇ.95ಕ್ಕಿಂತಲೂ ಹೆಚ್ಚು ಮನೆಗಳಲ್ಲಿ ಟಿವಿ ಸೌಲಭ್ಯವಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ. 

SCROLL FOR NEXT