ರಾಜ್ಯ

ಉದ್ಯೋಗ ನೀಡಲು ನಿಗೂಢ ಸ್ಥಳದಲ್ಲಿದ್ದವರನ್ನು ಹುಡುಕಿ ಕೊಂಡು ಹೋದ ತಾಲ್ಲೂಕು ಪಂಚಾಯಿತಿ ಇಒ!

Vishwanath S

ಗಂಗಾವತಿ: ನರೇಗಾ ಯೋಜನೆಯಲ್ಲಿ ಊರಲ್ಲಿರುವವರಿಗೆ ಸರಿಯಾಗಿ ಉದ್ಯೋಗ ಕೊಡಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಾನಾ ತಂಟೆ ತಕರಾರುಗಳಾಗುತ್ತವೆ. ಆದರೆ ಊರಿಗೆ ರಸ್ತೆಯೇ ಇಲ್ಲದಂತ ನಿಗೂಢ ಸ್ಥದಲ್ಲಿ ವಾಸವಾಗಿದ್ದ ಜನರನ್ನು ಹುಡುಕಿಕೊಂಡು ಹೋಗಿ ತಾಲ್ಲೂಕು ಪಂಚಾಯಿತಿ ಇಒ, ಮೋಹನ್ ಉದ್ಯೋಗ ನೀಡಿದ ಘಟನೆ ನಡೆಯಿತು.

ತಾಲ್ಲೂಕಿನ ಹಂಪಸದುರ್ಗಾ ಗ್ರಾಮದಿಂದ 3 ಕಿ.ಮೀ ಅಂತರ ಇರುವ ರಸ್ತೆಯೇ ಇಲ್ಲದ ಕಡಿದಾದ ಮಾರ್ಗದಿಂದ ಕೂಡಿರುವ ಗುಡ್ಡಗಾಡು ಪ್ರದೇಶದಲ್ಲಿ ವಾಸವಾಗಿರುವ ಪರಿಶಿಷ್ಟ ಜಾತಿ ಜನಾಂಗದ 20 ಕುಟುಂಬಗಳನ್ನು ಕಾಲ್ನಡಿಗೆಯಲ್ಲಿಯೇ ತಾಲ್ಲೂಕು ಪಂಚಾಯಿತಿ ಇಒ ಮೋಹನ್ ಹುಡುಕಿಕೊಂಡು ಹೋಗಿ ಅಲ್ಲಿನ ಜನರ ಮೊಗದಲ್ಲಿ ಸಂತಸಕ್ಕೆ ಕಾರಣರಾದರು.

ಸಕರ್ಾರದಿಂದ ಈ ಕುಟುಂಬಕ್ಕೆ ಕೃಷಿ ಭೂಮಿ ಮಂಜೂರಾಗಿದೆ. ಆದರೆ ವಾಸಕ್ಕೆ ಯೋಗ್ಯವಿಲ್ಲದಂತ ಪ್ರದೇಶದಲ್ಲಿ ಇರುವ ಜನರು ಕೃಷಿ ಮಾಡಿಕೊಂಡು ಇರುವ ಬಗ್ಗೆ ಮಾಹಿತಿ ಪಡೆದುಕೊಂಡ ಇಒ, ದ್ವಿಚಕ್ರ ವಾಹನವೂ ಹೋಗದಂತ ಕಿರಿದಾದ ರಸ್ತೆಯಲ್ಲಿ ನಡೆದುಕೊಂಡು ಹೋಗಿ ಜನರನ್ನು ತಲುಪಿದರು.

ಬಳಿಕ ನರೇಗಾ ಯೋಜನೆಯ ಉದ್ಯೋಗ ಖಾತ್ರಿಯಲ್ಲಿ ಬದು ನಿರ್ಮಾಣಕ್ಕೆ ಅವಕಾಶವಿದೆ. ಯೋಜನೆ ಬಳಸಿಕೊಳ್ಳಿ ಎಂದು ಇಒ ಜನರಿಗೆ ತಿಳಿ ಹೇಳಿದರು. ಪಂಚಾಯಿತಿ ಅಧಿಕಾರಿಗಳ, ಕೃಷಿಕರ ಜಮೀನುಗಳಲ್ಲಿ ಮಾರ್ಕ್ ಔಟ್  ಮಾಡಿದರು.

2014ರಲ್ಲಿ ಡಿಸಿ ಈಗ ಇಒ ಭೇಟಿ:
ತಾಲ್ಲೂಕಿನ ಆಗೋಲಿ ಗ್ರಾಮ ಪಂಚಾಯಿತಿಯಲ್ಲಿದ್ದರೂ ಅಜ್ಞಾತವಾಗಿರುವ ಸವುಳ ಹರಿವು ಕ್ಯಾಂಪಿಗೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ಮೋಹನ್ ಭೇಟಿ ನೀಡಿ ಅಲ್ಲಿನ ಜನರ ಕುಂದು ಕೊರತೆ ಆಲಿಸಿದರು.

ಗ್ರಾಮಕ್ಕೆ ಹೋಗಲು ಸೂಕ್ತ ರಸ್ತೆ ಇಲ್ಲದಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಇಒ, ಸುಮಾರು ಮೂರು ಕಿ.ಮೀ. ಅಂತರದಲ್ಲಿರುವ ಗ್ರಾಮಕ್ಕೆ ಕಾಲ್ನಡಿಗೆಯ ಮೂಲಕ ತೆರಳಿದರು. ಬಳಿಕ ಅಲ್ಲಿನ ಜನರೊಂದಿಗೆ ಸಭೆ ನಡೆಸಿ ಕುಂದು ಕೊರತೆ ಆಲಿಸಿದರು.

ಅಲ್ಲಿದ್ದ ಕೆಲ ಜನ ಮಾತನಾಡಿ, 2014ರಲ್ಲಿ ಆಗಿನ ಜಿಲ್ಲಾಧಿಕಾರಿ ಕೆ. ಸತ್ಯಮೂತರ್ಿ ಭೇಟಿ ನೀಡಿ ಹೋಗಿದ್ದು ಬಿಟ್ಟರೆ, ಇದುವರೆಗೂ ಯಾವೊಬ್ಬ ಅಧಿಕಾರಿ ಬಂದಿಲ್ಲ. ಮೊದಲ ಬಾರಿಗೆ ತಾಲ್ಲೂಕು ಹಂತದ ಅನುಷ್ಠಾನ ಅಧಿಕಾರಿ ಬಂದಿರುವುದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಇಒ ನಡೆಸಿದ ಸಭೆಯಲ್ಲಿ ಜನ, ಕುಡಿಯುವ ನೀರು, ರಸ್ತೆ, ವಿದ್ಯುತ್, ಶೌಚಾಲಯ, ಮನೆಯಂತ ಅಗತ್ಯ ಸೌಲಭ್ಯಗಳ ಕೊರತೆಯ ಬಗ್ಗೆ ಮಾಹಿತಿ ನೀಡಿದರು. ಎಲ್ಲವನ್ನು ಪಟ್ಟಿ ಮಾಡಿಕೊಂಡ ಇಒ, ನರೇಗಾಯದಲ್ಲಿ ಮೊದಲ ಕೆಲಸ ಮಾಡಿಕೊಳ್ಳಿ, ನೂರು ದಿನದ ಕೂಲಿ ಸಿಗುತ್ತದೆ, ಬಳಿಕ ಎಲ್ಲಾ ಸಔಲಭ್ಯಗಳ ಬಗ್ಗೆ ಗಮನ ಹರಿಸುವೆ ಎಂದು ಇಒ ಮಾಹಿತಿ ನೀಡಿದರು.

ವರದಿ: ಶ್ರೀನಿವಾಸ ಎಂ.ಜೆ

SCROLL FOR NEXT