ರಾಜ್ಯ

ಅರ್ನಬ್ ಬಂಧನದೊಂದಿಗೆ ಮಹಾರಾಷ್ಟ್ರದಲ್ಲಿನ ಸಮ್ಮಿಶ್ರ ಸರ್ಕಾರದ ಅಂತ್ಯ ಆರಂಭ: ಪ್ರಹ್ಲಾದ್ ಜೋಶಿ

Shilpa D

ಮಂಗಳೂರು: ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ಮುಂಬೈನಲ್ಲಿ ಬಂಧಿಸುವುದರೊಂದಿಗೆ ಮಹಾರಾಷ್ಟ್ರದಲ್ಲಿನ ಸಮ್ಮಿಶ್ರ ಸರ್ಕಾರದ ‘ಅಂತ್ಯದ ಆರಂಭ’ ವಾಗಿದೆ ಎಂದು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹಾಗೂ ಬಿಜೆಪಿಯ ಹಿರಿಯ ಮುಖಂಡ ಪ್ರಹ್ಲಾದ್ ಜೋಶಿ ಗುರುವಾರ ಎಂದು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಸರ್ಕಾರ ಅರ್ನಬ್ ರನ್ನು ತಕ್ಷಣ ಬಿಡುಗಡೆ ಮಾಡಬೇಕು. ಪತ್ರಕರ್ತನ ಬಂಧನ ಖಂಡನೀಯ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಬಹುದಾದರೂ ಸರ್ಕಾರ ಪತ್ರಕರ್ತನನ್ನು ಬಂಧಿಸಿ ನಡೆಸಿಕೊಂಡ ರೀತಿ ಆಘಾತಕಾರಿ ಎಂದು ಹೇಳಿದ್ದಾರೆ.

ಗೋಸ್ವಾಮಿ ಬಿಜೆಪಿ ವಿರುದ್ಧ ಹಲವು ಬಾರಿ ಮಾತನಾಡಿದ್ದಾರೆ ಎಂದಿರುವ ಜೋಶಿ, ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮತ್ತು ಅವರು ಪ್ರಧಾನಿಯಾದ ನಂತರ ಅನೇಕ ಟಿವಿ ವಾಹಿನಿಗಳು ಮೋದಿ ವಿರುದ್ಧ ಕೆಟ್ಟದಾಗಿ ಬಿಂಬಿಸಿವೆ. ಆದರೆ ಮಹಾರಾಷ್ಟ್ರ ಸರ್ಕಾರ ಬುಧವಾರ ನಡೆದುಕೊಂಡ ರೀತಿಯಲ್ಲಿ ಬಿಜೆಪಿ ಸರ್ಕಾರಗಳು ನಡೆದುಕೊಂಡಿಲ್ಲ
ಎಂದು ಹೇಳಿದ್ದಾರೆ. ಮಾಧ್ಯಮ ತಮ್ಮ ಜವಾಬ್ದಾರಿ ಮಾಡುತ್ತಿದೆ. ಆದರೆ ಮಹಾರಾಷ್ಟ್ರ ಸರಕಾರ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮಾಡಿದೆ. ಮಹಾರಾಷ್ಟ್ರ ಸರ್ಕಾರದ ನಡೆಯನ್ನು ವಿರೋಧಿಸುತ್ತೇನೆ ಎಂದು ಅವರು ಎಂದು ಹೇಳಿದ್ದಾರೆ.

SCROLL FOR NEXT