ರಾಜ್ಯ

ಕೇರಳ-ಕರ್ನಾಟಕ ಗಡಿಯಲ್ಲಿ ವ್ಯಕ್ತಿ ಸಾವಿನ ಪ್ರಕರಣಕ್ಕೆ ಟ್ವಿಸ್ಟ್; ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ಕಾರಣ ಬಹಿರಂಗ

Shilpa D

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಶವವಾಗಿ ಪತ್ತೆಯಾದ 33 ವರ್ಷದ ರೆಸ್ಟೋರೆಂಟ್ ಕಾರ್ಮಿಕನನ್ನು ಕೊಲೆ ಮಾಡಿರಬಹುದು ಎಂದು ಮರಣೋತ್ತರ ವರದಿಯನ್ನು ಉಲ್ಲೇಖಿಸಿ ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಥಳಪಾಡಿಯ ದೇವಿಪುರ  ಗ್ರಾಮದ ನಿವಾಸಿ ಹನುಮಂತರಾಯ ಕುಂಜತ್ತೂರಿನಲ್ಲಿ ಶನಿವಾರ ಬೆಳಗ್ಗೆ 4 ಗಂಟೆಯಲ್ಲಿ ಸಾವನ್ನಪ್ಪಿದ್ದ, ಮಂಜೇಶ್ವರ ಪೊಲೀಸರು ಗಸ್ತು ತಿರುಗುವ  ವೇಳೆ ಶವ ಪತ್ತೆಯಾಗಿತ್ತು.

ಶವದ ಪಕ್ಕೆ ಸ್ಕೂಟರ್ ಕೂಡ ಪತ್ತೆಯಾಗಿತ್ತು, ಆದರೆ ಅಪಘಾತವಾಗಿದೆ ಎಂಬುದಕ್ಕೆ ದ್ವಿಚಕ್ರವಾಹನದಲ್ಲಿ ಯಾವುದೇ ಗುರುತುಗಳಿರಲಿಲ್ಲ.

ಬೆಳಗ್ಗೆ 4 ಗಂಟೆಗೆ ಎಂದಿನಂತೆ ಅವನು ಕೆಲಸಕ್ಕೆ ಹೋಗಿದ್ದ, ಎಂದು ಆತನ ಪತ್ನಿಯನ್ನು ವಿಚಾರಿಸಿದಾಗ ಆಕೆ ಪೊಲೀಸರಿಗೆ ತಿಳಿಸಿದ್ದಾಗಿ ಸಬ್ ಇನ್ಸ್ ಪೆಕ್ಟರ್ ಹೇಳಿದ್ದಾರೆ.

ಬೆಳಗ್ಗೆ 4 ಗಂಟೆಗೆ ಆತನ ಶವ ಪತ್ತೆಯಾದ ಕಾರಣ ಹನುಮಂತಯ್ಯ ಪತ್ನಿ ಹೇಳಿಕೆ ಪೊಲೀಸರಿಗೆ ಅನುಮಾನ ಮೂಡಿಸಿತು.  ಖಚಿತವಾಗಿ ಹೇಳುವುದಾದರೆ, ಕರ್ನಾಟಕದ ದೇವಿಪುರ ಮತ್ತು ಕೇರಳದ ಕುಂಜತೂರ್‌ಪದವ್ ನಡುವಿನ ಅಂತರವು 2 ಕಿ.ಮೀ. ಮಾತ್ರ, 

ಹನುಮಂತಯ್ಯ ಮಂಗಳೂರಿನ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದು. ಕಾಸರಗೋಡಿಗೆ ಹೋಗುವ ಕಾರಣ ಇರಲಿಲ್ಲ ಎಂದು ಕಾಸರಗೋಡು ಉಪ ಪೊಲೀಸ್ ಅಧೀಕ್ಷಕ ಬಾಲಕೃಷ್ಣ ನಾಯರ್ ತಿಳಿಸಿದ್ದಾರೆ.  ಗದಗ ಮೂಲದ ಹನುಮಂತಯ್ಯ ತನ್ನ ಪತ್ನಿ ಜೊತೆ ಥಳಪ್ಪಾಡಿಯಲ್ಲಿ ವಾಸಿಸುತ್ತಿದ್ದ.

ಪ್ರಕರಣದಲ್ಲಿ ಆತನ ಪತ್ನಿಯ ಮೇಲೆ ಅನುಮಾನ ಮೂಡಿದ್ದು, ಆಕೆಯ ಹೇಳಿಕೆ ಅನುಮಾನ ಮೂಡಿಸಿದೆ ಎಂದು ತಿಳಿಸಿದ್ದಾರೆ. ಆತನ ಮೊಬೈಲ್ ಫೋನ್‌ನಿಂದ ಸಿಗ್ನಲ್‌ಗಳನ್ನು ಬಳಸಿಕೊಂಡು ಹನುಮಂತಯ್ಯ ಸಾವಿನ ಪ್ರಕರಣವನ್ನು ತನಿಖೆ ನಡೆಸಲು ಸೈಬರ್ ಪೊಲೀಸರ ಸಹಾಯವನ್ನು ಕೋರಿದ್ದಾರೆ.

ಆದರೆ ತನಿಖೆಯ ಸಮಯದಲ್ಲಿ, ಅವರು ಕರ್ನಾಟಕದಲ್ಲಿ ಕೊಂದು, ಶವವನ್ನು ಕೇರಳದಲ್ಲಿ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT