ರಾಜ್ಯ

ಬೆಂಗಳೂರು ರೈಲ್ವೆ ಪೊಲೀಸರಿಂದ ಭೂಪಾಲ್ ನಿಂದ ನಾಪತ್ತೆಯಾಗಿದ್ದ ಅಪ್ರಾಪ್ತೆಯ ರಕ್ಷಣೆ

Shilpa D

ಬೆಂಗಳೂರು: ಭೂಪಾಲ್ ನ ಕಮಲಾ ನಗರದಿಂದ ನಾಪತ್ತೆಯಾಗಿದ್ದ 16 ವರ್ಷದ ಬಾಲಕಿಯನ್ನು ಬೆಂಗಳೂರು ಪೊಲೀಸರು ರಕ್ಷಿಸಿದ್ದಾರೆ.

ಬಾಲಕಿ ನಾಪತ್ತೆಯಾಗಿದ್ದಾಳೆ ಎಂದು ವಿಷಯ ತಿಳಿದ 5 ಗಂಟೆಯೊಳಗೆ ಕಾರ್ಯಾಚರಣೆ ನಡೆಸಿದ ಬೆಂಗಳೂರು ರೈಲ್ವೆ ರಕ್ಷಣಾ ಪಡೆ ಬಾಲಕಿಯನ್ನು ರಕ್ಷಿಸಿದೆ. ನವದೆಹಲಿ-ಬೆಂಗಳೂರು ಫೆಸ್ಟಿವಲ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ನಿಂದ ಯಲಹಂಕ ಸಮೀಪ ಆಕೆಯನ್ನು ರಕ್ಷಿಸಿದ್ದಾರೆ.

ಐಪಿಸಿಯ ಸೆಕ್ಷನ್ 363 ರ ಅಡಿಯಲ್ಲಿ ಅಪಹರಣದ ಪ್ರಕರಣವನ್ನು ಆಕೆಯ ಪೋಷಕರು ಭಾನುವಾರ ಭೋಪಾಲ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ ಮತ್ತು ಜಬಲ್ಪುರದ ಆರ್ ಪಿ ಎಫ್ ವಲಯ ಕಚೇರಿ ಬೆಂಗಳೂರಿನ ಪೊಲೀಸರಿಗೆ ಮಾಹಿತಿ ನೀಡಿತ್ತು.

12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯನ್ನು ಆಕೆಯ ಸಹಪಾಠಿ ಮನವೊಲಿಸಿ ತನ್ನ ಜೊತೆ ಊರು ಬಿಟ್ಟು ಬರುವಂತೆ ತಿಳಿಸಿದ್ದಾನೆ. 17 ವರ್ಷ ವಯಸ್ಸಿನ ಬಾಲಕನ ಮಾತು ಕೇಳಿದ ಆಕೆ ನಗರ ಬಿಟ್ಟು ಬರಲು ನಿರ್ಧರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆ ನಾಪತ್ತೆಯಾಗಿದ್ದಾಳೆ ಎಂದು ತಿಳಿದ ನಂತರ ಪೋಷಕರು ಪ್ರಕರಣ ದಾಖಲಿಸಿದ್ದಾರೆ.

ಸೋಮವಾರ ಮಧ್ಯಾಹ್ನ 1.30 ರ ಸುಮಾರಿಗೆ ಕರೆ ಬಂದ ಹಿನ್ನೆಲೆಯಲ್ಲಿ  ಆರ್‌ಪಿಎಫ್  ತಂಡಗಳನ್ನು ರಚಿಸಿ ಉತ್ತರ ಭಾರತದಿಂದ ಬೆಂಗಳೂರು ವಿಭಾಗಕ್ಕೆ ಪ್ರವೇಶಿಸುವ ರೈಲುಗಳನ್ನು ಪರಿಶೀಲಿಸಿತು.

06528 ಸಂಖ್ಯೆಯ ರೈಲು ಹಿಂದೂಪುರ ಮತ್ತು ಯಲಹಂಕ ನಡುವೆ ಸಾಗುವಾಗ ಎಸ್ 8 ಬೋಗಿಯಲ್ಲಿ  38ನೇ ನಂಬರಿನ ಸೀಟಿನಲ್ಲಿ ಬಾಲಕಿ ಮತ್ತು 40ನೇ ಸೀಟಿನಲ್ಲಿ ಬಾಲಕ ಕುಳಿತಿದ್ದು ಕಂಡು ಬಂತು ಎಂದು ಪೊಲೀಸರು ತಿಳಿಸಿದ್ದಾರೆ.

ಸಂಜೆ 6 ರ ಸುಮಾರಿಗೆ ಇವರಿಬ್ಬರನ್ನು ಯಲಹಂಕ ನಿಲ್ದಾಣದಲ್ಲಿ ಇಳಿಸಲಾಯಿತು ಮತ್ತು ಪ್ಲಾಟ್ ಫಾರ್ಮ್ ನಲ್ಲಿ ಕಾಯುತ್ತಿದ್ದ ಪೊಲೀಸರು ಅಲ್ಲಿಂದ ಅವರನ್ನು ಕರೆದೊಯ್ದರು ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪೊಲೀಸರನ್ನು ಕಂಡ ಆಕೆ ಗೊಂದಲಕ್ಕೆ ಒಳಗಾದ ಆಕೆ ಬೆಂಗಳೂರಿಗೆ ಕರೆ ತಂದಿದ್ದಾನೆ ಎಂದು ಭಾವಿಸಿರಲಿಲ್ಲ,  ಭೂಪಾಲ್ ಪೊಲೀಸರು ಭದ್ರತೆಯೊಂದಿಗೆ ಇಬ್ಬರನ್ನು ವಾಪಸ್ ಕರೆದೊಯ್ದಿದ್ದಾರೆ.  ಬಾಲಕ ಕೂಡ ಅಪ್ರಾಪ್ತನಾಗಿದ್ದು, ಇಬ್ಬರ ವಿರುದ್ದ ವಿಭಿನ್ನ ಕೇಸ್ ಗಳನ್ನು ದಾಖಲಿಸಲಾಗಿದೆ.

SCROLL FOR NEXT