ರಾಜ್ಯ

ಬೆಂಗಳೂರು: ಮಹಡಿ ಮೇಲೆ ನಿಂತು ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಬುದ್ಧಿ ಕಲಿಸಿದ ಯುವತಿ, ವಿಡಿಯೋ!

Vishwanath S

ಬೆಂಗಳೂರು: ಮನೆಯ ಮಹಡಿ ಮೇಲೆ ನಿಂತು ಯುವತಿಯ ಎದುರು ಪ್ಯಾಂಟ್ ಬಿಚ್ಚಿ, ತನ್ನ ಸದೃಢ ದೇಹ ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸಿದ್ದ ಯುವಕನಿಗೆ ಬೆಂಗಳೂರು ಯುವತಿ ಸರಿಯಾಗೇ ಬುದ್ಧಿ ಕಲಿಸಿದ್ದಾಳೆ. 

ಬೆಂಗಳೂರಿನ ಕೋರಮಂಗಲದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೋರ್ವ ತಮ್ಮ ಮನೆಯ ಮಹಡಿ ಮೇಲೆ ನಿಂತು ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದನ್ನು ನೂಪುರ್ ಸರಸ್ವತ್ ಎಂಬಾಕೆ ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದು ನವೆಂಬರ್ 8ರಂದು ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಯುವಕನ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದರು. 

ನೂಪರ್ ತಮ್ಮ ಪೋಸ್ಟ್ ನಲ್ಲಿ ನಮ್ಮ ಅಪಾರ್ಟ್ ಮೆಂಟ್ ನ ಪಕ್ಕದ ಬಿಲ್ಡಿಂಗ್ ನಲ್ಲಿದ್ದ ಯುವಕ ಮಹಡಿ ಮೇಲೆ ನಿಂತು 1 ಗಂಟೆಗೂ ಹೆಚ್ಚು ಕಾಲ ನಮ್ಮ ಅಪಾರ್ಟ್ ಮೆಂಟ್ ನತ್ತ ದುರುಗುಟ್ಟಿ ನೋಡುತ್ತಿದ್ದ. ಇದು ನನಗೆ ಮುಜುಗುರವನ್ನು ಉಂಟು ಮಾಡಿತ್ತು. ಕೂಡಲೇ ಆತನಿಗೆ ನಾನು ಬೈದು ಕೂಗಾಡಿದೆ. ಆಗ ಆತ ತನ್ನ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ. ಆಗ ನಾನು ಇದನ್ನು ಫೋಟೋ ತೆಗೆದುಕೊಳ್ಳುತ್ತೇನೆ ಎಂದು ಎಚ್ಚರಿಸಿ ಕ್ಯಾಮೆರಾ ತೆಗೆದುಕೊಂಡು ಬಂದೆ. ಅಷ್ಟರಲ್ಲಿ ಆತ ಪ್ಯಾಂಟ್ ಧರಿಸಿದ್ದ ಎಂದು ಬರೆದುಕೊಂಡಿದ್ದರು. 

ನಂತರ ನಾನು ದೂರು ಕೊಡಬೇಕೆ ಎಂದು ಯೋಜಿಸಿ ಮಾಲೀಕರಿಗೆ ಮಾಹಿತಿ ನೀಡಿದೆ. ಅವರು ಸರಿ ಎಂದು ತಿಳಿಸಿದರು. ಕೂಡಲೇ ನೂಪುರ್ ವಕೀಲರು, ಮಹಿಳಾ ಸಹಾಯವಾಣಿ ಹಾಗೂ ಸ್ನೇಹಿತರ ನೆರವು ಕೋರಿದ್ದರು. 

ನಂತರ ನವೆಂಬರ್ 9ರಂದು ನೂಪುರ್ ಕೋರಮಂಗಲ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ವಿವೇಕ್ ನಗರ ಪೊಲೀಸರು ಆರೋಪಿಯನ್ನು ಗುರುತಿಸಿ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. 

ಸದ್ಯ ಪೊಲೀಸರು ಆರೋಪಿಗೆ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ. ಆದರೆ ಮನೆ ಮಾಲೀಕ ಆತನನ್ನು ಮನೆಯಿಂದ ಹೊರ ಹಾಕುವುದಾಗಿ ತಿಳಿಸಿದ್ದಾರೆ. 

SCROLL FOR NEXT