ರಾಜ್ಯ

ಬೆಂಗಳೂರು: ಪಟಾಕಿ ಸಿಡಿತದಿಂದ ಕಣ್ಣಿನ ಗಾಯವಾದರ ಸಂಖ್ಯೆಯಲ್ಲಿ ತೀವ್ರ ಇಳಿಕೆ

Nagaraja AB

ಬೆಂಗಳೂರು: ಈ ವರ್ಷ ದೀಪಾವಳಿ ಪಟಾಕಿ ಸಿಡಿತದಿಂದ ಕಣ್ಣು ಗಾಯಗೊಂಡವರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಮಿಟೋ ವರ್ಷ ಪ್ರತಿ ವರ್ಷ ಏನಿಲ್ಲವೆಂದರೂ 30ಕ್ಕೂ ಇಂತಹ ಪ್ರಕರಣಗಳನ್ನು ನೋಡಬಹುದಾಗಿತ್ತು. ಆದರೆ, ಈ ವರ್ಷದ ದೀಪಾವಳಿಯ ಎರಡನೇ ದಿನ ಕೇವಲ ಮೂವರು ಬಾಲಕರು ಗಾಯಗೊಂಡಿದ್ದಾರೆ.

ಮೊದಲ ಪ್ರಕರಣದಲ್ಲಿ, ವಿಜಯನಗರದ 12 ವರ್ಷದ ಬಾಲಕನೊಬ್ಬ  ಹೂ ಕುಂಡ ಪಟಾಕಿಯಿಂದ  ಗಾಯಗೊಂಡಿದ್ದು, ಆತನ ಮೂಗು ಹಾಗೂ ಕಣ್ಣುರೆಪ್ಪೆಗಳಿಗೆ ಸುಟ್ಟ ಗಾಯಗಳಾಗಿವೆ. ಆತನ ಕಣ್ಣಿನ ಗುಡ್ಡೆಗೆ ಗಾಯವಾಗಿದ್ದು, ಕಣ್ಣಿನ ಗಾಯದ ಬಗ್ಗೆ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. 

ದೃಷ್ಟಿಗೆ ತೊಂದರೆಯಾಗುವ ಯಾವುದೇ ಕೇಂದ್ರ ಗುರುತುಗಳುಗಳಿಲ್ಲ ಎಂದು ಭಾವಿಸಿರುವುದಾಗಿ ಮಿಂಟೋ ಆಸ್ಪತ್ರೆ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ತಿಳಿಸಿದ್ದಾರೆ.

ಎರಡನೇ ಪ್ರಕರಣದಲ್ಲಿ ಸಂಪಿಗೆ ಹಳ್ಳಿ ಲೇಔಟ್ ನ 13 ವರ್ಷದ ಬಾಲಕನೊಬ್ಬನಿಗೆ ಪಟಾಕಿಯಿಂದ ಗಾಯವಾಗಿದೆ. ಮೂರನೇ ಪ್ರಕರಣದಲ್ಲಿ ಮಾಗಡಿ ರಸ್ತೆಯ 4 ವರ್ಷದ ಬಾಲಕನೊಬ್ಬ ಗಾಯಗೊಂಡಿದ್ದಾನೆ. 

ನಾರಾಯಣ ನೇತ್ರಾಲಯದಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿವೆ. ಆದಾಗ್ಯೂ ಇವುಗಳೆಲ್ಲವೂ ಚಿಕ್ಕ ಗಾಯಗಳಾಗಿರುವುದಾಗಿ ವೈದ್ಯರು ಹೇಳಿದ್ದಾರೆ. ಆಪೊಲೋ ಆಸ್ಪತ್ರೆಗೆ ಇಂತಹ ಎರಡು ಪ್ರಕರಣಗಳು ಬಂದಿರುವುದಾಗಿ ನೇತ್ರಶಾಸ್ತ್ರ  ಸಮಾಲೋಚಕ ಡಾ. ರಘು ನಾಗರಾಜ್ ತಿಳಿಸಿದ್ದಾರೆ.

SCROLL FOR NEXT