ಬೆಂಗಳೂರು: ನಗರದಲ್ಲಿ ಬಡ ವ್ಯಾಪಾರಿಗಳಿಂದ ಹಫ್ತಾ ವಸೂಲಿ ಮಾಡುತ್ತಿದ್ದ ಆರೋಪಿಗಳನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಯಲಹಂಕ ಸುತ್ತಮುತ್ತ ರಸ್ತೆ ಬದಿಯಲ್ಲಿರುವ ಬಡ ವ್ಯಾಪಾರಿಗಳನ್ನು ಗುರಿಯಾಗಿಸಿ ಹಫ್ತಾ ವಸೂಲಿ ಮಾಡುತ್ತಿದ್ದ ಕುಖ್ಯಾತ ಪಾಪಣ್ಣ ಗ್ಯಾಂಗ್ ಅನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.
ಪಾಪಣ್ಣ ಜೈಲಿನಲ್ಲಿರುವ ಹಿನ್ನೆಲೆಯಲ್ಲಿ ಜಾಮೀನು ಪಡೆದುಕೊಳ್ಳಲು ಹಣದ ಅಭಾವವಿದ್ದ ಕಾರಣ ಪಾಪಣ್ಣ ಸಹಚರರು ಹಫ್ತಾ ವಸೂಲಿಗೆ ಇಳಿದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಪ್ರಶಾಂತ್ ಕುಮಾರ್, ಸಂಜಯ್, ನವೀನ್, ಮಂಜುನಾಥ್, ರಮೇಶ್, ಸ್ಯಾಮುಯಲ್, ಉಮೇಶ್, ಸುಬ್ರಮಣಿ, ಮಂಜುನಾಥ್, ನಾಗರಾಜ್, ರಮೇಶ್ ಹಾಗೂ ಸುರೇಶ್ ಎಂದು ಗುರುತಿಸಲಾಗಿದೆ.
ಇನ್ನು ರಾತ್ರಿ ವೇಳೆ ಸಾರ್ವಜನಿಕರನ್ನು ಸುಲಿಗೆ ಮಾಡುತಿದ್ದ ಶಾಸ್ರ್ತಿಗ್ಯಾಂಗ್ ಅನ್ನು ಸಹ ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ರಾತ್ರಿ ವೇಳೆ ದ್ವಿಚಕ್ರ ವಾಹನದಲ್ಲಿ ಹೋಗುವವರನ್ನು ಟಾರ್ಗೇಟ್ ಮಾಡ್ತಿದ್ದ ಈ ಗ್ಯಾಂಗ್ ನಿರ್ಜನ ಪ್ರದೇಶದಲ್ಲಿ ಹೊಂಚು ಹಾಕಿ ಹಣ ಚಿನ್ನಾಭಾರಣ ದೋಚುತಿತ್ತು.
ಶ್ರೀಪಾದಶಾಸ್ರ್ತೀ, ವಿನ್ಸೆಂಟ್ ಬಾಬು, ಆಕಾಶ್ ನಾಯ್ಡು ಬಂಧಿತ ಆರೋಪಿಗಳು. ಬಂಧಿತರಿಂದ 1.5ಲಕ್ಷ ನಗದು, 7 ಗ್ರಾಂ ಚಿನ್ನ ಎರಡು ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಳ್ಳಲಾಗಿದೆ.