ರಾಜ್ಯ

ಬೆಳಗಾವಿ, ಕಾರವಾರದ ತಂಟೆಗೆ ಬಂದರೆ ತಕ್ಕ ಶಾಸ್ತಿ: ಎಂ.ಪಿ. ರೇಣುಕಾಚಾರ್ಯ

Manjula VN

ಬೆಂಗಳೂರು: ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಉದ್ದಟತನದ ಹೇಳಿಕೆ ಸಹಿಸುವುದಿಲ್ಲ. ಬೆಳಗಾವಿ, ಕಾರವಾರದ ತಂಟೆಗೆ ಬಂದರೆ ತಕ್ಕ ಶಾಸ್ತಿ ಎದುರಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಕಾಡುಗೊಲ್ಲ, ವೀರಶೈವ ಲಿಂಗಾಯಿತ ಮತ್ತು ಮರಾಠ ಜನಾಂಗದ ಅಭಿವೃದ್ದಿಗಾಗಿ ನಿಗಮ ಮಾಡಲಾಗಿದೆ. ಇದರ ಬಗ್ಗೆ ಕಾಂಗ್ರೆಸ್ ನಾಯಕರು ಅಪಸ್ವರ ಎತ್ತುವುದು ಬೇಡ. ಹಿಂದೆ ಧರ್ಮ ಒಡೆಯುವ ಪ್ರಯತ್ನ ಮಾಡಿ ಅವರು ಅನುಭವಿಸಿದ್ದಾಗಿದೆ. ಈ ಸಂಬಂಧ ಸಮುದಾಯದ ಸ್ವಾಮೀಜಿಗಳು ಹೇಳಿಕೆ ಕೊಟ್ಟರೆ ತಪ್ಪೇನಿಲ್ಲ ಎಂದರು.

ದಾವಣಗೆರೆ ಮಧ್ಯಕರ್ನಾಟಕದಲ್ಲಿದೆ ರಾಜಧಾನಿಯಾಗುವ ಎಲ್ಲ ಅರ್ಹತೆಯೂ ಇದೆ. ಹಾಗಾಗಿ ದಾವಣಗೆರೆಗೆ ಸಚಿವ ಸ್ಥಾನ ಕೊಡಬೇಕು. ಆದರೂ ಮುಖ್ಯಮಂತ್ರಿ ನಿರ್ಧಾರಕ್ಕೆ ನಾವು ಬದ್ಧ ಎನ್ನುವ ಮೂಲಕ ಪರೋಕ್ಷವಾಗಿ ತಾವು ಸಂಪುಟ ಸೇರುವ ಇಚ್ಛೆಯನ್ನು ಒತ್ತಿ ಹೇಳಿದರು.

SCROLL FOR NEXT