ಸಾಂದರ್ಭಿಕ ಚಿತ್ರ 
ರಾಜ್ಯ

ಮೊಬೈಲ್ ನಲ್ಲಿ ಮಾತನಾಡುತ್ತಾ ಯೋಧ ಬೈಕ್ ಚಾಲನೆ: ಪತ್ನಿ ಸಾವು

ಹಂಪ್‌ನಲ್ಲಿ ಬೈಕ್ ಹಾರಿದ್ದರಿಂದ ಹಿಂಬದಿ ಕುಳಿತ್ತಿದ್ದ ಯೋಧನ ಪತ್ನಿ ಕೆಳಕ್ಕೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಮೂಗನೂರು ಗ್ರಾಮದ ಬಳಿ ಸಂಭವಿಸಿದೆ.

ಬಾಗಲಕೋಟೆ: ಹಂಪ್‌ನಲ್ಲಿ ಬೈಕ್ ಹಾರಿದ್ದರಿಂದ ಹಿಂಬದಿ ಕುಳಿತ್ತಿದ್ದ ಯೋಧನ ಪತ್ನಿ ಕೆಳಕ್ಕೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಮೂಗನೂರು ಗ್ರಾಮದ ಬಳಿ ಸಂಭವಿಸಿದೆ

ಯೋಧ ಶೇಖರಯ್ಯ ಅವರ ಪತ್ನಿ ಪುಷ್ಪಲತಾ(35) ಮೃತಪಟ್ಟಿದ್ದು, ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಮಗನ ವಿಡಿಯೋ ಕಾಲ್ ಬಂದಿದ್ದು, ಶೇಖರಯ್ಯ ಅವರು ತಮ್ಮ ಮಗನೊಂದಿಗೆ ಮಾತನಾಡುತ್ತಲೇ ಬೈಕ್ ಚಲಾಯಿಸುತ್ತಿದ್ದರು. ಈ ವೇಳೆ ಮುಂದಿದ್ದ ಹಂಪ್‌ ಅನ್ನು ಗಮನಿಸದೇ ಅವರು ಬೈಕ್ ಚಲಾಯಿಸಿದ್ದರಿಂದ ಹಂಪ್‌ನಲ್ಲಿ ಬೈಕ್ ಜಂಪ್ ಆಗಿದ್ದರಿಂದ ಹಿಂಬದಿ ಕುಳಿತಿದ್ದ ಅವರ ಪತ್ನಿ ಪುಷ್ಪಲತಾ ನೆಲಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮೃತ ಪತ್ನಿಯನ್ನು ಅಪ್ಪಿಕೊಂಡು ಯೋಧ ಕಣ್ಣೀರು ಹಾಕಿ‌ ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಇಂದು ಬೆಳಗ್ಗೆ ಕರ್ತವ್ಯಕ್ಕಾಗಿ ಜಮ್ಮು ಕಾಶ್ಮೀರಕ್ಕೆ ಹೊರಡಬೇಕಿದ್ದ ಯೋಧ ಪತ್ನಿಯನ್ನು ಕಳೆದುಕೊಂಡಿದ್ದಾರೆ. ಪತ್ನಿಯನ್ನು  ಹಿರೆಮಳಗಾವಿ ಗ್ರಾಮದಲ್ಲಿರುವ ತವರು ಮನೆಗೆ ಬಿಡಲು ಹೋಗುವಾಗ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ಅಮೀನಗಢ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪುಷ್ಪಲತಾ ಸಾವಿಗೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!