ರಾಜ್ಯ

ಬೆಂಗಳೂರಿನಿಂದ ಅಮೆರಿಕಕ್ಕೆ ತಡೆರಹಿತ ವಿಮಾನ ಆರಂಭಿಸಲಿರುವ ಏರ್‌ಇಂಡಿಯಾ

Vishwanath S

ಬೆಂಗಳೂರು: ಬೆಂಗಳೂರಿನ ಪ್ರಯಾಣಿಕರು ಶೀಘ್ರದಲ್ಲೇ ಅಮೆರಿಕಾ ದೇಶಕ್ಕೆ ತಡೆರಹಿತವಾಗಿ ಪ್ರಯಾಣ ಬೆಳೆಸಬಹುದು. 

ರಾಷ್ಟ್ರೀಯ ಕ್ಯಾರಿಯರ್ ಏರ್ ಇಂಡಿಯಾ ಜ.11ರಿಂದ ವಾರಕ್ಕೆ ಎರಡು ವಿಮಾನಗಳ ಹಾರಾಟ ನಡೆಸಲಿದೆ.

ಇದರಿಂದ ಇದು ಭಾರತ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ನಡುವೆ ತಡೆರಹಿತ ವಿಮಾನ ಸೇವೆ ಒದಗಿಸಿದ ಮೊದಲ ವಿಮಾನ ನಿಲ್ದಾಣವಾಗಿದೆ. ಇದು ಬೆಂಗಳೂರಿನ ಕೆಂಪೇಗೌಡ ವಿಮಾನನಿಲ್ದಾಣದಿಂದ ಪ್ರಯಾಣದ ಬೆಳೆಸಲಿದೆ.

ಇದರಿಂದ ಬೆಂಗಳೂರು ನಗರದ ಪ್ರಮುಖ ದ್ವಾರವಾಗಲಿದೆ. ಇದು ಪ್ರಯಾಣಿಕರಿಗೆ ವೇಗವಾಗಿ ಅಮೆರಿಕ ತಲುಪಲು ನೆರವಾಗಲಿದೆ.

ಇದಕ್ಕಾಗಿ 238 ಆಸನದ ಬೋಯಿಂಗ್ 777-200 ಎಲ್ ಆರ್ ವಿಮಾನ ಕಾರ್ಯನಿರ್ವಹಿಸಲು ಏರ್ ಇಂಡಿಯಾ ಚಿಂತನೆ ನಡೆಸುತ್ತಿದೆ. 

SCROLL FOR NEXT