ರಾಜ್ಯ

ವೈರಸ್ ನಿರೋಧಕ ಸ್ಥಳೀಯ 5 ಮೆಣಸಿನಕಾಯಿ ಪ್ರಭೇದಗಳು ಮುಂದಿನ ವರ್ಷ ಮಾರುಕಟ್ಟೆಗೆ: ಐಐಹೆಚ್ ಆರ್ ಸಂಶೋಧನೆ

Sumana Upadhyaya

ಬೆಂಗಳೂರು: ಚಿಲ್ಲಿ, ಮೆಣಸಿನ ಕಾಯಿ ಇಲ್ಲದಿದ್ದರೆ ಅಡುಗೆಯೇ ಆಗುವುದಿಲ್ಲ, ನಮ್ಮ ರಾಜ್ಯದ, ದೇಶದ ಪ್ರತಿಯೊಂದು ಪ್ರಾಂತ್ಯ, ಪ್ರದೇಶಗಳಲ್ಲಿ ಅದರದ್ದೇ ಆದ ವಿಶೇಷ ಮೆಣಸಿನ ಪ್ರಭೇದಗಳಿವೆ. ಸ್ಥಳೀಯ ವೈವಿಧ್ಯವನ್ನು ರಕ್ಷಿಸಲು ಮತ್ತು ರೈತರಿಗೆ ಅಗ್ಗದ ದರದಲ್ಲಿ ಬೀಜಗಳನ್ನು ಒದಗಿಸಲು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ(ಐಐಹೆಚ್ಆರ್) ವೈರಸ್ ತಡೆಯುವ ಸ್ಥಳೀಯ ಮೆಣಸಿನ ಪ್ರಭೇದಗಳನ್ನು ಅಭಿವೃದ್ಧಿಪಡಿಸಿದ್ದು ಮುಂದಿನ ವರ್ಷ ಮಾರುಕಟ್ಟೆ ಪ್ರವೇಶಲಿದೆ.

ಈಗ ಎಲ್ಲೆಲ್ಲೂ ಕೊರೋನಾ ಸೋಂಕಿನದ್ದೇ ಸುದ್ದಿ. ಈ ಸಂದರ್ಭದಲ್ಲಿ ವೈರಸ್ ತಡೆಯುವ ಮೆಣಸು ಹೇಗಿರಬಹುದು ಎಂಬ ಕುತೂಹಲ ಎಲ್ಲರಲ್ಲಿರುತ್ತದೆ. ಈ ನಿಟ್ಟಿನಲ್ಲಿ ಐಐಹೆಚ್ ಆರ್ ಆತ್ಮ ನಿರ್ಭರ ಕೃಷಿ ಕಾರ್ಯಾಗಾರವನ್ನು ಆಯೋಜಿಸಿದ್ದು ಅದರ ನಿರ್ದೇಶಕ ಆರ್ ದಿನೇಶ್ ಮಾಹಿತಿ ನೀಡಿ, 8 ವರ್ಷಗಳ ಸಂಶೋಧನೆ ಇಂದು ಫಲ ಕೊಡುತ್ತಿದೆ. ಐದು ಸ್ಥಳೀಯ ಪ್ರಭೇದಗಳು ಮುಂದಿನ ವರ್ಷ ಡಿಸೆಂಬರ್ ಗೆ ಮಾರುಕಟ್ಟೆ ಪ್ರವೇಶಿಸಲಿದೆ. ಸ್ಥಳೀಯ ಪ್ರಭೇದಗಳನ್ನು ಬಳಸುವ ಮೂಲಕ ಆಮದು ಬೀಜಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದು ಮತ್ತು ದೇಶದ 150ರಿಂದ 200 ಕೋಟಿ ರೂಪಾಯಿಗಳಷ್ಟು ವರ್ಷಕ್ಕೆ ವಿದೇಶಿ ವಿನಿಮಯವನ್ನು ಉಳಿತಾಯ ಮಾಡಬಹುದು ಎಂದರು. 

ಹೊಸ ಮೆಣಸಿನ ಪ್ರಭೇದ ತಳೀಯವಾಗಿ ಮಾರ್ಪಡಿಸಿದ್ದವುಗಳಲ್ಲ, ವೈರಸ್ ದಾಳಿಯನ್ನು ತಡೆಯಲು ಸಾಂಪ್ರದಾಯಿಕವಾಗಿ ಬೆಳೆಸಲಾಗುತ್ತದೆ. ಆದ್ದರಿಂದ ಅವುಗಳನ್ನು ಸೇವಿಸಿದಾಗ ಅವು ಯಾವುದೇ ಅಡ್ಡಪರಿಣಾಮಗಳನ್ನು ಹೊಂದಿರುವುದಿಲ್ಲ ಎಂದು ಅವರು ಹೇಳಿದರು.

ತರಕಾರಿ ಪ್ರಭೇದಗಳ ಐಐಹೆಚ್ ಆರ್ ಪ್ರಧಾನ ವಿಜ್ಞಾನಿ ಟಿ ಮಾಧವಿ ರೆಡ್ಡಿ, ಬೆಳೆ ಬೇಡಿಕೆಗೆ ಅನುಗುಣವಾಗಿ ರೈತರು ಪ್ರತಿ ಕೆಜಿಗೆ 40,000 ರಿಂದ 70,000 ರೂಗಳವರೆಗೆ ಖಾಸಗಿ ಸಂಸ್ಥೆಗಳಿಂದ ಬೀಜಗಳನ್ನು ಖರೀದಿಸುತ್ತಾರೆ. ಆದರೆ ಐಐಎಚ್‌ಆರ್, ಪ್ರತಿ ಕೆಜಿಗೆ 20,000 ರಿಂದ 25 ಸಾವಿರ ರೂ.ಗಳಷ್ಟು ಬೀಜಗಳನ್ನು ಸರಬರಾಜು ಮಾಡಲಿದೆ. ಗುಂಟೂರಿನಲ್ಲಿ, ರೈತರು 8 ಸೆಂ.ಮೀ ಉದ್ದ ಮತ್ತು 1 ಸೆಂ.ಮೀ ಅಗಲವನ್ನು ಬಯಸುತ್ತಾರೆ, ಆದರೆ ಮಹಾರಾಷ್ಟ್ರದಲ್ಲಿ, ಬಣ್ಣದಲ್ಲಿ ಸಮೃದ್ಧವಾಗಿರುವ ಕಡಿಮೆ ಮೆಣಸಿನಕಾಯಿಗಳ ಅವಶ್ಯಕತೆಯಿದೆ. ಸ್ಥಳೀಯ ಆದ್ಯತೆಗಳಿಗೆ ಅನುಗುಣವಾಗಿ ಅಂತಹ ಐದು ಪ್ರಭೇದಗಳ ಮೆಣಸಿನಕಾಯಿ ಅಭಿವೃದ್ಧಿಪಡಿಸಲಾಗಿದೆ ಎಂದರು.

SCROLL FOR NEXT