ರಾಜ್ಯ

ಲಿಂಗಾಯತ ಸಮುದಾಯಕ್ಕೂ ಮೀಸಲಾತಿ ಅಗತ್ಯ: ಮುರುಘಾ ಮಠದ ಶ್ರೀ

Manjula VN

ಚಿತ್ರದುರ್ಗ: ಎಲ್ಲಾ ಜಾತಿಗಳಲ್ಲೂ ಬಡವರು, ಶೋಷಿತರು ಇದ್ದು, ವೀರಶೈವ ಲಿಂಗಾಯತ ಸಮುದಾಯಕ್ಕೂಮೀಸಲಾತಿ ಆಗತ್ಯವಿದೆ. ಕೇಂದ್ರದಲ್ಲಿ ಪ್ರಾತಿನಿಧ್ಯ ದೊರೆಯಬೇಕಿದೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಲಿಂಗಾಯತ ಧರ್ಮ ಹಾಗೂ ಜಾತಿಯ ಅಡಿಯಲ್ಲಿ ಸುಮಾರು 80ಕ್ಕಿಂತ ಹೆಚ್ಚು ಉಪಜಾತಿಗಳು ಬರುತ್ತವೆ. ಇವುಗಳಲ್ಲಿ ಅನೇಕರು ಬಡವರು, ಶೋಷಿತರು ಇದ್ದಾರೆ. ಅಂತಹವರನ್ನು ಗುರುತಿಸಿ ಒಳಮೀಸಲಾತಿ ಕೊಡಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಯುತ್ತಿದೆ. 

ಎಲ್ಲಾ ಜಾತಿ ಜನಾಂಗದವರು ಒಳಮೀಸಲಾತಿ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಈ ನೆಲೆಯಲ್ಲಿ ಕೇಂದ್ರದಲ್ಲಿ ಒಬಿಸಿಗೆ ಸೇರಿಸುವ ಹಕ್ಕೊತ್ತಾಯವನ್ನು ನಾವು ಮಾಡುತ್ತಿದ್ದೇವೆ. 2ಎ ಮೀಸಲಾತಿಗೆ ವೀರಶೈವ ಲಿಂಗಾಯತವು ಬರಲಿ ಎಂಬ ಒತ್ತಾಸೆಯಿದೆ. ಲಿಂಗಾಯತರಲ್ಲಿ ಶ್ರೀಮಂತರು ಮತ್ತು ಬಡವರಿದ್ದಾರೆ. ಅದರಲ್ಲಿರುವ ಬಡವರಿಗೆ ಅನುಕೂಲಗಳಾಗಬೇಕು. ಹಾಗಾಗಿ ಲಿಂಗಾಯತ ಜಾತಿಯನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಿ ಶೇ.15 ಮೀಸಲಾತಿ ಕೊಡಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು ತಿಳಿಸಿದ್ದಾರೆ. 

SCROLL FOR NEXT