ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಬೆಳಗಾವಿ ಸವದತ್ತಿಯಲ್ಲಿ ಭೀಕರ ಅಪಘಾತ, 7 ಕೂಲಿ ಕಾರ್ಮಿಕರು ಸಾವು

ಬೊಲೆರೋ ಹಾಗೂ ಟಾಟಾ ಏಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 7 ಜನ ಕೂಲಿ ಕಾರ್ಮಿಕರು ಪ್ರಾಣಬಿಟ್ಟಿರುವ ಘಟನೆ ಬೆಳಗಾವಿಯ ಸವದತ್ತಿ ಪಟ್ಟಣದ ಸಮೀಪ ನಡೆದಿದೆ.

Raghavendra Adiga
Updated On : 2 Oct 2020, 11:59 pm

ಬೆಳಗಾವಿ: ಬೊಲೆರೋ ಹಾಗೂ ಟಾಟಾ ಏಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 7 ಜನ ಕೂಲಿ ಕಾರ್ಮಿಕರು ಪ್ರಾಣಬಿಟ್ಟಿರುವ ಘಟನೆ ಬೆಳಗಾವಿಯ ಸವದತ್ತಿ ಪಟ್ಟಣದ ಸಮೀಪ ನಡೆದಿದೆ.

ಸವದತ್ತಿ ಪಟ್ಟಣ ಹೊರವಲಯದಲ್ಲಿ ಸಂಬವಿಸಿದ ಅಪಘಾತದಲ್ಲಿ ಮೃತರಾದವರೆಲ್ಲರೂ ರಾಮದುರ್ಗ ತಾಲೂಕಿನ ಚಿಂಚನೂರು ಗ್ರಾಮಕ್ಕೆ ಸೇರಿದವರಾಗಿದ್ದು ಕೆಲಸ ಮುಗಿಸಿ ತೆರಳುತ್ತಿದ್ದರೆಂದು ಹೇಳಲಾಗಿದೆ.

ಮೊರಬ್​ನಿಂದ ಸವದತ್ತಿ ಮಾರ್ಗದಿಂದ ರಾಮದುರ್ಗಕ್ಕೆ ತೆರಳುವಾಗ ಸವದತ್ತಿಯಲ್ಲಿ ಧಾರವಾಡದ ಕಡೆ ಹೊರಟಿದ್ದ ಬೊಲೆರೋಗೆ  ಟಾಟಾ ಏಸ್ ಢಿಕ್ಕಿಯಾಗಿದೆ.

Advertisement

Advertisement

ಘಟನೆಯಲ್ಲಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಇನ್ನೊಬ್ಬ ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದಿದ್ದಾನೆ. ಇದಲ್ಲದೆ ಘಟನೆಯಲ್ಲಿ ಹತ್ತಕ್ಕೂ ಹೆಚ್ಚಿನ ಜನರಿಗೆ ಗಾಯಗಳಾಗಿದೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಘಟನಾ ಸ್ಥಳಕ್ಕೆ  ಹೆಚ್ಚುವರಿ ಎಸ್ಪಿ ಅಮರನಾಥ ರೆಡ್ಡಿ, ಸವದತ್ತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement