ಸುನಿಲ್ ಪಾಚಂ 
ರಾಜ್ಯ

ಅಪಘಾತದಲ್ಲಿ ಪವರ್ ಟಿವಿ ಕ್ಯಾಮೆರಾಮನ್ ಸಾವು!

ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪವರ್ ಟಿವಿ ಕ್ಯಾಮೆರಾಮನ್ ಸುನಿಲ್ ಪಾಚಂ(29 ವರ್ಷ) ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಹುಬ್ಬಳ್ಳಿ: ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪವರ್ ಟಿವಿ ಕ್ಯಾಮೆರಾಮನ್ ಸುನಿಲ್ ಪಾಚಂ(29 ವರ್ಷ) ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಮೂರು ದಿನಗಳ ಹಿಂದೆ ಹುಬ್ಬಳ್ಳಿ ನಗರದ ಕಾರವಾರ ರಸ್ತೆಯ ಚಾಟ್ನಿ ಕಾಂಪ್ಲೆಕ್ಸ್ ಬಳಿ ನಡೆದ ಬೈಕ್ ಅಪಘಾತದಲ್ಲಿ ಸುನಿಲ್ ಪಾಚಂ ಗಂಭೀರ ಗಾಯಗೊಂಡಿದ್ದರು. ಗುರುವಾರ ರಾತ್ರಿ ಸುನೀಲ ಅವರು ಕರ್ತವ್ಯ ಮುಗಿಸಿ ಮನೆಗೆ ತೆರಳುವಾಗ ಬೈಕ್ ಮುಖಾಮುಖಿ  ಡಿಕ್ಕಿಯಾಗಿದೆ. ಪರಿಣಾಮ ಅವರ ತಲೆಗೆ ಗಂಭೀರ  ಪೆಟ್ಟು ಬಿದ್ದಿದ್ದು, ಕಿಮ್ಸ್'ಗೆ ದಾಖಲಿಸಲಾಗಿತ್ತು.

ಸುನಿಲ್ ಅವರ ತಲೆ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿತ್ತು. ವೈದ್ಯರು ಸಾಕಷ್ಟು ಪ್ರಯತ್ನಿಸಿದರೂ ಚಿಕಿತ್ಸೆಗೆ ಸ್ಪಂದಿಸದ ಕಾರಣ ಅವರು ಮೃತಪಟ್ಟಿದ್ದಾರೆ ಎಂದು ಕಿಮ್ಸ್ ವೈದ್ಯರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಲಡಾಖ್ ಗಡಿ ಸಂಘರ್ಷ: ಮಾಜಿ ಸೇನಾಧಿಕಾರಿ ನರವಾಣೆ ಅಪ್ರಕಟಿತ ಪುಸ್ತಕ ಪ್ರಸ್ತಾಪಿಸಿದ ರಾಹುಲ್ ಗಾಂಧಿ; ಸಂಸತ್ ನಲ್ಲಿ ಕೋಲಾಹಲ, ಕಲಾಪ ಮುಂದೂಡಿಕೆ

ಸೋನಮ್ ವಾಂಗ್ಚುಕ್ ಲಡಾಖ್ ನ್ನು ನೇಪಾಳವನ್ನಾಗಿಸಲು ಬಯಸುತ್ತಿದ್ದಾರೆ: ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ

ಕೆಲ ನಿರ್ಮಾಪಕರು ಹೀರೋಗಳಿಗೆ ಕಾಂಡೋಮ್ ಸಪ್ಲೈ ಮಾಡ್ತಾರೆ: ಚಕ್ರವರ್ತಿ ಚಂದ್ರಚೂಡ್ ವಿರುದ್ಧ ನಿರ್ಮಾಪಕ ಸಂಘದಿಂದ ದೂರು

ಮಹಾ ಕುಸಿತದ ಬಳಿಕ ಪುಟಿದೆದ್ದ Indian Stock Market: Sensex ಬರೊಬ್ಬರಿ 943 ಅಂಕ ಏರಿಕೆ!

ಜಸ್ಟ್ ಮಿಸ್, ಮಗು ಬಚಾವ್: ಚಾಲಕನ ಸಮಯ ಪ್ರಜ್ಞೆಗೆ ಹ್ಯಾಟ್ಸಾಫ್! Video

SCROLL FOR NEXT