ರಾಜ್ಯ

ರೈತರ ಆದಾಯ ದುಪ್ಪಟ್ಟು ಮಾಡಲು ಕೃಷಿ ಕಾಯ್ದೆಗಳ ಜಾರಿ: ಸಚಿವ ಡಿವಿ ಸದಾನಂದ ಗೌಡ

Vishwanath S

ಮೈಸೂರು: ರೈತರ ಆದಾಯವನ್ನು ದುಪ್ಪಟ್ಟು ಮಾಡಲು ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಇತ್ತೀಚೆಗೆ ಸಂಸತ್ತು ಅಂಗೀಕರಿಸಿದ ಕೃಷಿ ಸುಧಾರಣಾ ಮಸೂದೆಗಳು ಇವುಗಳಲ್ಲಿ ಪ್ರಮುಖವಾಗಿವೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ ವಿ ಸದಾನಂದ ಗೌಡ ಹೇಳಿದ್ದಾರೆ.

ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರು, ರೈತರ ಆದಾಯ ಹೆಚ್ಚಳಕ್ಕೆ ತೊಡಕಾಗಿದ್ದ ಕೆಲವು ಕಾನೂನುಗಳನ್ನು ಕೃಷಿ ಸುಧಾರಣಾ ಕಾಯ್ದೆಗಳ ಮೂಲಕ ಸರಿಪಡಿಸಲಾಗಿದೆ ಎಂದರು.

ದೇಶವು ಆಹಾರದ ಕೊರತೆ ಎದುರಿಸುತ್ತಿದ್ದ ಕಾಲದಲ್ಲಿ ರೂಪಿತವಾದ ಕಾನೂನುಗಳು ರೈತರರಿಗೆ ನೆರವಾಗುವ ಬದಲು ತೊಡಕುಗಳಾಗಿದ್ದವು. ಆರ್ಥಿಕ ಉದಾರೀಕರಣದ ಲಾಭವನ್ನು ಕೈಗಾರಿಕೆಗಳೂ ಸೇರಿದಂತೆ ಇತರ ವಲಯಗಳು ಪಡೆದವು. ಆದರೆ ಕಾನೂನುಗಳ ತೊಡಕಿನಿಂದಾಗಿ ಕೃಷಿ ಕ್ಷೇತ್ರಕ್ಕೆ ಮಾತ್ರ ಇದರ ಲಾಭ ದೊರಕಲಿಲ್ಲ. ಈ ತೊಡಕುಗಳನ್ನು ನಿವಾರಿಸಿ ಕೃಷಿ ವಲಯದ ಆಮೂಲಾಗ್ರ ಸುಧಾರಣೆಗಾಗಿ ಹೊಸ ಕೃಷಿ ಸುಧಾರಣಾ ಕಾಯ್ದೆಗಳನ್ನು ತರಲಾಗಿದ್ದು, ಈ ಮೂಲಕ ರೈತರನ್ನು ಬಂಧಮುಕ್ತಗೊಳಿಸಲಾಗಿದೆ ಎಂದು ಸಚಿವರು ಹೇಳಿದರು.

SCROLL FOR NEXT