ರಾಜ್ಯ

ನಾಗರಹೊಳೆಯಲ್ಲಿ ಚಿಟ್ಟೆ ಗಣತಿ

Srinivas Rao BV

ನಾಗರಹೊಳೆ: ಇದೇ ಮೊದಲ ಬಾರಿಗೆ ಚಿಟ್ಟೆ ಗಣತಿಯನ್ನು ರಾಜ್ಯ ಅರಣ್ಯ ಇಲಾಖೆ ಕೈಗೆತ್ತಿಕೊಂಡಿದೆ. 

ನಾಗರಹೊಳೆ ಹುಲಿ ಮೀಸಲು ಪ್ರದೇಶ ( ಎನ್ ಟಿಆರ್) ದಲ್ಲಿ ಗಣತಿ ನಡೆಯಲಿದ್ದು, ಚೆಕ್ ಲಿಸ್ಟ್ ನ್ನು ತಯಾರಿಸುವ ಉದ್ದೇಶ ಹೊಂದಲಾಗಿದೆ. ಎಲ್ಲವೂ ಅಂದುಕೊಂಡಂತೆಯೇ ನಡೆದರೆ ನಾಗರಹೊಳೆಯಲ್ಲಿ ಚಿಟ್ಟೆ ಉದ್ಯಾನವನವನ್ನು ಕಾಣಬಹುದಾಗಿದೆ.

ಕೇಂದ್ರ ಸರ್ಕಾರ ರಾಷ್ಟ್ರೀಯ ಚಿಟ್ಟೆ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿರುವಾಗ ರಾಜ್ಯದಲ್ಲಿ ಚಿಟ್ಟೆ ಗಣತಿ ನಡೆಯುತ್ತಿರುವುದು ಮಹತ್ವ ಪಡೆದುಕೊಂಡಿದೆ. 

ಕರ್ನಾಟಕ ಈಗಾಗಲೇ ತನ್ನದೇ ರಾಜ್ಯ ಚಿಟ್ಟೆಯನ್ನು ಗುರುತಿಸಿದ್ದು, ರಾಜ್ಯ ಧ್ವಜದ ಬಣ್ಣವನ್ನೇ ಹೋಲುವ ಸದರ್ನ್ ಬರ್ಡ್‌ವಿಂಗ್ (ಟ್ರಾಯ್ಡ್ಸ್ ಮಿನೋಸ್) ಎಂಬ ಚಿಟ್ಟೆಗೆ ರಾಜ್ಯ ಚಿಟ್ಟೆ ಸ್ಥಾನವನ್ನು ನೀಡಿದೆ. 

ಸಸ್ಯ ಮತ್ತು ಪಕ್ಷಿಸಂಕುಲದ ಚೆಕ್ ಲಿಸ್ಟ್ ನ್ನು ತಯಾರಿಸುವುದರ ಜೊತೆಗೆ ಚಿಟ್ಟೆಗಳ ಚೆಕ್ ಲಿಸ್ಟ್ ನ್ನೂ ತಯಾರಿಸಲು ಮುಂದಾಗಿದ್ದು ಅ.8 ರಿಂದ 2021 ರ ಜೂನ್-ಜುಲೈ ವರೆಗೂ ನಡೆಯಲಿದೆ. ಇದೇ ವೇಳೆ ಶಾಖಾಹಾರಿ ಪ್ರಾಣಿಗಳ ಗಣತಿಯೂ ನಡೆಯಲಿದೆ.

ಬಹಳಷ್ಟು ದೊಡ್ಡ ಸಂಖ್ಯೆಯಲ್ಲಿರುವ ಸಂಕುಲಗಳಿಗೆ ಹೆಚ್ಚಿನ ಮಹತ್ವ ಸಿಗಲಿದೆ ಆದರೆ ಬೇರೆ ಜೀವಿಗಳೆಡೆಗೂ ಗಮನ ಹರಿಸುವ ಅಗತ್ಯವಿದೆ, ಪರಾಗಸ್ಪರ್ಶಕ್ಕೆ ಚಿಟ್ಟೆಗಳು ಅತ್ಯವಶ್ಯಕ, ಆದ್ದರಿಂದ ಈ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಎನ್ ಟಿ ಆರ್ ನ ನಿರ್ದೇಶಕ ಮಹೇಶ್ ಕುಮಾರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. 

SCROLL FOR NEXT