ರಾಜ್ಯ

ಬೆಂಗಳೂರಿನ ಜಲಸಂಪನ್ಮೂಲ ಇಲಾಖೆಯ 30 ಅಧಿಕಾರಿಗಳಿಗೆ ಕೊರೋನಾ

Nagaraja AB

ಬೆಂಗಳೂರು:  ಬೆಂಗಳೂರಿನ ಜಲಸಂಪನ್ಮೂಲ ಇಲಾಖೆಯ ಮುಖ್ಯ ಅಭಿಯಂತರರ ಕಚೇರಿಯಲ್ಲಿನ 30 ಅಧಿಕಾರಿಗಳಿಗೆ ಕೊರೋನಾ ಸೋಂಕು ತಗುಲಿದೆ. ಆನಂದ್ ರಾವ್ ಸರ್ಕಲ್ ಬಳಿಯ ಮೇಲುಸೇತುವೆ ಬಳಿಯಿರುವ ಈ ಕಚೇರಿಯನ್ನು ಇಂದಿನಿಂದ ಮೂರು ದಿನಗಳ ಕಾಲ ಮುಚ್ಚಲಾಗುತ್ತಿದೆ.

ಕಚೇರಿಯಲ್ಲಿನ ಅನೇಕ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಪ್ರಾಥಮಿಕ ಸಂಪರ್ಕಿತರಿಂದಾಗಿ ಮುಂಜಾಗತ್ರಾ ಕ್ರಮವಾಗಿ ಮೂರು ದಿನಗಳ ಕಾಲ ಕಚೇರಿಯನ್ನು ಮುಚ್ಚಾಗುತ್ತಿದೆ ಎಂದು ಮುಖ್ಯ ಅಭಿಯಂತರರು ಜಲ ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಮುಂದಿನ ಕೆಲ ದಿನಗಳವರೆಗೂ ಹೋಮ್ ಕ್ವಾರಂಟೈನ್ ನಲ್ಲಿ ಇರುವಂತೆ ಎಲ್ಲಾ ಉದ್ಯೋಗಿಗಳಿಗೆ ತಿಳಇಸಲಾಗಿದೆ. ಕಚೇರಿ ಆವರಣವನ್ನು ಮೂರು ದಿನಗಳ ಕಾಲ ಸ್ಯಾನಿಟೈಸ್ ಮಾಡಲಾಗುವುದು ಎಂದು ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.

ಕಳೆದ ಮೂರು ತಿಂಗಳಲ್ಲಿ ಹೀಗೆ ಸಿಬ್ಬಂದಿಗಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅನೇಕ ಬಾರಿ ಕಚೇರಿಯನ್ನು ಮುಚ್ಚಲಾಗಿದೆ. ಆದರೆ, ಈ ಬಾರಿ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಕೇಂದ್ರ ಕಚೇರಿ ವಿಕಾಸಸೌಧದಲ್ಲಿಯೂ ಕೆಲ ಸಿಬ್ಬಂದಿಗೆ ಕೊರೋನಾ ತಗುಲಿದ ಹಿನ್ನೆಲೆಯಲ್ಲಿ ಅದನ್ನು ಕೂಡಾ ಮುಚ್ಚಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

SCROLL FOR NEXT