ರಾಜ್ಯ

ವೈದ್ಯಕೀಯ ತ್ಯಾಜ್ಯ ವಿಲೇವಾರಿಗೆ ಬಳ್ಳಾರಿ ಮಾದರಿ!

Nagaraja AB

ಬಳ್ಳಾರಿ: ಕಳೆದ ಆರು ತಿಂಗಳಲ್ಲಿ ಬಳ್ಳಾರಿಯಲ್ಲಿ 50 ಸಾವಿರ ಕೆಜಿ ಕೋವಿಡ್ ಸಂಬಂಧಿತ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಮಾಡಲಾಗಿದೆ.

ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಬಯೋಮೆಡಿಕಲ್ ತ್ಯಾಜ್ಯ ವಿಲೇವಾರಿಗೆ ಸರ್ಕಾರ  ಮಾರ್ಗಸೂಚಿ ಪ್ರಕಟಿಸುವ ಮುಂಚಿತವಾಗಿಯೇ ತ್ಯಾಜ್ಯ ನಿರ್ವಹಣೆಗಾಗಿ ಜಿಲ್ಲಾ ಖನಿಜ ಪ್ರತಿಷ್ಠಾನದಡಿಯಲ್ಲಿ ಹಣವನ್ನು ಲಭ್ಯವಾಗಿ ಇರಿಸಲಾಗಿತ್ತು.ಎಲ್ಲಾ ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಈ ವ್ಯವಸ್ಥೆ ಮಾಡಲಾಗಿತ್ತು. ಮುಖ್ಯ ಘಟಕವು ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತದೆ.

ಕೊರೋನಾ ಸಾಂಕ್ರಾಮಿಕ ರೋಗದ ಆರಂಭದಲ್ಲಿಯೇ ಬಳ್ಳಾರಿ ತಂಡ ವೈದ್ಯಕೀಯ ತ್ಯಾಜ್ಯದತ್ತ ಗಮನ ಹರಿಸಿದ್ದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜನಾರ್ದನ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಈವರೆಗೂ ಸುಮಾರು  50 ಟನ್ ವೈದ್ಯಕೀಯ ತ್ಯಾಜ್ಯವನ್ನು ಖಾಸಗಿ ಕಂಪನಿಗಳಿಗೆ ಹಸ್ತಾಂತರಿಸಲಾಗಿದೆ.ಒಪ್ಪಂದದಂತೆ ಜಿಲ್ಲಾಡಳಿತ ಖಾಸಗಿ ಏಜೆನ್ಸಿಗಳಿಂದ 35 ಲಕ್ಷ ಸಂಗ್ರಹಿಸಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.

SCROLL FOR NEXT