ಬೆಂಗಳೂರು: ತಮಿಳುನಾಡಿನ ನೀಲಗಿರಿ ಜೀವವೈವಿದ್ಯ ತಾಣದಲ್ಲಿ ಬರುವ ಮದುಮಲೈ ಆನೆ ಕಾರಿಡಾರ್ ಅನ್ನು ಸಂರಕ್ಷಿಸುವ ಸುಪ್ರೀಂ ಕೋರ್ಟ್ ಆದೇಶವು ಕರ್ನಾಟಕ ಅರಣ್ಯ ಇಲಾಖೆಗೆ ಹೊಸ ಚೈತನ್ಯ ನೀಡಿದೆ. ಈ ತೀರ್ಪು ರಾಜ್ಯದ ಉತ್ತಮ ಆನೆ ಆವಾಸಸ್ಥಾನಗಳ ಸಂರಕ್ಷಣೆಗೆ ಸಹಕಾರಿಯಾಗಲಿದೆ. ವಿಶೇಷವಾಗಿ ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ (ಸಿಡಬ್ಲ್ಯೂಎಸ್ ). ಇದು ಮೇಕೆದಾಟುಜಲಾಶಯ ಯೋಜನೆಯ ವಿರುದ್ಧ ಇದು ಬಲವಾದ ಉತ್ತೇಜನ ಹೊಂದಿದೆ.
“ಸುಪ್ರೀಂ ಕೋರ್ಟ್ ಆದೇಶವು ಹೊಸೂರು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಸತ್ಯಮಂಗಲ ಮತ್ತು ಸಿಡಬ್ಲ್ಯೂಎಸ್ ಆನೆ ಕಾರಿಡಾರ್ ಮತ್ತು ಆವಾಸಸ್ಥಾನವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಆದರೆ, ಮೇಕೆದಾಟು ಯೋಜನೆಯನ್ನು ಜಾರಿ ಮಾಡಿದರೆ ಆನೆಯ ಆವಾಸಸ್ಥಾನದ ಹೆಚ್ಚಿನ ಭಾಗವು ಮುಳುಗುತ್ತದೆ. ವಾಣಿಜ್ಯ ಯೋಜನೆಗಳನ್ನು ಜಾರಿಗೆ ರದ್ದುಮಾಡಲು ಹೇಳಿದ ಹಾಗೂ ಮುದುಮಲೈ ಆನೆ ಕಾರಿಡಾರ್ ಅನ್ನು ರಕ್ಷಿಸಲು ಸುಪ್ರೀಂ ಕೋರ್ಟ್ ಆದೇಶವು ಕರ್ನಾಟಕಕ್ಕೂ ನೆರವಾಗಲಿದೆ. ಆದರೆ ಸಿಡಬ್ಲ್ಯುಎಸ್ ರಕ್ಷಣೆಗೆ ತಕ್ಷಣ ಗಮನ ಹರಿಸಬೇಕಾಗಿದೆ, ಅಲ್ಲಿ ಸರ್ಕಾರವು ಮೇಕೆದಾಟು ಜಲಾಶಯ ಯೋಜನೆಯನ್ನು ಅನುಷ್ಠಾನಗೊಳಿಸಲು ಉತ್ಸುಕವಾಗಿದೆ ”ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಪತ್ರಿಕೆಗೆ ತಿಳಿಸಿದರು.
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೋಳಿ ಸೆಪ್ಟೆಂಬರ್‌ನಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಯೋಜನೆಯನ್ನು ಶೀಘ್ರವಾಗಿ ಜಾರಿಮಾಡಲು ಅನುಮತಿಸಬೇಕು ಮತ್ತು ಅದಕ್ಕಾಗಿ ಅಗತ್ಯ ಪರಿಸರ ಅನುಮತಿ ಕೊಡಬೇಕು ಎಂದು ಒತ್ತಾಯಿಸಿದರು. ಆದಾಗ್ಯೂ, ಕರ್ನಾಟಕ ಅರಣ್ಯ ಇಲಾಖೆಯ ಅಧಿಕಾರಿಗಳು "ಯೋಜನೆ ಜಾರಿಗಾಗಿ ಯಾವುದೇ ಪ್ರಸ್ತಾಪಗಳು ನಮ್ಮ ಬಳಿಗೆ ಬಂದಿಲ್ಲ ಮತ್ತು ಅದನ್ನು ಸಹ ಅನುಮೋದಿಸಲಾಗುವುದಿಲ್ಲ. ಸಿಡಬ್ಲ್ಯೂಎಸ್ ಅನ್ನು ಅಭಯಾರಣ್ಯವೆಂದು 1985 ರಲ್ಲಿ ಘೋಷಿಸಲಾಯಿತು, ಆದರೆ ಸರ್ಕಾರವು ಅದರ ರಕ್ಷಣೆಗೆ ಮೀನಾಮೇಷ ಎಣಿಸಿದೆ." ಅವರು ಹೇಳಿದ್ದಾರೆ.
ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅಧಿಕಾರಿಯೊಬ್ಬರು ಮಾತನಾಡಿ, “ಸಿಡಬ್ಲ್ಯುಎಸ್‌ನ ಪ್ರಮುಖ ಸಿಡಬ್ಲ್ಯುಎಸ್ ಆನೆಗಳ ಆವಾಸಸ್ಥಾನದಲ್ಲಿ ಮೇಕೆದಾಟು ಜಲಾಶಯ ನಿರ್ಮಾಣ ಪ್ರಸ್ತಾವನೆ ಇದೆ. ಅದನ್ನು ಜಾರಿ ಮಾಡುವುದರಿಂದ ದೊಡ್ಡ ಅರಣ್ಯ ಭೂಮಿ ಮುಳುಗಲು ಕಾರಣವಾಗುತ್ತದೆ, ಇದು ಕಾರಿಡಾರ್ ಮೇಲೆ ಸಹ ಪರಿಣಾಮ ಬೀರುತ್ತದೆ. ಅದನ್ನು ಜಾರಿಗೆ ತರಲು ಸಾಧ್ಯವಿಲ್ಲ ಮತ್ತು ಸುಪ್ರೀಂ ಕೋರ್ಟ್ ತೀರ್ಪು ಈಗ ಅಮ್ಮ ನೆರವಿಗಿದೆ.” ಅರಣ್ಯ ಭೂಮಿಯನ್ನು ಪುನಃ ಪಡೆದುಕೊಳ್ಳಲು ಮತ್ತು ಆನೆ ಕಾರಿಡಾರ್ ಮತ್ತು ಆವಾಸಸ್ಥಾನಗಳನ್ನು ಬಲಪಡಿಸಲು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದ್ದರೂ, ಅರಣ್ಯ ಇಲಾಖೆಗೆ ಕಳೆದ ಐದು ವರ್ಷಗಳಲ್ಲಿ ಯಾವುದೇ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಅಂತರಾಜ್ಯ ಕಾರಿಡಾರ್‌ಗಳತ್ತ ಗಮನ ಹರಿಸಿ: ತಜ್ಞರು
ಅವರು (ಅರಣ್ಯ ಇಲಾಖೆ ಅಧಿಕಾರಿಗಳು) ಈಗ ಎನ್‌ಜಿಒಗಳ ಸಹಾಯ ಪಡೆಯುತ್ತಿದ್ದಾರೆ. ಚಾಮರಾಜನಗರದ ಎಡಯರಹಳ್ಳಿ-ತೊಡ್ಡಸಂಪೀಜ್ ಕಾರಿಡಾರ್ ಅನ್ನು ಬಲಪಡಿಸಲು ಭಾರತದ ವನ್ಯಜೀವಿ ಟ್ರಸ್ಟ್ 25 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ತಜ್ಞ ಆರ್.ಸುಕುಮಾರ್ ಮಾತನಾಡಿ, ಹೊಸೂರು ಕಾರಿಡಾರ್‌ನಂತೆ ತಮಿಳುನಾಡು ಮತ್ತು ಕೇರಳದ ನಡುವಿನ ಅಂತರಾಜ್ಯ ಕಾರಿಡಾರ್‌ಗಳನ್ನು ಬಲಪಡಿಸಲು ಒತ್ತು ನೀಡಬೇಕು, ಆನೆಗಳು ಬ್ರಹ್ಮಗಿರಿನಲ್ಲಿ ಕೂಡ ಕಾಣಿಸಿಕೊಳ್ಳುತ್ತವೆ. ಬನ್ನೇರುಘಟ್ಟದ ಕಾನಿಯಾನಪುರ ಕಾರಿಡಾರ್ ಅನ್ನು ಬಲಪಡಿಸಲು ಅರಣ್ಯ ಇಲಾಖೆ ಅಧಿಕಾರಿಗಳು 100 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಕೆಲಸದಲ್ಲಿದ್ದಾರೆ.ಇದು ಕರ್ನಾಟಕದ ಮೊದಲ ಸಂರಕ್ಷಿತ ಮತ್ತು ಅಭಿವೃದ್ಧಿ ಹೊಂದಿದ ಕಾರಿಡಾರ್ ಆಗಿದೆ. ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನ (ಬಿಆರ್‌ಟಿ) ಮೀಸಲು ಪ್ರದೇಶದ ಬಿಆರ್‌ಟಿ- ಮೊದ್ದಹಳ್ಳಿ- ಬೂದಿಪಡಗ ಕಾರಿಡಾರ್ ಅನ್ನು ರಕ್ಷಿಸುವ ಕೆಲಸ ಪ್ರಗತಿಯಲ್ಲಿದೆ.
"ಕಾಫಿ ಕಡಿಮೆ ಲಾಭದಾಯಕ ಬೆಳೆ ಎನ್ನುವುದನ್ನು ಅರಣ್ಯ ಅಧಿಕಾರಿಗಳು ಈಗ ಅರಿತಿದ್ದಾರೆ. ಇದರಿಂದಾಗಿ ಕುಟ್ಟ ಕಾರಿಡಾರ್ - ನಾಗರಹೊಳೆಯನ್ನು ಬ್ರಹ್ಮಗಿರಿಗೆ ಸಂಪರ್ಕಿಸುತ್ತದೆ. ಅಲ್ಲಿ ಅನೇಕ ಖಾಸಗಿ ಎಸ್ಟೇಟ್ ಗಳು ಸಹ ಅರಣ್ಯ ಭೂಮಿಯನ್ನು ಅತಿಕ್ರಮಿಸಿವೆ." ಅವರು ಹೇಳಿದ್ದಾರೆ.