ರಾಜ್ಯ

ಜಿಎಸ್ಟಿ ಪರಿಹಾರ: ಕೇಂದ್ರ ಹಣಕಾಸು ಸಚಿವಾಲಯದ ಅಧಿಕೃತ ಪತ್ರದ ಮನವಿಯನ್ನು ಪರಿಶೀಲಿಸುತ್ತಿರುವ ರಾಜ್ಯ ಸರ್ಕಾರ

Sumana Upadhyaya

ಬೆಂಗಳೂರು: ಭವಿಷ್ಯದ ಜಿಎಸ್ಟಿ ಪರಿಹಾರಕ್ಕೆ ಬಡ್ಡಿ ಪಾವತಿ ಮತ್ತು ಸಾಲವನ್ನು ಹಿಂತಿರುಗಿಸಿರುವ ಬಗ್ಗೆ ಅಧಿಕೃತ ಪತ್ರ ನೀಡಬೇಕೆಂದು ಕೇಂದ್ರ ಸರ್ಕಾರ ಮಾಡಿರುವ ಮನವಿ ಬಗ್ಗೆ ರಾಜ್ಯ ಹಣಕಾಸು ಇಲಾಖೆ ಅಧ್ಯಯನ ನಡೆಸುತ್ತಿದೆ.

ಇಂದು ಸಾಯಂಕಾಲದೊಳಗೆ ರಾಜ್ಯ ಹಣಕಾಸು ಇಲಾಖೆ ಕೇಂದ್ರಕ್ಕೆ ಪ್ರತಿಕ್ರಿಯೆ ನೀಡಲಿದೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಜಿಎಸ್ ಟಿ ಮಂಡಳಿಯ ರಾಜ್ಯ ಪ್ರತಿನಿಧಿ ಬಸವರಾಜ ಬೊಮ್ಮಾಯಿ, ಹಣಕಾಸು ಇಲಾಖೆ ಈ ಬಗ್ಗೆ ಅಧ್ಯಯನ ನಡೆಸಿ ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಡುತ್ತೇವೆ, ಅವರು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

ಕೇಂದ್ರ ಹಣಕಾಸು ಸಚಿವಾಲಯ ತನ್ನ ಪತ್ರದಲ್ಲಿ, ನಿಗದಿತ ಕಡಿಮೆ ವೆಚ್ಚದಲ್ಲಿ ಮತ್ತು ಸುಲಭವಾಗಿ ಸಾಲದ ಸೇವೆ ನೀಡಲು ವಿಶೇಷ ಅವಕಾಶವನ್ನು ನೀಡಬೇಕಾಗಿದ್ದು ಬಡ್ಡಿದರ ಪಾವತಿಗೆ ಮತ್ತು ರಾಜ್ಯಗಳಿಗೆ ನೀಡುವ ಜಿಎಸ್ಟಿ ಪರಿಹಾರದಲ್ಲಿ ಮೂಲಧನವನ್ನು ಮರುಪಾವತಿಸುವ ಬಗ್ಗೆ ತಮಗೆ ಅಧಿಕೃತ ಅಧಿಕಾರ ನೀಡಬೇಕೆಂದು ಕೇಳಿದೆ.

SCROLL FOR NEXT