ರಾಜ್ಯ

ಜಿಎಸ್ಟಿ ಪರಿಹಾರ ಪ್ರಕ್ರಿಯೆ: ಕೇಂದ್ರ ಹಣಕಾಸು ಸಚಿವಾಲಯದ ಪ್ರಸ್ತಾವನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಒಪ್ಪಿಗೆ

Sumana Upadhyaya

ಬೆಂಗಳೂರು: ಜಿಎಸ್ಟಿ ಪರಿಹಾರಕ್ಕೆ ಸಂಬಂಧಿಸಿದಂತೆ ಹಣಕಾಸು ಸಚಿವಾಲಯ ಸಲ್ಲಿಸಿದ್ದ ಪ್ರಸ್ತಾವನೆಯ ಸಾಧಕ-ಬಾಧಕಗಳನ್ನು ಅಳೆದುತೂಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಭವಿಷ್ಯದಲ್ಲಿ ತೆರಿಗೆ ಸಂಗ್ರಹದಿಂದ ಸಾಲ ಮರುಪಾವತಿ ಮತ್ತು ಬಡ್ಡಿದರ ಪಾವತಿಗೆ ಸಂಬಂಧಿಸಿದಂತೆ ಅಧಿಕಾರವನ್ನು ನೀಡಿದ್ದಾರೆ.

ಈ ಪ್ರಕ್ರಿಯೆ ನಡೆಯಲು ರಾಜ್ಯ ಸರ್ಕಾರದಿಂದ ಅಧಿಕೃತ ಅಧಿಕಾರವನ್ನು ಕೇಂದ್ರ ಹಣಕಾಸು ಸಚಿವಾಲಯ ಕೇಳಿತ್ತು. ರಾಜ್ಯ ಜಿಎಸ್ಟಿ ಕೌನ್ಸಿಲ್ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ನೇತೃತ್ವದ ಕರ್ನಾಟಕದ ಪ್ರತಿನಿಧಿಗಳು, ಕರ್ನಾಟಕ ಆಯ್ಕೆ 1ನ್ನು ಆರಿಸಿಕೊಂಡಿದ್ದು, 2020-21ರಲ್ಲಿ 12 ಸಾವಿರದ 407 ಕೋಟಿ ರೂಪಾಯಿಗಳನ್ನು ಸಾಲಪಡೆಯಲು ಅರ್ಹತೆ ಪಡೆದಿದೆ. ಮುಂದಿನ ತೆರಿಗೆಯ ಪ್ರಕ್ರಿಯೆಯಿಂದ ಇಡೀ ಮೂಲ ಮತ್ತು ಬಡ್ಡಿದರ ಮರುಪಾವತಿಯನ್ನು ಭರಿಸಬಹುದಾಗಿದೆ. ಹೀಗಾಗಿ ರಾಜ್ಯದ ನಿತ್ಯದ ಬಜೆಟ್ ಸಂಪನ್ಮೂಲಗಳಿಂದ ಮೂಲ ಮತ್ತು ಬಡ್ಡಿದರವನ್ನು ಭರಿಸುವುದಿಲ್ಲ ಎಂದು ಹೇಳಿದರು.

ಇಡೀ ಜಿಎಸ್ಟಿ ಪರಿಹಾರ ಮೊತ್ತವನ್ನು ನೀಡಲು ಕೇಂದ್ರ ಸರ್ಕಾರ ಒಪ್ಪಿದ್ದು ಕಾನೂನು ನಿಯಮಗಳನ್ನು ಪಾಲಿಸಲು ಸಂಪೂರ್ಣ ಬದ್ಧವಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

SCROLL FOR NEXT