ಬಿಬಿಎಂಪಿ 
ರಾಜ್ಯ

ಐಪ್ಯಾಡ್ ಗಳೆಲ್ಲ ಎಲ್ಲಿಗೆ ಹೋದವು? 225 ಕೌನ್ಸಿಲರ್ ಗಳಲ್ಲಿ ಹಿಂತಿರುಗಿಸಿದ್ದು ಕೇವಲ 13 ಮಂದಿ!

2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ 225 ಐಪ್ಯಾಡ್ ಗಳನ್ನು ಖರೀದಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೌನ್ಸಿಲರ್ ಗಳು, ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳಿಗೆ ನೀಡಿತ್ತು.

ಬೆಂಗಳೂರು: 2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ 225 ಐಪ್ಯಾಡ್ ಗಳನ್ನು ಖರೀದಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೌನ್ಸಿಲರ್ ಗಳು, ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳಿಗೆ ನೀಡಿತ್ತು.

ಕಳೆದ ಸೆಪ್ಟೆಂಬರ್ 10ಕ್ಕೆ ಬಿಬಿಎಂಪಿ ಕೌನ್ಸಿಲರ್ ಗಳ ಅವಧಿ ಮುಕ್ತಾಯವಾಗಿದೆ. ಆದರೆ 198 ಕೌನ್ಸಿಲರ್ ಗಳಲ್ಲಿ ಕೇವಲ 13 ಮಂದಿ ಮಾತ್ರ ಐಪ್ಯಾಡ್ ಗಳನ್ನು ಹಿಂತಿರುಗಿಸಿದ್ದಾರೆ. 10 ದಿನಗಳ ಹಿಂದೆ ಬಿಬಿಎಂಪಿ ಕೌನ್ಸಿಲ್ ಕಾರ್ಯದರ್ಶಿ ಹೇಮಂತ್ , ಈ ಬಗ್ಗೆ ಕೌನ್ಸಿಲರ್ ಗಳಿಗೆ ಪತ್ರ ಬರೆದು ಐಪ್ಯಾಡ್ ಹಿಂತಿರುಗಿಸುವಂತೆ ಸೂಚಿಸಿದ್ದಾರೆ.

2018ರಲ್ಲಿ, ಪ್ರತಿಯೊಂದಕ್ಕೆ 44 ಸಾವಿರ ರೂಪಾಯಿಗಳಂತೆ ಒಟ್ಟು 1 ಕೋಟಿ ರೂಪಾಯಿ ಮೊತ್ತದಲ್ಲಿ ಐಪ್ಯಾಡ್ ಗಳನ್ನು ಖರೀದಿಸಿ ಕೌನ್ಸಿಲರ್ ಗಳಿಗೆ ನೀಡಿತ್ತು. ಟೆಂಡರ್ ಕೂಡ ಕರೆಯದೆ ಕೇವಲ 48 ಗಂಟೆಗಳಲ್ಲಿ ಐಪ್ಯಾಡ್ ಗಳನ್ನು ಖರೀದಿಸಿ ನೀಡಿತ್ತು. ಆದರೆ ಅದು ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ ಮತ್ತು ಪಾರದರ್ಶಕ ಕಾಯ್ದೆಗೆ ವಿರುದ್ಧವಾಗಿದೆ.

ಈ ಬಗ್ಗೆ ಕೌನ್ಸಿಲರ್ ಗಳಲ್ಲಿ ಕೇಳಿದರೆ ಕೆಲವರು ಹೀಗೆನ್ನುತ್ತಾರೆ, ನಮಗೆ ಐಪ್ಯಾಡ್ ನೀಡಿದ್ದಾಗ, ನಮ್ಮ ಅವಧಿ ಮುಗಿದ ನಂತರ ಹಿಂತಿರುಗಿಸಬೇಕೆಂದು ಹೇಳಿರಲಿಲ್ಲ. ಹೀಗಿರುವಾಗ ಈಗ ನಮಗೆ ನೊಟೀಸ್ ನೀಡಿ ನಾವು ಭ್ರಷ್ಟರು ಎಂದು ತೋರಿಸುವುದು ಏಕೆ, ನಾವು ಹಿಂತಿರುಗಿಸುತ್ತೇವೆ ಎಂದು ಹೇಳುತ್ತಾರೆ. ಆಡಳಿತಾರೂಢ ಪಕ್ಷದ ಅಂದಿನ ನಾಯಕ ಪದ್ಮನಾಭ ರೆಡ್ಡಿ, ಐಪ್ಯಾಡ್ ಬಿಬಿಎಂಪಿಯದ್ದಾಗಿದ್ದು ಅದನ್ನು ಹಿಂತಿರುಗಿಸುತ್ತೇವೆ ಎಂದರು.

ಪಾಲಿಕೆಯನ್ನು ಕಾಗದರಹಿತ ಕಚೇರಿಯಾಗಿ ಪರಿವರ್ತಿಸುವ ಉದ್ದೇಶವನ್ನು ದುಬಾರಿ ಗ್ಯಾಜೆಟ್‌ಗಳು ಪೂರೈಸಿದಂತೆ ಕಾಣುತ್ತಿಲ್ಲ. ಬಿಬಿಎಂಪಿ ಅಧಿಕಾರಿಯೊಬ್ಬರು, ಹೆಚ್ಚಿನ ಕೌನ್ಸಿಲರ್‌ಗಳು ತಮ್ಮ ಅವಧಿ ಮುಗಿದ ನಂತರವೂ ಐಪ್ಯಾಡ್‌ಗಳನ್ನು ಹೇಗೆ ಬಳಸಬೇಕೆಂದು ತಿಳಿದಿಲ್ಲ ಎಂದು ಹೇಳಿದರು. ಇದು ಸಾರ್ವಜನಿಕ ಹಣವನ್ನು ವ್ಯರ್ಥಮಾಡಿದಂತೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT