ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಶೇ.73ರಷ್ಟು ಕೋವಿಡ್ ಪರೀಕ್ಷೆ ಹೆಚ್ಚಳದ ನೆರವಿನಿಂದ ಸಕ್ರೀಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ

ಹೆಚ್ಚಿನ ಸಂಖ್ಯೆಯ ಕೋವಿಡ್-ಪಾಸಿಟಿವ್ ಪ್ರಕರಣಗಳೊಂದಿಗೆ ದೇಶದಲ್ಲಿಯೇ ಅತಿ ಹೆಚ್ಚು ಬಾಧಿತ ನಗರವಾಗಿರುವ ಬೆಂಗಳೂರಿನಲ್ಲಿ ಪರೀಕ್ಷೆಯನ್ನು ಉತ್ತಮವಾಗಿ ನಡೆಸಲಾಗುತ್ತಿದೆ. ಕಳೆದ ಒಂದು ತಿಂಗಳಲ್ಲಿ ಶೇ.73 ರಷ್ಟು ಪರೀಕ್ಷೆ ಹೆಚ್ಚಾಗಿದೆ.

ಬೆಂಗಳೂರು: ಹೆಚ್ಚಿನ ಸಂಖ್ಯೆಯ ಕೋವಿಡ್-ಪಾಸಿಟಿವ್ ಪ್ರಕರಣಗಳೊಂದಿಗೆ ದೇಶದಲ್ಲಿಯೇ ಅತಿ ಹೆಚ್ಚು ಬಾಧಿತ ನಗರವಾಗಿರುವ ಬೆಂಗಳೂರಿನಲ್ಲಿ ಪರೀಕ್ಷೆಯನ್ನು ಉತ್ತಮವಾಗಿ ನಡೆಸಲಾಗುತ್ತಿದೆ. ಕಳೆದ ಒಂದು ತಿಂಗಳಲ್ಲಿ ಶೇ.73 ರಷ್ಟು ಪರೀಕ್ಷೆ ಹೆಚ್ಚಾಗಿದೆ.

ಸೆಪ್ಟೆಂಬರ್ 12 ಮತ್ತು ಅಕ್ಟೋಬರ್  12ರ ನಡುವೆ ಬೆಂಗಳೂರು, ಚೆನ್ನೈ, ಮತ್ತು ಕೊಲ್ಕತ್ತಾ, ಅಹಮಹದಾಬಾದ್, ಮುಂಬೈ ದೆಹಲಿಯಲ್ಲಿ 23,982 ಹೆಚ್ಚಿನ ಸಕ್ರೀಯ ಪ್ರಕರಣಗಳು ಕಂಡುಬಂದಿದೆ.

ಆದರೆ, ಕಳೆದ ಒಂದು ವಾರದಲ್ಲಿ ಬೆಂಗಳೂರು ನಗರದಲ್ಲಿ ಸಕ್ರೀಯ ಪ್ರಕರಣಗಳ ಸಂಖ್ಯೆ 141ಕ್ಕೆ ಇಳಿದಿದೆ. ಏಳು ದಿನಗಳ  ಬೆಳವಣಿಗೆಯ ದರವನ್ನು (ಎಂಜಿಆರ್) ಶೇಕಡಾ ಶೂನ್ಯಕ್ಕೆ ತಂದಿದೆ. ಕೊಲ್ಕತ್ತಾದ ಸಕ್ರಿಯ ಪ್ರಕರಣಗಳ ಎಂಜಿಆರ್ ಶೇ.13 ಮತ್ತು ದೆಹಲಿಯಲ್ಲಿ ಶೇ. 4 ರಷ್ಟಿದೆ.

ಜೀವನ್ ರಕ್ಷಾ ನಿರ್ವಹಣಾ ಸಂಸ್ಥೆ ನಡೆಸಿದ ಸರ್ವೇ ಪ್ರಕಾರ, ಸೋಂಕು ಪರೀಕ್ಷೆ ಪ್ರಮಾಣ ಬೆಂಗಳೂರಿನಲ್ಲಿ ಶೇ. 73, ದೆಹಲಿಯಲ್ಲಿ ಶೇ. 58, ಮುಂಬೈನಲ್ಲಿ ಶೇ. 36, ಅಹಮಾದಾಬಾದ್ ಮತ್ತು ಚೆನ್ನೈನಲ್ಲಿ ಶೇ.31 ರಷ್ಟಿದೆ.ಹೆಚ್ಚಿನ ಸಂಖ್ಯೆಯಲ್ಲಿ ನಗರದಲ್ಲಿ ಪರೀಕ್ಷೆ ನಡೆಸುತ್ತಿರುವುದರಿಂದ ಸಕ್ರೀಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂದು ಜೀವನ್ ರಕ್ಷಾ ಸಂಸ್ಥೆಯ ಸಂಘಟಕ ಸಂಜೀವ್ ಮೈಸೂರು ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಜುಲೈ ವರೆಗೂ ಸಾಕಷ್ಟು ರೀತಿಯಲ್ಲಿ ಪರೀಕ್ಷೆ ಮಾಡುತ್ತಿರಲಿಲ್ಲ. ಇದೀಗ ಪ್ರತಿದಿನ 40 ರಿಂದ 50 ಸಾವಿರ ಪರೀಕ್ಷೆ ಮಾಡಲಾಗುತ್ತಿದೆ. ಇದರಿಂದಾಗಿ ರೋಗಿಗಳನ್ನು ಬೇಗನೆ ಗುರುತಿಸಿ ಚಿಕಿತ್ಸೆ ನೀಡಲು ನೆರವಾಗಿದೆ. ಸಕ್ರೀಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ.ಒಮ್ಮೆ ರೋಗಿಯ ಲಕ್ಷಣಗಳು ಉಲ್ಬಣಗೊಳ್ಳದಿದ್ದರೆ, ಚೇತರಿಸಿಕೊಳ್ಳುವ ಸಾಧ್ಯತೆಗಳು ವೇಗವಾಗಿರುತ್ತವೆ. ಹೆಚ್ಚಿನ ಮರುಪಡೆಯುವಿಕೆಗಳೊಂದಿಗೆ, ಸಕ್ರಿಯ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಅವರು ಹೇಳುತ್ತಾರೆ.

ಬೆಂಗಳೂರಿನಲ್ಲಿ ಸಕ್ರೀಯ ಪ್ರಕರಣಗಳ ಸಂಖ್ಯೆಯ ಇಳಿಕೆ ಬಹಳ ಪ್ರಮುಖವಾಗಿದೆ. ಇದರಿಂದಾಗಿ ಕೋವಿಡ್- ಸಾವಿನ ಪ್ರಕರಣಗಳು ಕಡಿಮೆಯಾಗಲಿವೆ. ಹಬ್ಬಗಳ ಸಂದರ್ಭದಲ್ಲಿ ಬೆಂಗಳೂರು ನಿವಾಸಿಗಳು ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದು ಅವರು ಸಲಹೆ ನೀಡಿದರು.

ಬಹು ಹಂತದ ಪ್ರಯತ್ನದಿಂದ ಆರಂಭಿಕ ಹಂತದಲ್ಲಿಯೇ ಹೆಚ್ಚಿನ ಸಂಖ್ಯೆಯ ಪಾಸಿಟಿವ್ ಕೇಸ್ ಗಳನ್ನು ಗುರುತಿಸಲು ನೆರವಾಗಿದೆ ಎಂದು ಬಿಬಿಎಂಪಿ ಸಾರ್ವಜನಿಕ ಆರೋಗ್ಯ ಉಸ್ತುವಾರಿ ಡಿ. ರಂದೀಪ್ ಹೇಳುತ್ತಾರೆ.

ಹೆಚ್ಚಿನ ಸಂಖ್ಯೆಯ ಪರೀಕ್ಷೆಯೊದಿಗೆ ಲಕ್ಷಣವಿರುವ ರೋಗಿಗಳತ್ತ ಗಮನ ಹರಿಸಿದ್ದೇವೆ. ಪರೀಕ್ಷೆ ಹೆಚ್ಚಿಸುವುದರೊಂದಿಗೆ ಸಂಪರ್ಕಿತರನ್ನು ಬೇಗನೆ ಗುರುತಿಸಲಾಗುತ್ತಿದೆ. ಮಾಸ್ಕ್ ಧರಿಸದವರಿಗೆ ದಂಡವನ್ನು ಹೆಚ್ಚಿಸಲಾಗಿದ್ದು, ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸಲಾಗುತ್ತಿದೆ. ಶೇ.65 ರಷ್ಟು ಜನರು ಹೋಮ್ ಐಸೋಲೇಷನ್ ನಲ್ಲಿದ್ದು, ಅವರ ಮೇಲೆ ನಿತ್ಯ ನಿಗಾ ವಹಿಸಲಾಗಿದೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT